ಯುನೈಟೆಡ್‌ ಎಂಪವರ್ಮೆಂಟ್ ಎಸೋಸಿಯೇಶನ್ ಜಿಲ್ಲಾದ್ಯಕ್ಷರಾಗಿ ಅನ್ಸಾರ್ ಬೆಳ್ಳಾರೆ ನೇಮಕ

December 1, 2019
9:39 AM

ಸುಳ್ಯ: ಕ್ರೀಡಾ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಹಾಗೂ ಕ್ರೀಡಾ ಕ್ಷೇತ್ರಕ್ಕೆ ಸಂಭಂದಿಸಿದಂತೆ ಹಲವಾರು ಉದ್ದೇಶಗಳನ್ನಿಟ್ಟು ರಾಜ್ಯಮಟ್ಟದಲ್ಲಿ ಸ್ಥಾಪನೆಗೊಂಡ ಯುನೈಟೆಡ್‌ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಸುಳ್ಯ ಜಿಲ್ಲಾ ಘಟಕವನ್ನು ನ.29 ರಂದು ಅಸ್ತಿತ್ವಕ್ಕೆ ತರಲಾಯಿತು.

Advertisement
ಕಲಂದರ್ ಎಲಿಮಲೆ

ನಗರದ ಮೆಕ್ಸಿಕೊ ಸಭಾಂಗಣದಲ್ಲಿ ಯುನೈಟೆಡ್ ಎಂಪವರ್ಮೆಂಟ್ ಎಸೋಸಿಯೇಶನ್ ಸುಳ್ಯ ಜಿಲ್ಲಾ ಘಟಕದ ಅದ್ಯಕ್ಷರಾಗಿ ಮಂಗಳೂರಿನ ಪ್ರತಿಷ್ಠಿತ ಸಂಸ್ಥೆಯಯಾದ ಎಂ ಫ್ರೆಂಡ್ಸ್ ಸದಸ್ಯರು, ಪ್ರಮುಖ ಸಂಘಟಕರು, ನ್ಯೂ ಫ್ಲಾಷ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಬೆಳ್ಳಾರೆ ಮತ್ತು ಜೈ ಭಾರತ್ ಸ್ಪೋರ್ಟ್ಸ್ ಕ್ಲಬ್ ಬೆಳ್ಳಾರೆ ಇದರ ಸಕ್ರಿಯ ಸದಸ್ಯರೂ, ಬರಹಗಾರರೂ , ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇದರ ಮಾಜಿ ಸದಸ್ಯರೂ ಆಗಿರುವ ಅನ್ಸಾರ್ ಬೆಳ್ಳಾರೆಯವರನ್ನು ನೇಮಿಸಲಾಯಿತು.

ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಗೊಳ್ತಮಜಲು ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಸ್ಥೆಯ ಧ್ಯೇಯ ಉದ್ದೇಶದ ಸಂಪೂರ್ಣ ಮಾಹಿತಿಯನ್ನು ನೀಡಿದರು.
ರಾಜ್ಯ ಸಮಿತಿ ಸದಸ್ಯ ಇಬ್ರಾಹಿಂ ಗೋಳಿಕಟ್ಟೆ ಪ್ರಸ್ತಾವಿಕ ಮಾತನಾಡಿದರು. ಸುಳ್ಯ ಸಮಿತಿ ರಚನೆ ಉಸ್ತುವಾರಿ ಸಿರಾಜ್, ಇಕ್ಬಾಲ್ ಹಸನ್, ಪಾರೂಕ್ ಪುತ್ತೂರು, ಶರೀಫ್ ಪುತ್ತೂರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸುಳ್ಯ ಘಟಕಕ್ಕೆ ಅಧ್ಯಕ್ಷರಾಗಿ ಅನ್ಸಾರ್ ಬೆಳ್ಳಾರೆ, ಉಪಾಧ್ಯಕ್ಷರಾಗಿ ಆರ್ ಬಿ ಬಶೀರ್, ರಶೀದ್ ಜಟ್ಟಿಪಳ್ಳ ಕೋಶಾಧಿಕಾರಿಯಾಗಿ ಹಂಝ ಕಾತೂನ್ , ಪ್ರ. ಕಾರ್ಯದರ್ಶಿಯಾಗಿ ಕಲಂದರ್ ಎಲಿಮಲೆ, ಜೊತೆ ಕಾರ್ಯದರ್ಶಿ ಶಫೀಕ್ ಕೊಂಯಿಗಾಜೆ, ಬಶೀರ್ ಬೆಳ್ಳಾರೆಯವರನ್ನು ನೇಮಿಸಲಾಯಿತು. ಕ್ರೀಡಾ ಕನ್ವವಿನರಾಗಿ ಝಾಕೀರ್ ಡಿ ಎಂ, ಕ್ರೀಡಾ ಕಾರ್ಯದರ್ಶಿ ಉಸ್ಮಾನ್ ಜಯನಗರ, ಬಾತೀಶ ಗಾಂಧಿನಗರ, ಕ್ರಿಕೆಟ್ ಸಂಯೋಜಕರಾಗಿ ಅನ್ಸಾಫ್ ಬೆಳ್ಳಾರೆ, ವಾಲಿಬಾಲ್ ತಾಜುದ್ದೀನ್ ಅಜ್ಜಾವರ, ಪುಟ್ಬಾಲ್ ಮುನಾಫರ್, ಫರೀದ್ ಶಿಲ್ಪಾ, ಕಬಡ್ಡಿ ಸಿರಾಜುದ್ದೀನ್‌ ಪೈಚಾರ್, ಸಂಶುದ್ದೀನ್ ಕೆ.ಎಂ, ಶಟ್ಲ್ ಬ್ಯಾಡ್ಮಿಂಟನ್ ಅಬ್ದುಲ್ ಖಾದರ್ ಜನಪ್ರಿಯ ಇವರನ್ನು ನೇಮಿಸಿದರೆ, ಇತರ ಕ್ರೀಡೆಗಳಿಗೆ ರಫೀಕ್ ಬಿಎಂಎ, ಯಹ್ಯಾ ಬೆಳ್ಳಾರೆ, ನಾಸೀರ್ ಬಾರ್ಪಣೆಯವರನ್ನುಆಯ್ಕೆಮಾಡಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಸಮಿತಿ ಸದಸ್ಯರಾದ ತಾಜುದ್ದೀನ್ ಸ್ವಾಗತಿಸಿ ಶರೀಫ್ ಕಂಠಿ ವಂದಿಸಿದರು. ಪತ್ರಕರ್ತ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 04.07.2025| ರಾಜ್ಯದ ಕರಾವಳಿ ಭಾಗದಲ್ಲಿ ಏಕೆ ಉತ್ತಮ‌ ಮಳೆಯಾಗುತ್ತಿದೆ..? | ಇಂದೂ‌ ಸಾಮಾನ್ಯ ಮಳೆ
July 4, 2025
12:56 PM
by: ಸಾಯಿಶೇಖರ್ ಕರಿಕಳ
ಪುತ್ತೂರು ಪ್ರಕರಣ | ಶಾಸಕ ಅಶೋಕ್‌ ಕುಮಾರ್‌ ರೈ ಅವರ ಬರಹ ಇದು… | ನಾವೀಗ ಆಕೆಗೆ ನೀಡಬೇಕಾಗಿರುವುದು ಧೈರ್ಯ ಮತ್ತು ಸ್ಥೈರ್ಯ
July 4, 2025
9:45 AM
by: ದ ರೂರಲ್ ಮಿರರ್.ಕಾಂ
ರಾಸಾಯನಿಕ ಉದ್ಯಮ | ಭಾರತವು ರಾಸಾಯನಿಕಗಳ ಪ್ರಮುಖ ಉತ್ಪಾದಕ ರಾಷ್ಟ್ರ
July 4, 2025
7:36 AM
by: The Rural Mirror ಸುದ್ದಿಜಾಲ
ಬುಧ ಮತ್ತು ಶನಿ ಕಾಟದಿಂದ ಈ ರಾಶಿಯವರು ಸ್ವಲ್ಪ ಜೋಪಾನವಾಗಿರಬೇಕು
July 4, 2025
7:24 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group