ಯಶಸ್ವಿಯಾಗಿ ಚೇತರಿಸಿಕೊಳ್ಳುತ್ತಿರುವ ಕುಕ್ಕೆ ಸುಬ್ರಹ್ಮಣ್ಯದ ಆನೆ “ಯಶಸ್ವಿ”

August 16, 2019
9:00 AM

ಸುಬ್ರಹ್ಮಣ್ಯ: ಅನಾರೋಗ್ಯದಿಂದ ಬಳಲುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆನೆ ಯಶಸ್ವಿಗೆ ಗುರುವಾರ ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗಿದೆ. ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದೆ.

Advertisement

ನಾಗರಹೊಳೆ ಅಭಯಾರಣ್ಯದ ದುಬಾರೆ ವನ್ಯಸಂರಕ್ಷಣೆ ವಿಭಾಗದ ತಜ್ಞ ವೈದ್ಯ ಡಾ. ಶೆಟ್ಟಿಯಪ್ಪ ಆಗಮಿಸಿ ಶೆಡ್‍ನಲ್ಲಿರುವ ಆನೆಯ ಆರೋಗ್ಯ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿದರು. ಗುತ್ತಿಗಾರು ಪಶುವೈದ್ಯ ಕೇಂದ್ರದ ವೈದ್ಯ ಡಾ.ವೆಂಕಟಾಚಲಪತಿ ಸಹಕಾರದಲ್ಲಿ ಆನೆಗೆ ಚಿಕಿತ್ಸೆ ನೀಡಲಾಯಿತು. ಆನೆಯು ಅಜೀರ್ಣದಿಂದ ಬಳಲುತ್ತಿದ್ದು ತಿಂದ ಆಹಾರ ಜೀರ್ಣವಾಗುತಿಲ್ಲ. ದೇಹ ಉಷ್ಣತೆಯೂ ಅಧಿಕವಾಗಿದ್ದು ಆಹಾರ ಜೀರ್ಣವಾಗುತಿಲ್ಲ. ತಿಂದ ಆಹಾರ ಹೊಟ್ಟೆಯಲ್ಲಿ ಕರಗದೆ ಸೊಪ್ಪುವಿನ ನಾರು ಲದ್ದಿ ಜತೆ ಸುತ್ತಿಕೊಂಡು ಲದ್ದಿ ಹಾಕಲು ಸಾಧ್ಯವಾಗುತ್ತಿಲ್ಲ ಎಂದು  ಆನೆಯ ಆರೋಗ್ಯ ಪರೀಕ್ಷಿಸಿದ ವೈದ್ಯರು ತಿಳಿಸಿದರು. ಈಗ  ಆಹಾರ ಜೀರ್ಣವಾಗಲು ಔಷಧಿ ನೀಡಲಾಗಿದೆ. ದೇಹದ ಉಷ್ಣಾಂಶ ಕಡಿಮೆಗೊಳಿಸಲು  ಎಳನೀರು ಗುರುವಾರ  ನೀಡಲಾಗಿದೆ. ದೇಹದಲ್ಲಿ ನೀರಿನಂಶ ಹೆಚ್ಚಿಸಲು ತುಸು ಬೆಚ್ಚಗಿನ ನೀರು ಕುಡಿಸಲಾಗುತ್ತಿದೆ. ಜತೆಗೆ ಮೃದು ಆಹಾರವನ್ನು ನೀಡಲಾಗುತ್ತಿದೆ. ಆನೆಯು ಸ್ವಲ್ಪವೇ ಚೇತರಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಚಿಕಿತ್ಸೆ ಮುಂದುವರೆಸಲಾಗುತ್ತಿದೆ.

ಆನೆಯ ಆರೋಗ್ಯ ಸುಧಾರಣೆಗೆ ಸಾಕಷ್ಟು ಕಾಳಜಿ ವಹಿಸಿ ಶ್ರಮ ವಹಿಸಲಾಗುತ್ತಿದೆ ಎಂದು ಕಳೆದ ನಾಲ್ಕು ದಿನಗಳಿಂದ ಹಗಲು ರಾತ್ರಿ ಶೆಡ್‍ನಲ್ಲೆ ಇದ್ದು ಆನೆಗೆ ಚಿಕಿತ್ಸೆ ನೀಡುತ್ತಿರುವ ಪಶುವೈದ್ಯ ಡಾ.ವೆಂಕಟಾಚಲಪತಿ ತಿಳಿಸಿದ್ದಾರೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಕ್ತರಿಗಾಗಿ ತೆರೆದ ಕೇದಾರನಾಥ ದ್ವಾರ | ಮೊದಲ ದಿನ ಸುಮಾರು 10 ಸಾವಿರ ಜನರಿಂದ ದೇವರ ದರ್ಶನ
May 2, 2025
9:13 PM
by: The Rural Mirror ಸುದ್ದಿಜಾಲ
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ | ಆರೋಪಿಗಳ ಪತ್ತೆಗೆ 4  ಪ್ರತ್ಯೇಕ ತಂಡ ರಚನೆ | ದಕ್ಷಿಣ ಕನ್ನಡದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಬದ್ಧ
May 2, 2025
8:59 PM
by: ದ ರೂರಲ್ ಮಿರರ್.ಕಾಂ
ಆನೆ-ಮಾನವ ಸಂಘರ್ಷ ನಿಯಂತ್ರಣಕ್ಕೆ ಕ್ರಮ | ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ
May 2, 2025
8:50 PM
by: The Rural Mirror ಸುದ್ದಿಜಾಲ
ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಅವಧಿ ವಿಸ್ತರಣೆ
May 2, 2025
8:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group