ಗುತ್ತಿಗಾರು: ಅಚ್ರಪ್ಪಾಡಿ ಕಿ.ಪ್ರಾ.ಶಾಲೆ ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿಗಳ ಕೊರತೆ ಅನುಭವಿಸಿ ಮುಚ್ಚುವ ಹಂತಕ್ಕೆ ತಲುಪಿತ್ತು. ಇದನ್ನು ಮನಗಂಡ ಊರವರು ಶಾಲೆಯನ್ನು ಉಳಿಸಲು ಪ್ರಯತ್ನಿಸಿ 7 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಇಂದು 21 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ.
Advertisement
ಇದೀಗ ಶಾಲೆಗೆ ಕೊಡುಗೈ ದಾನಿಯಾಗಿರುವ ಸೀ ಫುಡ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಜಿ ಜಿ. ಇಬ್ರಾಹಿಂ ( ಉಂಬಾಯಿಚ್ಚ) ವಿದ್ಯಾರ್ಥಿಗಳಿಗೆ ಸುಮಾರು 12 ಸಾವಿರ ಮೌಲ್ಯದ ಪುಸ್ತಕ, ಬ್ಯಾಗ್,ಕೊಡೆ ಹಾಗೂ ಲೇಖನಿ ಸಾಮಾಗ್ರಿಗಳನ್ನು ಕೊಡುಗೆಗಯಾಗಿ ನೀಡಿದ್ದಾರೆ. ಇವರು ಹಲವಾರು ಶಾಲೆ , ಸಂಘಸಂಸ್ಥೆ, ಬಡವರಿಗೆ ಸಹಾಯ ಮಾಡಿ ಸೀ ಫುಡ್ ಉದ್ಯಮದ ಜತೆಗೆ ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
Advertisement
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿ ಶ್ವೇತಾ, ಗ್ರಾ.ಪಂ.ಸದಸ್ಯ ಶಿವಪ್ರಕಾಶ್ ಅಡ್ಡನಪಾರೆ, ಹರೀಶ್ ಅಡ್ಡನಪಾರೆ, ಎಸ್.ಡಿ.ಎಂ.ಸಿ. ಸದಸ್ಯೆ ಪ್ರಶಿತಾ ಶಿವಪ್ರಕಾಶ್ ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement