ಕಾಣಿಯೂರು: ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಮೇ.17 ರಂದು ಸಂಜೆ ಗಂಟೆ 6.30ರಿಂದ ರಾತ್ರಿ 12.00ಗಂಟೆಯ ತನಕ ಶ್ರೀ ನರಸಿಂಹ ಜಯಂತಿಯ ಪ್ರಯುಕ್ತ ಆಹ್ವಾನಿತ ತಂಡಗಳಿಂದ ವಿಶೇಷ ಭಜನಾ ಕಾರ್ಯಕ್ರಮ ನಡೆಯಲಿದೆ.
ಈ ಭಜನಾ ಸೇವೆಯಲ್ಲಿ ಶ್ರೀ ಕಪಿಲೇಶ್ವರ ಭಜನಾ ಮಂಡಳಿ ಚಾರ್ವಾಕ, ಶ್ರೀ ಹರಿ ಭಜನಾ ಮಂಡಳಿ ಪುಣ್ಚಾತ್ತಾರು, ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ಕೆಯ್ಯೂರು, ಶ್ರೀ ಜಲದುರ್ಗ ಭಜನಾ ಮಂಡಳಿ ಪೆರುವಾಜೆ, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಎಣ್ಮೂರು, ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಕಲ್ಲಗದ್ದೆ ಕೊಡಿಯಾಲ, ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ನಾವೂರು ಇಲ್ಲಿಯ ತಂಡಗಳು ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ 8.00ರಿಂದ. 00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಧ್ಯಕ್ಷರಾದ ವಾಸುದೇವ ನಾಯ್ಕ ತೋಟ, ಗೌರವಾಧ್ಯಕ್ಷರಾದ ಚಿದಾನಂದ ಉಪಾಧ್ಯಾಯ ಕಲ್ಪಡ ಮತ್ತು ಕಾರ್ಯದರ್ಶಿ ಜಯಂತ ಅಬೀರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel