ಯೋಗದಲ್ಲಿ ಒಂದಾಗಲಿದೆ ಜಗತ್ತು…… ಭಾರತ ಇದರ ಸಾರಥಿ….

June 20, 2019
8:00 AM

ಸುಳ್ಯ: ಜಗತ್ತಿಗೆ ಭಾರತ ನೀಡಿದ ಅತ್ಯಂತ ಶ್ರೇಷ್ಠ ಕೊಡುಗೆ ಯೋಗ. ಯೋಗದ ಮೂಲಕ ಇಡೀ ಜಗತ್ತಿಗೆ ಆರೋಗ್ಯದ ಪಾಠ ಹೇಳಿದ ಹಿರಿಮೆ ಭಾರತಕ್ಕಿದೆ. ಯೋಗದ ಮಹತ್ವವನ್ನು ಒಪ್ಪಿಕೊಂಡು ಯೋಗ ದಿನಾಚರಣೆಯ ಮೂಲಕ ಜಗತ್ತೇ ಒಂದಾಗುತ್ತಿದೆ. ಇದರ ಸಾರಥ್ಯ ವಹಿಸಿದ್ದು ಭಾರತ.

Advertisement
Advertisement
Advertisement

ಜೂನ್ 21 ವಿಶ್ವ ಯೋಗ ದಿನಾಚರಣೆ. 2015 ರಿಂದ ಜೂನ್ 21ನ್ನು  ವಿಶ್ವ ಯೋಗದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದ್ದು ವಿಶ್ವದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಯೋಗ ದಿನವನ್ನು ಆಚರಿಸಿ ಎಲ್ಲರೂ ಒಂದಾಗಿ ಒಟ್ಟಾಗಿ ಯೋಗ ಮಾಡುತ್ತಾರೆ. ಯೋಗದ ಮೂಲಕ ಆರೋಗ್ಯ ಎಂಬ ಸತ್ಯವನ್ನು ಅರಿತುಕೊಂಡಿರುವ ಜಗತ್ತು ಯೋಗದೆಡೆಗೆ ಆಕರ್ಷಿತವಾಗುತಿದೆ. ಯೋಗ ದಿನಾಚರಣೆಗೆ ತಿಂಗಳ ಹಿಂದೆಯೇ ಯೋಗ ತರಬೇತಿ, ಯೋಗಾಭ್ಯಾಸ, ಪ್ರದರ್ಶನ ನೀಡುವ ಕಾರ್ಯಕ್ರಮಗಳೂ ನಾಡಿನೆಲ್ಲೆಡೆ ನಡೆದು ಬರುತ್ತಿದೆ. ಗ್ರಾಮ-ನಗರ ಭೇದವಿಲ್ಲದೆ, ಹಿರಿಯರು ಕಿರಿಯರು ಎಂಬ ವ್ಯತ್ಯಾಸವಿಲ್ಲದೆ, ಹೆಣ್ಣು ಗಂಡು ಎಂಬ ಭಾವವಿಲ್ಲದೆ ಎಲ್ಲರೂ ಯೋಗದಲ್ಲೊಂದಾಗುವರು. ಯೋಗ ತರಬೇತಿ, ಯೋಗ ಪ್ರದರ್ಶನ, ಕಾರ್ಯಾಗಾರ ಹೀಗೆ ಹತ್ತು ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಯೋಗ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದೆ.

Advertisement

ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಹಾಗು ಉಜಿರೆಯ ಎಸ್.ಡಿ.ಎಂ.ಪ್ರಕೃತಿಚಿಕಿತ್ಸಾ ಮತ್ತುಯೋಗ ವಿಜ್ಞಾನಕಾಲೇಜಿನ ಜಂಟಿ ಆಶ್ರಯದಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆಯುವ ವಿಶ್ವಯೋಗ ದಿನಾಚರಣೆಯಲ್ಲಿ ಬೆಳಿಗ್ಗೆ ಗಂಟೆ 7 ರಿಂದ 7.45 ರ ವರೆಗೆ ಒಂದು ಸಾವಿರ ಶಿಬಿರಾರ್ಥಿಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಆಯುಷ್ ಮಂತ್ರಾಯಲದ ನಿರ್ದೇಶನದಂತೆ ಉಡುಪಿ, ದಕ್ಷಿಣಕನ್ನಡ, ಚಿಕ್ಕಮಗಳೂರು, ಹಾಸನ ಮತ್ತು ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ತಲಾ ಹದಿನೈದು ಕೇಂದ್ರಗಳಲ್ಲಿ ಹತ್ತು ದಿನಗಳ ಕಾಲ ಸಾವಿರಾರು ಜನರಿಗೆ ಉಚಿತ ಯೋಗ ಶಿಬಿರ ಆಯೋಜಿಸಲಾಗಿದೆ. ಶುಕ್ರವಾರ ಆಯಾಜಿಲ್ಲಾ ಕೇಂದ್ರಗಳಲ್ಲಿ ವಿಶ್ವಯೋಗ ದಿನಾಚರಣೆ ನಡೆಯುತ್ತದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಎಲ್ಲಾ ಶಾಲೆಗಳಲ್ಲಿ ಏಕಕಾಲದಲ್ಲಿ ಶುಕ್ರವಾರ ಬೆಳಿಗ್ಗೆ ಗಂಟೆ 7 ರಿಂದ 7.45ರ ವರೆಗೆ ಸಾಮೂಹಿಕ ಯೋಗ ಪ್ರದರ್ಶನ ನಡೆಯುತ್ತದೆ. ಬೆಳ್ತಂಗಡಿ ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಜೂನ್ 10 ರಿಂದ 20ರ ವರೆಗೆಯೋಗ ತರಬೇತಿ ಕಾರ್ಯಕ್ರಮ ನಡೆಸಿ 21 ರಂದು ಸಾಮೂಹಿಕ ಯೋಗ ಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರ ನಡೆಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Advertisement

ಇದರ ಜೊತೆಗೆ ಜಿಲ್ಲೆಯ ಹಲವು ಕಡೆಗಳಲ್ಲಿ  ಸಾಮೂಹಿಕ ಯೋಗ ನಡೆಯಲಿದೆ. ಪುತ್ತೂರಿನಲ್ಲಿ  ಪತಂಜಲಿ ಯೋಗ ಕೇಂದ್ರ ಹಾಗೂ ಅನ್ಯಾನ್ಯ ಸಂಘಸಂಸ್ಥೆಗಳ ಜೊತೆಗೆ ಸಾಮೂಹಿಕ ಯೋಗ ನಡೆದರೆ ಸುಳ್ಯದಲ್ಲೂ ವಿವಿಧ ಶಾಲೆಗಳಲ್ಲಿ , ಕಾಲೇಜುಗಳಲ್ಲಿ  ಯೋಗ ನಡೆಯಲಿದೆ. ಇದಕ್ಕಾಗಿ ತರಬೇತಿ ಹಾಗೂ ಸಂಘಟನೆಯಾಗಿದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಕ್ಯಾನ್ಸರ್‌ಕಾರಕ | ತಿರುಚಿದ ವರದಿ ಪ್ರಕಟಿಸಿದ WHO | ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಕ್ಯಾಂಪ್ಕೊ ಒತ್ತಾಯ |
November 26, 2024
7:05 PM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಔಷಧೀಯ ಗುಣ | “we made” ಅಡಿಕೆಯ ಲಿಕ್ವಿಡ್‌ ಸೋಪು | ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ |
November 26, 2024
7:11 AM
by: ಮಹೇಶ್ ಪುಚ್ಚಪ್ಪಾಡಿ
ನೀರಿಗಾಗಿ ಏಕಾಂಗಿಯಾಗಿ ಸುರಂಗ ತೋಡಿದ ಕೃಷಿಕ | ಹಸಿರಾದ ಕೃಷಿ |
November 25, 2024
8:44 PM
by: The Rural Mirror ಸುದ್ದಿಜಾಲ
ಮಲೆನಾಡಿನಲ್ಲಿ ಕಾಡಾನೆ ಹಾವಳಿ ತಡೆಗೆ ಅಧಿವೇಶನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ
November 25, 2024
7:15 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror