ಗುತ್ತಿಗಾರು : ಸಮಾಜದಲ್ಲಿರುವ ಬಡವರಿಗೆ ಆಕಸ್ಮಿಕ ಮತ್ತು ತುರ್ತು ಸಂದರ್ಭದಲ್ಲಿ ನೇರವಾಗಿ ಅವರ ಬಾಳಿಗೆ ಹೊಸ ಬೆಳಕನ್ನು ಮೂಡಿಸಿ ಅವರ ಸಂಕಷ್ಟದಲ್ಲಿ ನೆರವಾಗುವ ಸದುದ್ದೇಶದಿಂದ ಗುತ್ತಿಗಾರಿನಲ್ಲಿ ಆರಂಭಗೊಂಡ ಯುವ ಸ್ಪಂದನ ಟ್ರಸ್ಟ್ (ರಿ) ಉದ್ಘಾಟನೆಗೊಂಡಿತು.
ಊರಿನ ಹಾಗೂ ಪರವೂರಿನ ದಾನಿಗಳು ನೀಡುವ ದೇಣಿಗೆಯಿಂದ ಬಡವರ ಬಾಳಿನಲ್ಲಿ ಬೆಳಕನ್ನು ಮೂಡಿಸುವ ಹಾಗೂ ಅಶಕ್ತರ ಸೇವೆಯನ್ನು ಮಾಡಿ ಒಂದಿಷ್ಟು ಸಮಾಜಮುಖಿ ಕೆಲಸವನ್ನು ಮಾಡುವ ಉದ್ದೇಶದಿಂದ ಗುತ್ತಿಗಾರಿನ ಮುತ್ತಪ್ಪ ದೈವಸ್ಥಾನದಲ್ಲಿ ಸಂಘದ ಅಧ್ಯಕ್ಷ ಕೆ ಬಿ ನವೀನ್ ಕುಮಾರ್ ದೀಪ ಬೆಳಗಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರವೀಶ್ ಮೊಟ್ಟೆ ,ಕಾರ್ಯದರ್ಶಿ ಶರತ್ ಎನ್ ಕೆ ,ನಿರ್ದೇಶಕರಾದ ರಾಜಿತ್ ಕಂದ್ರಪ್ಪಾಡಿ ,ಚರಣ್ ಸಾಯಿ ಮಧುರ , ಪ್ರಶಾಂತ್ ಬಾಕಿಲ, ಶಿವರಾಮ್ ಮೊಟ್ಟೆ , ಚಂದ್ರಶೇಖರ್ ಪಾರೆಪಾಡಿ ,ಶ್ರೇಯಸ್ ಮುತ್ಲಾಜೆ ,ಚೇತನ್ ಬಳ್ಳಡ್ಕ ಉಪಸ್ಥಿತರಿದ್ದರು .
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel