ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಹಿತರಕ್ಷಣಾ ಸಮಿತಿಯ 5 ಜನ ಸದಸ್ಯರಿಗೆ ಸಂಪುಟ ನರಸಿಂಹ ಸ್ವಾಮಿ ಮಠದ ಪರ ವಕೀಲರು ನೋಟೀಸ್ ನೀಡಿದ್ದಾರೆ. ವಿವಾದಗಳು ಇರುವಂತೆಯೇ ಪತ್ರಿಕಾಗೋಷ್ಠಿ ಮೂಲಕ ತಪ್ಪು ಮಾಹಿತಿ ಹರಡುವುದು ಸರಿಯಲ್ಲ ಎಂದು ನೋಟೀಸಿನಲ್ಲಿ ತಿಳಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಭಕ್ತರ ಹಿತರಕ್ಷಣಾ ಸಮಿತಿಯ ಮಹೇಶ್‌ಕುಮಾರ್ ಕರಿಕ್ಕಳ, ಶಿವರಾಮ ರೈ, ಗುರುಪ್ರಸಾದ್ ಪಂಜ, ಪ್ರಶಾಂತ್ ಭಟ್ ಮಾಣಿಲ, ಶ್ರೀನಾಥ್, ಕೆ.ರವಿಪ್ರಸಾದ ಶೆಟ್ಟಿ ಇವರಿಗೆ ಈ ನೋಟೀಸ್ ನೀಡಲಾಗಿದೆ.
ಇದೀಗ ಮತ್ತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಸ್ವಾಮಿ ಮಠದ ನಡುವಿನ ವಿವಾದ ಮತ್ತೆ ತೆರೆದುಕೊಂಡಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel