ಸುಳ್ಯ: ಅಜ್ಜಾವರ ಗ್ರಾಮದ ಮೇನಾಲ ಶ್ರೀ ಕೃಷ್ಣ ಭಜನಾ ಮಂದಿರದ ನೇತೃತ್ವದಲ್ಲಿ ಸುಳ್ಯ ತಾಲೂಕು ಮಟ್ಟದ ಭಜನಾ ಸ್ಪರ್ಧೆ ಮೇ.26 ರಂದು ನಡೆಯಲಿದ ಎಂದು ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ಶೆಟ್ಟಿ ಮೇನಾಲ ಮತ್ತು ಕಾರ್ಯದರ್ಶಿ ಬಾಲಕೃಷ್ಣ ಪಿ.ಎಸ್. ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಜನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು 25 ಭಜನಾ ತಂಡಗಳಿಗೆ ಭಾಗವಹಿಸಲು ಅವಕಾಶ ನೀಡಲಾಗುವುದು. ಎರಡು ವೇದಿಕೆಯಲ್ಲಿ ಸ್ಪರ್ಧೆ ನಡೆಯಲಿದ್ದು ಪ್ರತಿ ತಂಡಕ್ಕೆ 35 ನಿಮಿಷ ಅವಕಾಶ ನೀಡಲಾಗುವುದು. ಶ್ರೀಕೃಷ್ಣನ ಮತ್ತು ಶ್ರೀರಾಮನ ಒಂದೊಂದು ಭಜನೆ ಸೇರಿ ಕನಿಷ್ಠ ಐದು ಹಾಡುಗಳನ್ನು ಕಡ್ಡಾಯವಾಗಿ ಹಾಡಬೇಕು.
ಪ್ರಥಮ ಬಹುಮಾನ ರೂ.50005, ದ್ವಿತೀಯ ಬಹುಮಾನ ರೂ.3003, ತೃತೀಯ ಬಹುಮಾನ ರೂ.2002 ನೀಡಲಾಗುತ್ತದೆ. ಮೇನಾಲ ಕಾಳಿಕಾ ದುರ್ಗಾ ಪರಮೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ಪದ್ಮನಾಭ ಸ್ವಾಮಿ ಉದ್ಘಾಟಿಸುವರು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಿಟ್ಟಣ್ಣ ರೈ ಮೇನಾಲ, ಸಂಪತ್ ಶೆಟ್ಟಿ, ನಾಗೇಶ್ ಶೆಟ್ಟಿ ಮೇನಾಲ ಉಪಸ್ಥಿತರಿದ್ದರು.