ಮುಂಗಾರು ಮುನ್ನೆಚ್ಚರಿಕೆ : ಕೊಡಗು ಚೆಸ್ಕಾಂ 500 ಸಿಬ್ಬಂದಿಗಳ ನಿಯೋಜನೆ

June 13, 2019
10:30 AM

ಮಡಿಕೇರಿ  : ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ ಆರಂಭವಾಗಿದ್ದು, ಈ ಬಾರಿ ಗಾಳಿ ಮಳೆಗೆ ವಿಪತ್ತು ಸಂಭವಿಸಿದರೆ ಅದನ್ನು ಸಮರ್ಥವಾಗಿ ಎದುರಿಸಲು ಚೆಸ್ಕಾಂ ಇಲಾಖೆ ಸಜ್ಜುಗೊಂಡಿದೆ. ಇದಕ್ಕಾಗಿ 500 ಸಿಬಂದಿಗಳನ್ನು  ನಿಯೋಜನೆ ಮಾಡಿದೆ.

Advertisement
Advertisement
Advertisement
Advertisement

ಅಗತ್ಯ ಸಿಬ್ಬಂದಿಗಳು ಮತ್ತು ಸಾಮಾಗ್ರಿಗಳನ್ನು ಸಂಗ್ರಹಿಸಿಡಲಾಗಿದ್ದು, ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ಚೆಸ್ಕಾಂ ಮುಂದಾಗಿದೆ. ಜಿಲ್ಲೆಯ ಕಾಫಿ ತೋಟ ಮತ್ತು ಅರಣ್ಯಗಳ ಒಳಗೆ ವಿದ್ಯುತ್ ಮಾರ್ಗಗಳು ಹಾದು ಹೋಗಿದ್ದು, ಮಳೆಗಾಲದಲ್ಲಿ ಗಾಳಿ ಮಳೆಗೆ ಮರಗಳು ಬಿದ್ದು, ಭೂ ಕುಸಿತ ಉಂಟಾಗಿ ವಿದ್ಯುತ್ ಮಾರ್ಗಕ್ಕೆ ಮೊದಲು ಹಾನಿಯುಂಟಾಗುತ್ತದೆ. ಇದರಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರಿಗೆ ತೊಂದರೆ ಎದುರಾಗುತ್ತದೆ. ಇಂತಹ ತುರ್ತು ಸಂದರ್ಭಗಳಲ್ಲಿ ವಿದ್ಯುತ್ ಲೈನ್‍ಗಳನ್ನು ದುರಸ್ಥಿಪಡಿಸಲು ಸಿಬ್ಬಂದಿಗಳಿಗೆ ಕಷ್ಟ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನವೇ ಚೆಸ್ಕಾಂ ಕಾರ್ಯಪ್ರವೃತ್ತವಾಗಿದ್ದು, ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

Advertisement

ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಕಂಡು ಕೇಳರಿಯದ ಮಳೆಯ ಆರ್ಭಟದಿಂದ ಸಂಭವಿಸಿದ ಜಲ ಪ್ರಳಯ ಮತ್ತು ಭೂಕುಸಿತದ ಸಂದರ್ಭ ಕೊಡಗು ಚೆಸ್ಕಾಂಗೆ ಕೋಟ್ಯಾಂತರ ರೂ. ಹಾನಿ ಸಂಭವಿಸಿತ್ತು. ಪರಿಸ್ಥಿತಿ ತೀರಾ ವಿಷಮಕ್ಕೆ ತಿರುಗಿದರೂ ಕೂಡ ಕೊಡಗು ಜಿಲ್ಲೆಗೆ ನಿರಂತರ ವಿದ್ಯುತ್ ಪೂರೈಸಲು ಚೆಸ್ಕಾಂ ಸಿಬ್ಬಂದಿಗಳು ಶಕ್ತಿ ಮೀರಿ ಪ್ರಯತ್ನಿಸಿದರು. ಹೀಗಾಗಿ ಗ್ರಾಮೀಣ ಭಾಗಗಳನ್ನು ಹೊರತುಪಡಿಸಿದರೆ ನಗರ ಮತ್ತು ಪಟ್ಟಣಗಳಿಗೆ ಕರೆಂಟ್ ಕಟ್‍ನ ದೊಡ್ಡ ತೊಂದರೆ ಎದುರಾಗಿರಲಿಲ್ಲ. ಪರಿಸ್ಥಿತಿ ಸಹಜತೆಯ ಕಡೆ ಮರುಳಿದಾಗ ಜಿಲ್ಲೆಯ ಗ್ರಾಮೀಣ ಭಾಗಗಳಿಗೆ ತುರ್ತಾಗಿ ವಿದ್ಯುತ್ ಸಂಪರ್ಕವನ್ನು ಕಲ್ಪಸಿದ ಚೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕ್ರಮಕ್ಕೆ ರಾಜ್ಯ ಸರಕಾರ ಮತ್ತು ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ಮತ್ತು ಪ್ರಶಂಸೆ ವ್ಯಕ್ತವಾಗಿತ್ತು.

 

Advertisement

ಈ ಬಾರಿಯ ಮಳೆಗಾಲದ ಸವಾಲುಗಳನ್ನು ಎದುರಿಸಲು ಚೆಸ್ಕಾಂನ 350 ಸಿಬ್ಬಂದಿಗಳು, 150 ಗ್ಯಾಂಗ್‍ಮೆನ್‍ಗಳು ಸಹಿತ 14 ವಾಹನಗಳ ಸಹಿತ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಈಗಾಗಲೇ ಕೊಡಗು ಚೆಸ್ಕಾಂನಲ್ಲಿ 350 ಮಂದಿ ಮಾರ್ಗದಾಳುಗಳಿದ್ದು, ಹೆಚ್ಚುವರಿಯಾಗಿ 150 ಗ್ಯಾಂಗ್‍ಮೆನ್‍ಗಳನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರೊಂದಿಗೆ ಎಲ್ಲಾ ಸೆಕ್ಷನ್ ವ್ಯಾಪ್ತಿಯಲ್ಲಿ ಇಲಾಖೆಯ ಲಾರಿ ಹಾಗೂ ವಾಹನಗಳಿದ್ದು,  ತೀರಾ ಹದಗೆಟ್ಟ ರಸ್ತೆಯಲ್ಲೂ ಓಡಾಡಲು  ಸೌಲಭ್ಯ ಇರುವ 14 ಪಿಕ್‍ಅಪ್ ವಾಹನಗಳನ್ನು ಬಳಸಿಕೊಳ್ಳಲು ಚೆಸ್ಕಾಂ ಮುಂದಾಗಿದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ
March 3, 2025
7:42 AM
by: The Rural Mirror ಸುದ್ದಿಜಾಲ
ಕುಡಿಯುವ ನೀರಿನ ಸಮಸ್ಯೆ | ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ
February 28, 2025
8:45 PM
by: ದ ರೂರಲ್ ಮಿರರ್.ಕಾಂ
ಧರ್ಮಸ್ಥಳದಲ್ಲಿ ಶಿವರಾತ್ರಿ ಜಾಗರಣೆ | ಅಹೋ ರಾತ್ರಿ ಶಿವ ಪಂಚಾಕ್ಷರಿ ಪಠಣದೊಂದಿಗೆ ಶಿವರಾತ್ರಿ ಜಾಗರಣೆಗೆ ಚಾಲನೆ
February 27, 2025
12:10 AM
by: The Rural Mirror ಸುದ್ದಿಜಾಲ
ಕಾಡಾನೆ ಹಾವಳಿ ನಿಯಂತ್ರಿಸಲು ಸರ್ಕಾರ 22 ಕೋಟಿ ರೂಪಾಯಿ ಬಿಡುಗಡೆ | ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ಪ್ರಕ್ರಿಯೆಗೆ ಚಾಲನೆ
February 26, 2025
6:40 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror