ಪೆರ್ಲ: ಭಾರತದಂತಹ ರಾಷ್ಟ್ರದಲ್ಲಿ ಯುವ ಜನಾಂಗವೇ ಪ್ರಧಾನ ಸಂಪತ್ತು. ಸೂಕ್ತ ಮಾರ್ಗದರ್ಶನ ಹಾಗೂ ಅರಿವಿನ ಕೊರತೆಯಿಂದಾಗಿ ಯುವ ಜನಾಂಗ ತಪ್ಪು ದಾರಿ ಹಿಡಿಯುತ್ತಿದೆ. ಯುವ ಶಕ್ತಿಯ ಸದ್ಬಳಕೆ ಮಾಡುವಲ್ಲಿ ಎನ್ನೆಸ್ಸೆಸ್ ಸೂಕ್ತ ವೇದಿಕೆ ಎಂದು 2011-12 ಸಾಲಿನ ರಾಷ್ಟ್ರದ ಉತ್ತಮ ಎನ್ನೆಸ್ಸೆಸ್ ಘಟಕ ಪ್ರಶಸ್ತಿಯನ್ನು ಸ್ವೀಕರಿಸಿದ, 3 ಬಾರಿ ಕಣ್ಣೂರು ವಿಶ್ವವಿದ್ಯಾಲಯದಿಂದ ಉತ್ತಮ ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರಶಸ್ತಿ ಪಡೆದುಕೊಂಡ ಮೊಹಮ್ಮದ್ ಅಲಿ ಹೇಳಿದರು.
ಪೆರ್ಲ ನಾಲಂದ ಕಾಲೇಜಿನ ಎನ್ನೆಸ್ಸೆಸ್ ಘಟಕದ ಪ್ರಥಮ ವರ್ಷ ವಿದ್ಯಾರ್ಥಿಗಳಿಗೆ ಒರಿಯೆಂಟೇಶನ್ ತರಗತಿ ನಡೆಸಿ, ಮಾತನಾಡಿದರು.ನಮ್ಮ ಮನಸ್ಸು ಒಳ್ಳೆಯದಾದರೆ ಸಮಾಜ, ರಾಷ್ಟ್ರ ಒಳ್ಳೆಯದಾಗುತ್ತದೆ. ಪ್ರಥಮವಾಗಿ ವೈಯಕ್ತಿಕ ಅಭಿವೃದ್ಧಿ, ಬಳಿಕ ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿ ಸಾಧ್ಯ.ಸ್ವಾರ್ಥತೆ, ಅಸೂಯೆ, ಅಹಂಕಾರ ಮುಂತಾದವುಗಳನ್ನು ತೊಲಗಿಸಿ, ರಾಮಾಯಣ ಮಹಾಭಾರತ ಮುಂತಾದ ಕಾವ್ಯಗಳಲ್ಲಿ ಪ್ರಸ್ತುತವಾದ ಜೀವನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ, ವಿದ್ಯಾರ್ಥಿಗಳು ಅಂಕ ಗಳಿಸುವುದು ಮಾತ್ರವಲ್ಲ. ಅದರೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
9 ವರ್ಷಗಳಿಂದ ಎನ್ನೆಸ್ಸೆಸ್ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿದ, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ, ನಾಲಂದ ಕಾಲೇಜಿನ ಸ್ಥಾಪನೆಯ ಸಂದರ್ಭದಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದ, ಈ ವರ್ಷ ಕೇರಳ ರಾಜ್ಯ ವನಮಿತ್ರ ಪ್ರಶಸ್ತಿ ಪುರಸ್ಕೃತ ಸ್ವೀಕರಿಸಿದ ಮೊಹಮ್ಮದ್ ಅಲಿ ಅವರಿಗೆ ಕಾಲೇಜಿನ ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ ಸ್ಮರಣಿಕೆ ನೀಡಿ ಗೌರವಿಸಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರ್ ಖಂಡಿಗೆ ಉಪಸ್ಥಿತರಿದ್ದರು. ಚೈತ್ರ ಸ್ವಾಗತಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ ಎಂ. ವಂದಿಸಿದರು. ಅಶ್ವಿನಿ ಸಿ ಎಚ್. ನಿರೂಪಿಸಿದರು.
ವರದಿ: ಪ್ರದೀಪ್ ಎಸ್ ಕುಲಾಲ್