ಯುವಕರ ತಂಡದಿಂದ ಸುಂದರ ಬಿಸಿಲೆಯೊಳಗೆ ನಡೆಯಿತು ಸ್ವಚ್ಛತೆ…..

August 26, 2019
8:00 AM

ಸುಂದರ ಬಿಸಿಲೆಯ ಪರಿಸರದ ಶ್ರೀ ಚಾಮುಂಡಿ ಕ್ಷೇತ್ರದ ಸುತ್ತಮುತ್ತ ಯುವಕರ ತಂಡ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿತು. ಪರಿಸರವೂ ಸ್ವಚ್ಛವಾಗಬೇಕು, ವಾತಾವರಣವೂ ಶುಭ್ರವಾಗಿರಲಿ ಎಂದು ಸ್ವಚ್ಛತಾ ಕಾರ್ಯ ನಡೆಸಿತು.ಯಾವುದೇ ಪ್ರಚಾರ ಬಯಸದೆ ಕಳೆದ ಎರಡು ವಾರದಿಂದ ಈ ಕೆಲಸ ಮಾಡುತ್ತಿದೆ. ಈಗ ಪ್ರವಾಸಿಗರ, ಬಿಸಿಲೆ ಪ್ರದೇಶಕ್ಕೆ ತೆರಳುವವರ ಜವಾಬ್ದಾರಿ ಹೆಚ್ಚಿದೆ. ಈ ಕಡೆಗೆ ಫೋಕಸ್..

Advertisement
Advertisement

ಕಳೆದ ಕೆಲವು ಸಮಯದ ಹಿಂದೆ ಸ್ವಚ್ಛ ಸುಬ್ರಹ್ಮಣ್ಯವನ್ನು  ಯುವಬ್ರಿಗೆಡ್ ತಂಡ ನಡೆಸಿದ ಬಳಿಕ ಸಾಕಷ್ಟು ಪ್ರಮಾಣದಲ್ಲಿ ತ್ಯಾಜ್ಯಗಳು, ಬಾಟಲಿಗಳು, ಕಸಗಳು ಸಿಕ್ಕಿದ್ದವು,. ಅದಾದ ಬಳಿಕ ಸದಾ ಜಾಗೃತಿ ಮೂಡಿಸಲಾಗಿತ್ತು. ಯಾತ್ರಕರ ಸಂಖ್ಯೆ ಅಪಾರ ಇರುವುದರಿಂದ ನಿರಂತರ ಜಾಗೃತಿ ಅನಿವಾರ್ಯ. ಹಾಗೆಂದು ಸ್ವಚ್ಛತಾ ಕಾರ್ಯ ಯಶಸ್ಸು ಕಂಡಿಲ್ಲ ಅಂತಲ್ಲ, ನಿತ್ಯವೂ ಜಾಗೃತಿಯೇ ಇದಕ್ಕೆ ಸದ್ಯದ ಪರಿಹಾರ.

ಇದೀಗ ನಮ್ಮ ಸುಬ್ರಹ್ಮಣ್ಯ ತಂಡ ,ಹಾಗೂ ಯುವ ಬ್ರಿಗೇಡ್ ಸಹಯೋಗದೊಂದಿಗೆ ಬಿಸಿಲೆಯ  ಗಡಿ ಶ್ರೀ ಚಾಮುಂಡಿ ಕ್ಷೇತ್ರದಲ್ಲಿ  ಸ್ವಚ್ಛತೆ ಕಾರ್ಯ ನಡೆಸಲಾಯಿತು. ಬೆಳಗ್ಗೆ ನಡೆದ ಈ ಕಾರ್ಯಕ್ರಮದಲ್ಲಿ ಯುವಕರು ಭಾಗವಹಿಸಿದರು. ಸುಂದರ ಪ್ರಕೃತಿಯ ಒಳಗೆ ಮದ್ಯ ದ ಬಾಟಲಿಗಳು, ಪ್ಲಾಸ್ಟಿಕ್ ಕಸಗಳು ಕಂಡುಬಂದವು. ಇದೆಲ್ಲಾ ಪರಿಸರವನ್ನು ಹಾಳು ಮಾಡುವುದರ ಜೊತೆಗೆ ದುರ್ನಾಥ ಬಿರುವಂತಿತ್ತು.ತಂಡವು  ಬಾಟಿ ಹಾಗೂ ತ್ಯಾಜ್ಯ ಸಂಗ್ರಹಿಸಿ ಅವುಗಳನ್ನು ಸುರಕ್ಷಿತವಾದ ಪ್ರದೇಶದಲ್ಲಿ  ವ್ಯವಸ್ಥೆ ಮಾಡಿತು. ಕಳೆದ ಎರಡು ವಾರದಿಂದ ಈ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಎರಡು ವಾರವೂ ಸಾಖಷ್ಟು ಪ್ರಮಾಣದಲ್ಲಿ ಕಸ ಕಂಡುಬಂದಿದೆ. ಇನ್ನೀಗ ಜಾಗೃತಿ ಕಾರ್ಯ ನಡೆಯಬೇಕಲಿದೆ. ಪರಿಸರ ಸ್ವಚ್ಛತೆ ಎಲ್ಲರ ಕಾಳಜಿ, ಜಾಗೃತಿಯಾಗಬೇಕಿದೆ.

Advertisement

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ಆಧಾರಿತ ಬೆಳೆ ವಿಮೆಗೆ ಸಮಸ್ಯೆ | ಮಳೆ ಮಾಪನ ಯಂತ್ರಗಳ ನಿರ್ವಹಣೆ ಅವ್ಯವಸ್ಥೆ ಸರಿಪಡಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ
July 23, 2025
7:21 AM
by: The Rural Mirror ಸುದ್ದಿಜಾಲ
ಅರಣ್ಯ ಪ್ರದೇಶದೊಳಗೆ ದನ-ಕರು, ಕುರಿ ಮೇಯಿಸುವುದಕ್ಕೆ ನಿಷೇಧ ಹೇರಿದ ಅರಣ್ಯ ಇಲಾಖೆ
July 23, 2025
7:09 AM
by: The Rural Mirror ಸುದ್ದಿಜಾಲ
ಕೋಲಾರದಲ್ಲಿ ರೈತರಿಗೆ ವರದಾನವಾದ ತೋಟಗಾರಿಕಾ ಯೋಜನೆ | ಪಾಲಿ ಹೌಸ್‌ ಮೂಲಕ ವಿವಿಧ ಬೆಳೆ |
July 23, 2025
7:03 AM
by: The Rural Mirror ಸುದ್ದಿಜಾಲ
ದಾವಣಗೆರೆ ಜಿಲ್ಲೆಯಲ್ಲಿ ಡಿಜಿಟಲ್ ಲೈಬ್ರರಿ | ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಅನುಕೂಲ |
July 23, 2025
6:49 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group