ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮ ದಿನ ಇಂದು : ಈ ದಿನ “ಇಂಜಿನಿಯರ್ ದಿನ”

September 15, 2019
9:52 AM

ಸೆ.15 ರಂದು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮ ದಿನ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಪಾರ ಸೇವೆಯ ನೆನಪಿಗಾಗಿ ಇವರ ಜನ್ಮ ದಿನವನ್ನು ಇಂಜಿನಿಯರ್ ದಿನವಾಗಿ ಆಚರಿಸಲಾಗುತ್ತದೆ. ಇಂಜಿನಿಯರ್ ಎಂದರೆ  ‘ವಿಶ್ವೇಶ್ವರಯ್ಯನವರ ಹಾಗೆ ಇರಬೇಕು’ ಎಂದು ಪ್ರಪಂಚವೇ ಕೊಂಡಾಡಿದ ಭಾರತದ ಅದ್ವಿತೀಯ ಮೇಧಾವಿ ‘ಭಾರತರತ್ನ  ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ’ನವರು. ಇವರು ನಮ್ಮವರು. ನಮ್ಮ ಇಂಜಿನಿಯರ್ ಗಳಿಗೆ ಪ್ರೇರಣೆ. ಹೀಗಾಗಿಯೇ ರಸ್ತೆಯಿಂದ ತೊಡಗಿ ಸೇತುವೆಯವರೆಗೆ ಅವಿರತ ಶ್ರಮದಿಂದ ಸಾಧನೆ ಮಾಡಿದವರು ಇದ್ದಾರೆ. ಈ ಸಾಧನೆಯ ನೆನಪು  ನಮಗೂ ಪ್ರೇರಣೆಯಾಗಲಿ…

Advertisement
Advertisement

ಸೆ.15ರಂದು ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ಮ ದಿನ. ಅವರ ಜನ್ಮದಿನ 15 ಸೆಪ್ಟೆಂಬರ್ 1860.  ತಮ್ಮ ಬಾಲ್ಯದಲ್ಲಿ ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿದ್ದರು. ದೇಶದ ವಿವಿದೆಡೆ ಮತ್ತು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕಾಲದಲ್ಲಿ ಕರ್ನಾಟಕಕ್ಕೆ ಸರ್. ಎಮ್. ವಿ ಕೊಡುಗೆ ಅಪಾರವಾಗಿತ್ತು. ಅವರ ಶಿಸ್ತಿನ ಜೀವನ, ಸಮಯ ಪರಿಪಾಲನೆ, ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಇವೆಲ್ಲಾ ಪ್ರಶ್ನಾತೀತ.  ಇದೆಲ್ಲಾ ಇಂದು ಎಲ್ಲರಿಗೂ ಮಾದರಿಯೂ ಹೌದು.

ಎಳವೆಯಲ್ಲಿಯೇ ತಮ್ಮ ತಂದೆಯನ್ನು ಕಳೆದುಕೊಂಡ ಬಾಲಕ ವಿಶ್ವೇಶ್ವರಯ್ಯ ಅವರು ಕಡು ಬಡತನದ ನಡುವೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಮುಂಬೈ ರಾಜ್ಯದ ಪೂನಾದಲ್ಲಿ 1884 ರಲ್ಲಿ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂಬೈ ಸರಕಾರದಲ್ಲಿ ಸೇವೆಯನ್ನು ಆರಂಭಿಸಿದರು. ವಿಶ್ವೇಶ್ವರಯ್ಯ ಅವರಿಗೆ ಅಂದಿನ ಸರಕಾರವು  ಪೂನಾ, ನಾಸಿಕ್, ಹೈದರಾಬಾದ್ ಮೊದಲಾದ ಕಡೆ ಪ್ರಮುಖ ನೀರಾವರಿ  ಯೋಜನೆಗಳ ಉಸ್ತುವಾರಿಯನ್ನು ವಹಿಸಿತು.

ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಇವರು ವಿಶ್ವೇಶ್ವರಯ್ಯನವರ ಖ್ಯಾತಿಯನ್ನು ಮನಗಂಡು ಅವರ ಸೇವೆಯನ್ನು ಮೈಸೂರಿಗೆ ಬಳಸಿಕೊಳ್ಳಲು ಇಚ್ಛಿಸಿದಾಗ ವಿಶ್ವೇಶ್ವರಯ್ಯನವರು, ಮೈಸೂರು ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ರಾಜ್ಯದ ಸರ್ವಾಂಗೀಣ ಪ್ರಗತಿಗಾಗಿ ನನ್ನ ಸೇವೆ ಮೀಸಲಿರುವುದಾಗಿ ತಿಳಿಸಿ, ಇದಕ್ಕೆ ಒಪ್ಪುವುದಾದರೆ ನನ್ನ ಸೇವೆ ಮೈಸೂರು ರಾಜ್ಯಕ್ಕೆ ಲಭ್ಯವೆಂದು ತಿಳಿಸಿದರು.ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಹ ಸಂಸ್ಥಾನದ ಅಭಿವೃದ್ಧಿ ಕುರಿತು ದೂರದೃಷ್ಟಿ ಹೊಂದಿದ್ದರಿಂದ ವಿಶ್ವೇಶ್ವರಯ್ಯನವರ ಬೇಡಿಕೆಗೆ ಒಪ್ಪಿದರು. ವಿಶ್ವೇಶ್ವರಯ್ಯನವರು 1909ರಲ್ಲಿ ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರೂ, ಇವರು ತಮ್ಮ ವ್ಯಾಪ್ತಿಯನ್ನು ಮುಖ್ಯ ಇಂಜಿನಿಯರ್ ಹುದ್ದೆಗೆ ಸೀಮಿತಗೊಳಿಸದೇ ಮೈಸೂರು ಸಂಸ್ಥಾನದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ರೂಪಿಸುವಲ್ಲಿ ಕಾರಣೀಭೂತರಾದರು.ತಮ್ಮ ಅಪಾರವಾದ ತಂತ್ರಜ್ಞಾನ, ಪ್ರಾಮಾಣಿಕತೆ ಹಾಗೂ ನಿಸ್ವಾರ್ಥ ಕಾರ್ಯತತ್ಪರತೆಯಿಂದಾಗಿ, 1924 ರಲ್ಲಿ  ಅಂದಿನ ಮೈಸೂರು ಸಂಸ್ಥಾನದ ದಿವಾನ್  ಆಗಿ ನಿಯೋಜಿತರಾದರು. ನೀರಾವರಿ ಯೋಜನೆಗಳಲ್ಲಿ  ಸರ್. ಎಂ.ವಿ ಅವರು ಅವಿಷ್ಕರಿಸಿದ  ‘ಜಲಾಶಯಗಳಿಗೆ ಸ್ವಯಂ ಚಾಲಿತ ಗೇಟ್ ಗಳನ್ನು ಅಳವಡಿಸುವ ಪದ್ಧತಿ‘ಯು ವಿಶ್ವಮಾನ್ಯಗೊಂಡು ಅವರಿಗೆ ಈ ಸಾಧನೆಗಾಗಿ   ಪೇಟೆಂಟ್ ಲಭಿಸಿತು. ಪ್ರಸಿದ್ಧ ಕೃಷ್ಣರಾಜಸಾಗರ ಅಣೆಕಟ್ಟಿನ ವಾಸ್ತುಶಿಲ್ಪಿ ಸರ್. ಎಂ.ವಿ.   ಮೈಸೂರಿನ ದಿವಾನರಾಗಿದ್ದ ಕಾಲಾವಧಿಯಲ್ಲಿ.

Advertisement

ತಮ್ಮ ಸಾಧನೆಗಾಗಿ ಬ್ರಿಟಿಷ್ ಸರಕಾರವು ಕೊಡುವ ‘ನೈಟ್ ಹುಡ್ ‘ ಪದವಿಯನ್ನು 1915 ರಲ್ಲಿಯೂ , ಭಾರತ ಸರಕಾರದ ಅತ್ಯುನ್ನತ ಪದವಿಯಾದ ‘ಭಾರತ ರತ್ನ’ವನ್ನು 1955 ರಲ್ಲಿಯೂ ಪಡೆದುಕೊಂಡರು.  ಈಗ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಸರ್. ಎಂ.ವಿ ಅವರು ವಾಸವಿದ್ದ ಮನೆಯು ನವೀಕರಣಗೊಂಡು  ಮ್ಯೂಸಿಯಂ ಆಗಿದೆ. ಅದೇ ಆವರಣದಲ್ಲಿ ಅವರು ಹಿಂದೆ ವಾಸಿಸುತ್ತಿದ್ದ ಹೆಂಚಿನ ಮನೆ ಇದೆ.

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ವಾಯುಭಾರ ಕುಸಿತ | ಕೇರಳದಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ | ಆರು ಜಿಲ್ಲೆಗಳಲ್ಲಿ ಎಲ್ಲೋ ಎಲರ್ಟ್‌ | ರಾಜ್ಯದಲ್ಲೂ ಮಳೆ ಸಾಧ್ಯತೆ |
May 17, 2025
8:27 PM
by: ದ ರೂರಲ್ ಮಿರರ್.ಕಾಂ
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ
ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ
May 16, 2025
9:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group