ಪಾಲ್ತಾಡು: ಶ್ರೀ ವಿಷ್ಣು ಮಿತ್ರವೃಂದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ 8 ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮ ಮತ್ತು ಕೃಷ್ಣನ ವೇಷ ಸ್ಪರ್ಧೆ ಪಾಲ್ತಾಡು ವಿಷ್ಣುನಗರದಲ್ಲಿ ನಡೆಯಿತು.
ಸಮಾರಂಭವನ್ನು ವಿಜಯ ರೈ ನೆಲ್ಯಾಜೆ ಉದ್ಘಾಟಿಸಿದರು. ರಾಮಣ್ಣ ನಾಯ್ಕ, ಕಾರ್ಯದರ್ಶಿ ದೇವಿಪ್ರಸಾದ್ ಉಪಸ್ಥಿತರಿದ್ದರು.ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಚೈತನ್ಯ ರೈತ ಶಕ್ತಿ ಸಂಘದ ಅಧ್ಯಕ್ಷ ಗಣೇಶ ಶೆಟ್ಟಿ ಕುಂಜಾಡಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸವಣೂರು ಗ್ರಾ.ಪಂ.ಉಪಾಧ್ಯಕ್ಷ ರವಿ ಕುಮಾರ್ ಬಂಬಿಲ, ಶ್ರೀ ವಿಷ್ಣುಮಿತ್ರ ವೃಂದ ಸಮಿತಿ ಅಧ್ಯಕ್ಷ ಪುರಂದರ ಕೆ ಭಾಗವಹಿಸಿದ್ದರು.
ಶಿವಪ್ರಸಾದ್ ಕಾಪಿನಕಾಡು ಸ್ವಾಗತಿಸಿದರು. ಲೋಕೇಶ್ ಪಾಲ್ತಾಡು ವಂದಿಸಿದರು. ಮನೀಷ್ ಕುಮಾರ್ ನಿರೂಪಿಸಿದರು.
ಈ ಸಂದರ್ಭ ಶಾಲಾ ಮಕ್ಕಳಿಗೆ, ಸಾರ್ವಜನಿಕ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿದೆ. ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement