ಯೋಧನೊಂದಿಗೆ ಮನೆಯಂಗಳದಲ್ಲಿ ಸ್ವಾತಂತ್ರ್ಯದ ಸಂಭ್ರಮ

August 16, 2019
10:00 AM

ಬೆಳ್ಳಾರೆ: ಸ್ವಾತಂತ್ರ್ಯ ದಿನಾಚರಣೆಯನ್ನು ಬೆಳ್ಳಾರೆಯ ರೈತರೊಬ್ಬರು ಮನೆಯಲ್ಲಿ ಯೋಧರೊಬ್ಬರ ದಿವ್ಯಹಸ್ತದೊಂದಿಗೆ ಧ್ವಜಾರೋಹಣವನ್ನು ಮಾಡಿಸಿ ಮಾದರಿಯಾಗಿದೆ.

Advertisement
Advertisement

ಬೆಳ್ಳಾರೆಯ ಪಡ್ಪು ನಿವಾಸಿ ಆನಂದ ಗೌಡರ ಮನೆಯಂಗಳದಲ್ಲಿ 50ಕ್ಕಿಂತಲೂ ಹೆಚ್ಚಿನ ಮಕ್ಕಳು 73ನೇ ಸ್ವಾತಂತ್ರೋತ್ಸವವನ್ನು ಬಹಳ ಸಡಗರದಿಂದ ಆಚರಿಸಿದರು. ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಶ್ರೀಧರ್ ಅವರು ಧ್ವಜಾರೋಹಣಗೈದರು. ಯೋಧ ಶ್ರೀಧರ್ ಅವರು ಐವರ್ನಾಡು ಗ್ರಾಮದ ಸಾರಕೆರೆ ನಿವಾಸಿ. 2004ರಲ್ಲಿ ಭೋಪಾಲ್‍ನಲ್ಲಿ ತರಬೇತಿ ಮುಗಿಸಿ ವಿಶಾಖಪಟ್ಟಣ, ರಾಜಸ್ಥಾನ, ಸೂರತ್‍ನಲ್ಲಿ ಮಿಶನ್ ಲಿಬನನ್ ಆಗಿ ನಿಯೋಜನೆಗೊಂಡಿದ್ದರು. ಪ್ರಸ್ತುತ ಪಶ್ಚಿಮ ಬಂಗಾಳದ ಪಾಣಾಘರ್ ಗಡಿಭಾಗದಲ್ಲಿ ಇಎಂಇ ಬೆಟಾಲಿಯನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಯೋಧನಿಗೆ ರಾಖಿ ಕಟ್ಟಿ ಸಂಭ್ರಮಿಸಿದ ವಿದ್ಯಾರ್ಥಿನಿಯರು:
ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ಸಹೋದರತೆಯನ್ನು ಬೆಸೆಯುವ ರಕ್ಷಾಬಂಧನ ಕಾರ್ಯಕ್ರಮವು ಜೊತೆಯಾಗಿ ನಡೆಯಿತು. ಯೋಧ ಶ್ರೀಧರ್ ಅವರಿಗೆ ರಾಖಿ ಕಟ್ಟಿ ಸಂಭ್ರಮಿಸಿ ವಿದ್ಯಾರ್ಥಿನಿಯರು ಹೆಮ್ಮೆಪಟ್ಟುಕೊಂಡರು.ಸ್ವಾತಂತ್ರ ದಿನಾಚರಣೆ ಸಂದರ್ಭ ಯೋಧರನ್ನು ಹಾಗು ರೈತರನ್ನು ಸನ್ಮಾನಿಸಿ ಗೌರವಿಸಿದ ನಂತರ ಯೋಧ ಶ್ರೀಧರ್ ಜ್ಞಾನದೀಪ ವಿದ್ಯಾರ್ಥಿಗಳಿಗೆ ಸೇನಾ ನೇಮಕಾತಿ ಬಗ್ಗೆ ಮಾಹಿತಿಗಳನ್ನು ನೀಡುತ್ತಾ ವಿದ್ಯಾರ್ಥಿಗಳು ಸೇನೆ ಸೇರ್ಪಡೆಗೊಳ್ಳಲು ತಮ್ಮ ಮಾತುಗಳಿಂದ ಪ್ರೇರೇಪಿಸಿದ್ದು ಕಾರ್ಯಕ್ರಮದ ವೈಶಿಷ್ಠ್ಯತೆಯಾಗಿತ್ತು.

ಸೇನೆಗೆ ಸೇರ್ಪಡೆಗೊಳ್ಳುವವರ ಸಂಖ್ಯೆ ಕಡಿಮೆ ಇರುವ ಈ ದಿನಗಳಲ್ಲಿ ಇಲ್ಲಿನ ಮಕ್ಕಳು ಸೇನಾ ಸೇರ್ಪಡೆಗೆ ತೋರ್ಪಡಿಸಿದ ಉತ್ಸಾಹ ನನಗೆ ಹೆಮ್ಮೆಯೆನಿಸಿತು. ಅವರಿಗೆ ಅಗತ್ಯವಿರುವ ಮಾಹಿತಿಗಳನ್ನು ನೀಡಲು ಸಿದ್ದ ಎಂದು ಯೋಧ ಶ್ರೀಧರ್ ಸಾರಕರೆ ಹೇಳುತ್ತಾರೆ.

 ಮಕ್ಕಳಿಗೆ ಸ್ವಾತಂತ್ರ ದಿನಾಚರಣೆಯ ಮಹತ್ವ ಅರಿವಾಗಬೇಕೆನ್ನುವ ನಿಟ್ಟಿನಲ್ಲಿ ವಿಶಿಷ್ಠವಾದ ಶೈಲಿಯಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಿದ್ದೇವೆ. ಭಾರತ ದೇಶದ ರಕ್ಷಣೆಗೆ ಸ್ಪೂರ್ತಿ ಪಡೆಯಲು ಸ್ವತಃ ಯೋಧರೊಬ್ಬರ ಹಸ್ತದಿಂದ ಧ್ವಜಾರೋಹಣಗೊಳಿಸಿದ್ದೇವೆ ಎನ್ನುತ್ತಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆ ನಿರ್ದೇಶಕ ಉಮೇಶ್ ಮಣಿಕ್ಕಾರ.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ವಾಯುಭಾರ ಕುಸಿತ | ಕೇರಳದಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ | ಆರು ಜಿಲ್ಲೆಗಳಲ್ಲಿ ಎಲ್ಲೋ ಎಲರ್ಟ್‌ | ರಾಜ್ಯದಲ್ಲೂ ಮಳೆ ಸಾಧ್ಯತೆ |
May 17, 2025
8:27 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?
May 17, 2025
7:27 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮೇ ಕೊನೆಯ ವಾರದಂದು ಈ ಐದು ರಾಶಿಯವರಿಗೆ ಶುಕ್ರ ದೆಸೆ
May 17, 2025
7:01 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group