ಯುವ ಜನತೆ ನಾಡಿನ ಅಭಿಮಾನ ಸ್ತಂಭಗಳಾಗಬೇಕು: ನಾಯರ್ ಕೆರೆ

October 21, 2019
12:08 PM

ಬೆಳ್ಳಾರೆ: ಯುವ ಜನತೆ ಸಮಾಜವನ್ನು ಸರಿ ದಾರಿಗೆ ಮುನ್ನಡೆಸುವ, ಅದಕ್ಕಾಗಿ ಪ್ರಕಾಶಿಸುವ ಅಭಿಮಾನ ಸ್ತಂಭಗಳಾಗಬೇಕು ಎಂದು ಪತ್ರಕರ್ತ ದುರ್ಗಾಕುಮಾರ್ ನಾಯರ್‍ಕೆರೆ ಹೇಳಿದರು.

ಲಯನ್ಸ್ ಕ್ಲಬ್ ಪಂಜ ಇದರ ಆಶ್ರಯದಲ್ಲಿ ಬೆಳ್ಳಾರೆಯ ಡಾ. ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಇದರ ಸಹಯೋಗದಲ್ಲಿ ನಡೆದ ಯುವ ಸಬಲೀಕರಣ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಯುವ ಜನತೆ ನಿಸ್ತೇಜತೆ ಮತ್ತು ನಿಶ್ಶಬ್ದತೆಯಿಂದ ಹೊರಬಂದು ಆರೋಗ್ಯಪೂರ್ಣ ಸಮಾಜಕ್ಕೆ ತಮ್ಮ ಕ್ರಿಯಾತ್ಮಕ ಕೊಡುಗೆ ನೀಡುವಂತಾಗಬೇಕು. ಅಧ್ಯಯನಶೀಲರಾಗಿ ಜಗತ್ತಿನ ವರ್ತಮಾನಗಳನ್ನು ತಿಳಿದುಕೊಳ್ಳಬೇಕು. ಯಶಸ್ಸಿಗೆ ಅಡ್ಡದಾರಿಗಳಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಪ್ರೀತಿಯ ಸಮಾಜ ಕಟ್ಟಬೇಕು ಎಂದು ನಾಯರ್‍ಕೆರೆ ಹೇಳಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಸುರೇಶ್‍ಕುಮಾರ್ ನಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ಸಬಲೀಕರಣ ನಮ್ಮ ರಾಜ್ಯಪಾಲರ ಕಾರ್ಯಕ್ರಮವಾಗಿದ್ದು, ಯುವ ಜನತೆ ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆಯಬೇಕು ಎಂದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ ನಿಕಟಪೂರ್ವಾಧ್ಯಕ್ಷ ತುಕರಾಮ ಏನೆಕಲ್ ಉಪಸ್ಥಿತರಿದ್ದರು. ಪ್ರಾಂಶುಪಾಲ ರಾಘವ ಎನ್. ಸ್ವಾಗತಿಸಿ, ಲಯನ್ಸ್ ಕ್ಲಬ್ ಕೋಶಾಧಿಕಾರಿ ಕುಸುಮಾಧರ ಕೆಮ್ಮೂರು ವಂದಿಸಿದರು. ಕಾರ್ಯದರ್ಶಿ ಶಶಿಧರ ಪಳಂಗಾಯ ಕಾರ್ಯಕ್ರಮ ನಿರೂಪಿಸಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಾಳುಮೆಣಸು ಬೆಳೆಗಾರರಿಗೆ ಸಿಹಿ ಸುದ್ದಿ – ಜೂನ್ ಅಂತ್ಯದೊಳಗೆ ಪೆಪ್ಪರ್ ಫ್ಯೂಚರ್ಸ್ ಮರುಪ್ರಾರಂಭಕ್ಕೆ NCDEX ಸಜ್ಜು
June 12, 2026
7:09 AM
by: ದ ರೂರಲ್ ಮಿರರ್.ಕಾಂ
ಕೇರಳಂನಲ್ಲಿ ಶಿಗೆಲ್ಲಾ ಆತಂಕ – ಕೊಲ್ಲಂನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ದೃಢ, ಆರೋಗ್ಯ ಇಲಾಖೆ ಅಲರ್ಟ್!
June 12, 2026
6:58 AM
by: ದ ರೂರಲ್ ಮಿರರ್.ಕಾಂ
ರಬ್ಬರ್ ಕ್ಷೇತ್ರಕ್ಕೆ ಹೊಸ ಅವಕಾಶ – ಈಗ ಅಸ್ಸಾಂ ದೇಶದ ಮೂರನೇ ಅತಿದೊಡ್ಡ ರಬ್ಬರ್ ಉತ್ಪಾದಕ ರಾಜ್ಯ
June 11, 2026
7:43 PM
by: ದ ರೂರಲ್ ಮಿರರ್.ಕಾಂ
ನಕಲಿ ಹೆಲಿಕಾಪ್ಟರ್ ಬುಕ್ಕಿಂಗ್ ಜಾಲ ಭೇದಿಸಿದ ದೆಹಲಿ ಪೊಲೀಸರು, ಮೂವರು ಬಂಧನ
June 11, 2026
7:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror