ಯುರೇಕಾ…… ಯುರೇಕಾ…..! ಏನಿದು ಯುರೇಕಾ…?

August 26, 2020
10:39 AM

ಹೌದು, ನನಗೂ ಜ್ಞಾನೋದಯವಾಯಿತು….
“ನಮ್ಮ ಮನಸ್ಸಿಗೆ ಬಂದದ್ದನ್ನೆಲ್ಲಾ ಕೂಡಲೇ ಅಭಿವ್ಯಕ್ತಗೊಳಿಸಬಾರದು”.  ಹೌದಲ್ಲಾ…. ದಾಸರು ಹಾಡಿ ಹಾಡಿ ದಾರಿ ತೋರಿದ್ದಾರೆ….”ತಾಳುವಿಕೆಗಿಂತನ್ಯ ತಪವು ಇಲ್ಲಾ” ಅಂತ…. ಆದರೆ ಅದು ಸಾಮಾನ್ಯನಾದ ನನ್ನ ತಲೆಗೆ ಹೋಗಲು ಹೀಗೊಂದು ಸಂದರ್ಭ ಬಂತು.

Advertisement
Advertisement

ನಮ್ಮ ಕೃಷಿಕರದ್ದೇ ಆದ  “Aracanut Growers” ವಾಟ್ಸಾಪ್ ಗ್ರೂಪಲ್ಲಿ ,ನಾನೋದಿದ ,ಡಾಕ್ಟರ್ ಶ್ರೀಧರ ಭಟ್ ಬಡೆಕ್ಕಿಲ ಅವರ “ವಿಜ್ಞಾನ ಪಥ “ ಪುಸ್ತಕದ ನ್ಯೂಟನ್ ಬಗೆಗಿನ ಲೇಖನದ ಒಂದು ಪುಟವನ್ನು ಉಲ್ಲೇಖಿಸಿ ಈ ನ್ಯೂಟನ್ ನಿಯಮಗಳು ಕೃಷಿಕರಾದ ನಮಗೂ ಅನ್ವಯ ಎಂದು ಪೋಸ್ಟ್‌ ಮಾಡಿದೆ.  ಮಾಮೂಲಿನಂತೆ,ಇವನದೊಂದು ಹೊಸ ರಾಗ ಎಂಬಂತೆಯೋ ಏನೋ ಗ್ರೂಪ್ ಮೌನವಾಗಿತ್ತು. ಹಾ…. ಇಂತಿರುವಾಗ ವಸಂತ ಮಾಲವಿ ಎಂಬವರು ಹೇಗೆ ಈ ವಿಚಾರ ಕೃಷಿಗೆ ಅನ್ವಯ ತಿಳಿಸಿ ಅಂದರು.ಅರ್ಧ ಗಂಟೆಯ ಮೇಲೆ ಉತ್ತರಿಸುತ್ತೇನೆಂದ ನನಗೆ ಇದು ಎಡವಟ್ಟಾಯಿತು ಎಂದು ನಿಧಾನವಾಗಿ ಮನಸಿನ ಮೂಲೆಯಲ್ಲಿ ತೋಚಿತು,ಕಾರಣ ವಿವರಣೆ ಸುಲಭವಲ್ಲ,ಆಲೋಚಿಸಿ ಮುಂದುವರಿಸಬೇಕು. ಹಾಗೇ ಪುನಃ ಅವರಲ್ಲಿ ಎರಡು ದಿನದ ಸಮಯಾವಕಾಶ ಕೊಡಿ ಎಂದು ಕೇಳುವಂತಾಯಿತು.

ಹಾಂ … ದುಡುಕಲೇ ಬಾರದು…. ಕಂಡದ್ದೆಲ್ಲಾ ಮಾತು- ಬರಹ ಮುಂತಾಗಿ ಹೊರಹಾಕಿದರೆ ಅದಕ್ಕೆ ತಕ್ಕ ವಿವರಣೆ ನಮ್ಮಲ್ಲಿರಬೇಕು…. ಇಲ್ಲಾಂದ್ರೇ… ಹೀಗೊಂದು ಬರವಣಿಗೆಯ ಪರಿಸ್ಥಿತಿ ಬಂದೀತು. ತೊಂದರೆ ಏನಿಲ್ಲ…” Idle mind is devils workshop ” ಅಂತೆ. ಅದಕ್ಕೇ ಹೇಳಿದ್ದಿರಬಹುದು ಸುಮ್ಮನೆ ಕೂರಬಾರದು. ಏನಿಲ್ಲಾಂದ್ರೂ ಓದುತ್ತಾ,ಬರೆಯುತ್ತಾ,ಏನಾದರೊಂದು ಚಟುವಟಿಕೆ ಮಾಡುತ್ತಾ ಕೂರಬೇಕಂತೆ. ಹಾಗಾಗಿ ವಸಂತ ಮಾಲವಿಯವರ ಕೇಳಿಕೆ ನನ್ನ ಈ ಬರಹಕ್ಕೊಂದು ದಿಕ್ಕನ್ನು ತೋರಿತು….ಇಷ್ಟು ಬರೆದರೆ ಸಾಕಾಗೋದಿಲ್ಲ..ಇನ್ನೊಂದಿಷ್ಟು ಪೂರ್ವ ಪೀಠಿಕೆ ಬೇಕಲ್ಲಾ…ಹುಮ್…

ಕೇಳಿ…..!

ಡಾ.ಶ್ರೀಧರ ಭಟ್‌,ಬಡೆಕ್ಕಿಲ

Advertisement

ಇದಕ್ಕೆಲ್ಲ ಕಾರಣ Aracanut Growers ಬಳಗದಲ್ಲಿರುವ ಡಾಕ್ಟರ್ ಶ್ರೀಧರ ಭಟ್ ಅವರ “ವಿಜ್ಞಾನ ಪಥ “ ಪುಸ್ತಕದ ಲೇಖನ ಮಾಲೆ. ಅಂದಕಾಲತ್ತಿಲ್ ನಾನು ವಿವೇಕಾನಂದ ಕಾಲೇಜು  ವಿದ್ಯಾರ್ಥಿ. ಡಾಕ್ಟರ್ ಶ್ರೀಧರ ಭಟ್ ರಸಾಯನ ಶಾಸ್ತ್ರ ಪ್ರಾಚಾರ್ಯರು. ನನಗೂ ಅವರಿಗೂ ಒಂದಿನಿತೂ ಸಂಭಂಧವೇ ಇರಲಿಲ್ಲ. ಶ್ರೀಧರ ಭಟ್ ಅವರು ಶಿಸ್ತಿನ ಸಿಪಾಯಿ. ನೀಟ್ ಡ್ರೆಸ್ ಇಸ್ತ್ರೀಕರಿಸಿದ ಪ್ಯಾಂಟ್ ಶರ್ಟ್ ,ಮೇಲಿಂದ ಟೈ. ಕಾಲೇಜಿನ ಕಾರಿಡಾರಲ್ಲಿ ಅವರ ಬೂಟುಗಾಲಿನ ಶಬ್ದ ಈಗಲೂ ಕಿವಿಯ ಸಂದಿನಲ್ಲಿ ಕೇಳಿದಂತಾಗುತ್ತಿದೆ. ಶಾಂತ ಮುಖ ಮುದ್ರೆ, ಅದಕ್ಕೆ ಶೋಭಿಸುವಂತೆ ಮುಖದ ಅಂಚಲ್ಲೊಂದು ಕಿರುನಗೆ. ಇದು ನಾನಾಗ ಕಂಡ ಅವರ ಚಿತ್ರಣ. ಆದರೆ ಜೀವನದ ಯಾವುದೇ ಹಂತದಲ್ಲೂ,ನಾಲ್ಕು ಗೋಡೆಗಳ ಹೊರಗೂ ನಾವೆಲ್ಲರೂ ಪರಸ್ಪರ ಗುರು ಶಿಷ್ಯರಾಗ ಬಹುದಂತೆ….. ಅಂತೆಯೇ..  ನಾನೀಗ ಡಾಕ್ಟರ್ ಶ್ರೀಧರ ಭಟ್ ಅವರ ಶಿಷ್ಯ.  ಅವರ ವಿಜ್ಞಾನ ಪಥ ಓದುತ್ತಾ ಓದುತ್ತಾ ಅವರಲ್ಲಿ ವಿಚಾರಗಳನ್ನು ಹಂಚಿಕೊಳ್ಳುತ್ತಾ ,ನ್ಯೂಟನರ ಬಗೆಗಿನ ಲೇಖನ ಓದುತ್ತಾ ,ನ್ಯೂಟನರ ಸಿದ್ದಾಂತಗಳು ನಿತ್ಯ ಜೀವನಕ್ಕೂ ಅನ್ವಯಿಕ ಎನಿಸಿತು…. ಗುರುಗಳೊಂದಿಗೆ ಹಂಚಿಕೊಂಡೆ… ಸರಿಯಾಗಿದೆ ಎಂದರು.ಕೂಡಲೇ ಅಲ್ಲಿಂದ ಎತ್ತಿ Aracanut Growers ಗ್ರೂಪಿಗೆ ಹಾಕಿಬಿಟ್ಟೆ.( ವಿಜ್ಞಾನ ಪಥ ಓದಲೇ ಬೇಕಾದ ಪುಸ್ತಕ… ಇದು ಕೇವಲ ವಿಜ್ಞಾನದ ಹೊತ್ತಗೆಯಲ್ಲ, ಇದು ಅದರನ್ನೂ ಮೀರಿದ ತತ್ವ ಬೋಧೆಯೂ ಹೌದು. ಒಳಹೊಗುವ ಒಳಗಣ್ಣು ಬೇಕಷ್ಟೆ.)

ಇರಲಿ…

ಮೇಲಿನ ಫೊಟೋದಲ್ಲಿರುವ ನ್ಯೂಟನ್ ನಿಯಮಗಳ ನಿತ್ಯ ಕೃಷಿ,ಜೀವನದಲ್ಲಿ ಅನ್ವಯಿಕ ವಿವರ ನಾನು ಈ ರೀತಿ ಕಂಡುಕೊಂಡೆ.(ಕೆಳಗಿನ ವಿವರಣೆ ಓದುವಾಗ ಅನುಕ್ರಮವಾಗಿ ಮೇಲಿನ ಪೊಟೋದಲ್ಲಿರುವ ನಿಯಮಗಳನ್ನೂ ಓದಿಕೊಳ್ಳಿ.)

1.ಜಡತ್ವ ಮತ್ತು ಹೊರಗಿನ ಶಕ್ತಿ….

Advertisement

ಕೃಷಿಯಲ್ಲಿ ನಿರಂತರತೆ ಇದ್ದಾಗ ಎಲ್ಲಾ ಸಲೀಸು….ಜಡವಾಗಿದ್ದು ,ಹೊರಟಾಗ ಮುಗ್ಗರಿಸಲು ಕಾರಣವಾಗುತ್ತದೆ. ತೋಟದ ಕೆಲಸ ಅಥವಾ ನಮ್ಮ ನಮ್ಮ ಕೆಲಸಗಳನ್ನು ಮಾಡುತ್ತಾ ಇದ್ದಾಗ ಅದು ಸರಾಗವಾಗಿ ನಡೆಯುತ್ತಿರುತ್ತದೆ. ಆದರೆ ನಾವು ಉದಸೀನರಾಗಿ ,ಅಸಡ್ಡೆಯಿಂದಿದ್ದು….ನಮ್ಮ ಹಿರಿಯರ ಒತ್ತಾಸೆಗಾಗಿ ಮುನ್ನುಗ್ಗಿದಾಗ ಎಡವೂದು ಸಹಜ. ಅಂದರೆ ನಿತ್ಯವೂ ಅಡಿಕೆ ಹೆಕ್ಕುತ್ತಾ ಇದ್ದರೆ ಸೊಂಟ ನೋವೂ ಇಲ್ಲ,ಬೆನ್ನು ನೋವೂ ಇಲ್ಲ…ಒಮ್ಮೆಗೇ ಹೊರಗಿನ ಬಲ ಪ್ರಯೋಗದಿಂದ ಅಂದರೆ ಒತ್ತಾಸೆಗಾಗಿ ಅಡಿಕೆ ಹೆಕ್ಕಿದಾಗ ಸೊಂಟ ನೋವು,ಬೆನ್ನು ನೋವು ಬರುವುದು ಸಾಮಾನ್ಯ.

2. ಚಲನೆಯಲ್ಲಿ ಇರುವ ವಸ್ತುವಿನ ಮೇಲೆ ಶಕ್ತಿ ಪ್ರಯೋಗ ಮಾಡುತ್ತಾನೇ ಇದ್ದರೆ ವೇಗ ವರ್ಧಿಸುತ್ತದೆ….

ಹೌದಲ್ಲಾ…. ತೋಟಕ್ಕೆ ಹೋಗಿ ನಿತ್ಯ ನಮ್ಮ ಕೆಲಸಗಳನ್ನು ಮಾಡಿದಾಗ ತೋಟ ದಿನೇ ದಿನೇ ಉತ್ತಮ ಸ್ಥಿತಿಗೇರುವುದು ಸತ್ಯವಲ್ಲವೇ….

3.ಪ್ರತಿಯೊಂದು ಕ್ರಿಯೆಗೂ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ….

ಸರಿ…ಜೀವನದಲ್ಲೂ ಹಾಗೇ…ನಾವು ಹೇಗಿರುತ್ತೇವೋ ಅಂತೆಯೇ ನಮ್ಮ ಪರಿಸರವೂ…ಅಂದರೆ ಸಮಾಜ ಎಂಬುದು “Looking Glass Self”….ನಮ್ಮ ಕ್ರಿಯೆಯ ಪ್ರತಿಫಲಕ ಅಷ್ಟೇ… ಹಾಗಾಗಿ ನಾವು ಕೃಷಿಯಲ್ಲಿ/ಜೀವನದಲ್ಲಿ ಸದಾ ಧನಾತ್ಮಕವಾಗಿ ಆಲೋಚಿಸುತ್ತಿರಬೇಕು. 

Advertisement

ಇಷ್ಟು ವಿಚಾರಗಳು ಮನದಲ್ಲಿ ಬರಲು ಕಾರಣ ವಸಂತ ಮಾಳವಿಯವರು…ನನ್ನ ಕ್ರಿಯೆಗೆ ಅವರ ಪ್ರತಿಕ್ರಿಯೆ ಮತ್ತು ಈ ಒಂದು ಬರಹಕ್ಕೆ ಕಾರಣವಾಯ್ತು.

ಮನದಾಳದಲ್ಲಿ ಸದಾ ಧ್ಯಾನಿಸುತ್ತಿರುವ ವಿಷ್ಣು ಸಹಸ್ರನಾಮದ…ಸಾಲುಗಳ ಮದ್ಯೆ..
“ತತ್ತ್ವಂ ತತ್ವ ವಿದೇಕಾತ್ಮಾ ಜನ್ಮ ಮೃತ್ಯು ಜರಾತಿಗಃ”…ಅಂದರೆ
ಭಗವಂತ ಎಂದರೆ ವಿಜ್ಞಾನ,ವಿಜ್ಞಾನ ಅಂದರೆ ತತ್ವ, ಜ್ಞಾನದ ಕಡಲು. ಅಂತಹ ಭಗವಂತನನ್ನು,ತತ್ವವನ್ನು ಹುಡುಕಿ ಅನುಭವಿಸಬೇಕಂತೆ.ಕಣ್ಣಿಗೆ ಕಾಣುವವನಲ್ಲ….ಮನಸಲ್ಲೇ ಅನುಭೂತಿಸಬೇಕು.ಜನ್ಮ ಮೃತ್ಯು ಷಡಾತ್ಮಗಳನ್ನು ದಾಟಿದ ಅನಂತನೇ ಭಗವಂತ …ಅವನೇ ವಿಜ್ಞಾನ,ಅದೇ ತತ್ವ.
ಅಷ್ಟೇ.

# ಸುರೇಶ್ಚಂದ್ರ  ತೊಟ್ಟೆತ್ತೋಡಿ , ಕಲ್ಮಡ್ಕ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ವಾಯುಭಾರ ಕುಸಿತ | ಕೇರಳದಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ | ಆರು ಜಿಲ್ಲೆಗಳಲ್ಲಿ ಎಲ್ಲೋ ಎಲರ್ಟ್‌ | ರಾಜ್ಯದಲ್ಲೂ ಮಳೆ ಸಾಧ್ಯತೆ |
May 17, 2025
8:27 PM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಹಲಸಿನ ಹಣ್ಣಿನ ಜಾಮ್
May 17, 2025
8:00 AM
by: ದಿವ್ಯ ಮಹೇಶ್
ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?
May 17, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ

You cannot copy content of this page - Copyright -The Rural Mirror

Join Our Group