ಮುಂದಿನ‌ 48 ಗಂಟೆಗಳಲ್ಲಿ ಭಾರಿ ಮಳೆ : ರೆಡ್ ಅಲರ್ಟ್

August 9, 2019
11:10 PM

ಮಂಗಳೂರು: ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ‌‌ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಈಗ ಎಲ್ಲರೂ ಬಿ ಎಲರ್ಟ್ ಇರಬೇಕಾಗಿದೆ. ಏಕೆಂದರೆ ನೇತ್ರಾವತಿ, ಕುಮಾರಧಾರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಜಿಲ್ಲಾಡಳಿತ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಮಳೆಯ ಕಾರಣದಿಂದ ಸಮುದ್ರ ಅಲೆಗಳು 3.2 ರಿಂದ 3.9 ಮೀಟರ್  ಎತ್ತರದಲ್ಲಿದೆ.‌ ಮೀನುಗಾರರು ಸಮುದ್ರಕ್ಕೆ‌ ಇಳಿಯದಂತೆ ಸೂಚಿಸಲಾಗಿದೆ.

ನೇತ್ರಾವತಿ, ಕುಮಾರಧಾರ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮಕ್ಕೆ ಸೂಚಿಸಲಾಗಿದೆ. 13 ಜನರ ಎನ್ ಡಿ ಆರ್ ಎಫ್ ತಂಡವು  ಸುಬ್ರಹ್ಮಣ್ಯ, ಮಂಗಳೂರಿನಲ್ಲಿ‌ ಸನ್ನದ್ಧ  ಸ್ಥಿತಿಯಲ್ಲಿ ಇದೆ.

ಜಿಲ್ಲೆಯಲ್ಲಿ ಗಂಜಿ‌ ಕೇಂದ್ರ ತೆರೆಯಲಾಗಿದ್ದು
ಮಂಗಳೂರಿನಲ್ಲಿ 12, ಬಂಟ್ವಾಳ 2, ಬೆಳ್ತಂಗಡಿ 7, ಪುತ್ತೂರು ,ಮೂಡುಬಿದಿರೆ,ಕಡಬದಲ್ಲಿ ತಲಾ ಒಂದು, ಸುಳ್ಯ ತಾಲೂಕಿನಲ್ಲಿ 2 ಕಡೆ‌  ಕೇಂದ್ರ ತೆರೆಯಲಾಾಗಿದೆ.

ಯಾವುದೇ ‌ತುರ್ತು ಸಹಾಯಕ್ಕೆ ಸಾರ್ವಜನಿಕರು ಇಲಾಖೆಗಳನ್ನು ಸಂಪರ್ಕಿಲು ಕೋರಲಾಗಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಾಲಿನ ದರ ಕನಿಷ್ಠ ₹10 ಹೆಚ್ಚಳಕ್ಕೆ ಕೆಎಂಎಫ್‌ ಮನವಿ – ಹೈನುಗಾರರಿಗೆ ಏನು ಪ್ರಯೋಜನ..? ಗ್ರಾಹಕರಿಗೆ ಎಷ್ಟು ಹೊರೆ..?
September 26, 2026
7:18 AM
by: ದ ರೂರಲ್ ಮಿರರ್.ಕಾಂ
ಬದುಕಿನ “ಬ್ಯಾಗೇಜ್‌” ಇಳಿಸುವ ಸಮಯ ಇದು
September 25, 2026
7:14 PM
by: ಮಹೇಶ್ ಪುಚ್ಚಪ್ಪಾಡಿ
ರೈತರಿಗೆ ವಿದ್ಯುತ್‌ ಶಾಕ್ – ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕಡಿತ- ಪರ್ಯಾಯ ಶಕ್ತಿಯ ಬಗ್ಗೆ ಯೋಚಿಸಲು ಸಕಾಲ
September 25, 2026
1:19 PM
by: ದ ರೂರಲ್ ಮಿರರ್.ಕಾಂ
ಅ.29 ರಿಂದ ನ.11 ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ -12 ದಿನ ಸಾರ್ವಜನಿಕ ದರ್ಶನ
September 25, 2026
12:51 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror