ಗುತ್ತಿಗಾರು: ಮೊಗ್ರ ಶ್ರೀ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದ ವಾರ್ಷಿಕ ಜಾತ್ರಾ ಉತ್ಸವವು ಜ.19 ರಿಂದ ಆರಂಭಗೊಂಡಿದೆ.
ಜ.19 ರಂದು ಮೊಗ್ರದಲ್ಲಿ ದೇವರಿಗೆ ಸಮಾರಾಧನೆ ನಡೆದು ರಾತ್ರಿ ಮಲ್ಕಜೆ ಮಾಳಿಗೆಯಿಂದ ಭಂಡಾರ ಬಂದು ಸೋಮವಾರ(ಜ.20) ಬೆಳಗ್ಗೆ ಉಳ್ಳಾಕುಲ ನೇಮ ನಡೆಯಿತು.
ಜ.20 ರಂದು ಬೆಳಗ್ಗೆ 11 ಗಂಟೆಗೆ ಶ್ರೀ ಕುಮಾರ ನೇಮ ಸಂಜೆ ಪುರುಷ ದೈವದ ನೇಮ, ರಾತ್ರಿ ರುದ್ರಚಾಮುಂಡಿ, ಮಲೆಚಾಮುಂಡಿ ದೈವದ ನೇಮ ನಡೆಯಲಿದೆ. ಜ.21 ರಂದು ಬೆಳಗ್ಗೆ ಭೈರಜ್ಜಿ ನೇಮ ನಡೆಯಲಿದೆ. ಜ.24 ರಂದು ಬೆಳಗ್ಗೆ ಬ್ರಹ್ಮರ ನೇಮ ನಂತರ ರಾಜ್ಯನ್ ದೈವದ ನೇಮ ನಡೆಯಲಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel