#ರಕ್ಷಾಬಂಧನ ಶುಭಾಶಯ | ಜವಾಬ್ದಾರಿಯನ್ನು ‌‌‌‌‌ ನೆನಪಿಸುವ ರಕ್ಷಾಬಂಧನ

August 3, 2020
9:43 AM
ಅಂದು ಮಗ ಅಪ್ಪನೊಂದಿಗೆ ಶಾಲೆಯಿಂದ ಮನೆಗೆ ಬರುವಾಗಲೇ ಗಡಿಗೆ ಗಾತ್ರದ ಮುಖ ಮಾಡಿಕೊಂಡು ಬಂದಿದ್ದ. ಶಾಲೆಯ ಗೇಟ್ ನಿಂದ ಮನೆಯವರೆಗೂ ಅಪ್ಪನ ಯಾವ ಪ್ರಶ್ನೆಗೂ ಉತ್ತರಿಸದೇ ಕೋಪದಲ್ಲೇ ಇದ್ದ.  ಮನೆಗೆ ನನ್ನ ತಮ್ಮನೂ ಬಂದಿದ್ದ. ಕೋಪದಲ್ಲಿ ಇರುವ ಅಳಿಯನಿಗೆ ಮಾವನನ್ನು ನೋಡಿ ಚೂರು ನಗು ಬಂತು.  ಎಂತಾಯ್ತು ನಿನಗೆ ಎಂದು ಕೇಳಿದಾಗ ಎಲ್ಲರ ಕೈಯಲ್ಲಿಯೂ ತರತರದ ಬಳ್ಳಿ ಇತ್ತು ನಾನು ಮಾತ್ರ ಏನು ಕಟ್ಟಿಕೊಂಡು ಶಾಲೆಗೆ ಹೋಗಲಿಲ್ಲ. ನೋಡು ಮಾವನ ಕೈಯಲ್ಲಿಯೂ ಉಂಟು , ನನ್ನಕೈ ನೋಡು ಖಾಲಿ . ಅಷ್ಟರಲ್ಲಿ ನನ್ನ ತಮ್ಮ ಜೇಬಿನಿಂದ ಒಂದು ರಕ್ಷೆ ತೆಗೆದ, ಇದುವಾ ನೋಡು? ಹ ಹ ಅದುವೇ ಮಾವ ಎಂದು ಖುಷಿಯಿಂದ ಹಾರಿದ. ಬಾ ನಾನೇ ಕಟ್ಟುತ್ತೇನೆ ನಿನಗೆ ಎಂದಾಗ ಕೈ ಒಡ್ಡಿ ನಿತ್ತ. ಇನ್ನೊಂದು ರಾಖಿ ಮಾವನ ಕೈ ಗೆ ಅಳಿಯನೇ ಕಟ್ಟಿದ . ಅಲ್ಲಿಗೆ ಇಬ್ಬರಿಗೂ ಸಮಾಧಾನ. ಹತ್ತಿರ ಊರಲ್ಲಿದ್ದರೂ ಅಕ್ಕ ರಾಖಿ ಕಟ್ಟುವುದಿಲ್ಲವೆಂದು ತಮ್ಮನಿಗಿದ್ದ ಕೋಪವನ್ನು ಅಳಿಯ ನಿವಾರಿಸಿದ.
ಇದು ಎಲ್ಲಾ ಹಬ್ಬಗಳಂತಲ್ಲ. ತುಂಬಾ ವಿಶೇಷವಾದ ಹಬ್ಬ.  ಸಹೋದರ , ಸಹೋದರಿಯರ ಹಬ್ಬ.  ಆ ದಿನ  ಶ್ರೀ ರಕ್ಷೆಯನ್ನು ನೆನಪಿಸುವ ಹಬ್ಬ.  ಸೂಚ್ಯವಾಗಿ  ಸಹೋದರ ಕೈಗೆ ದಾರವನ್ನು ಕಟ್ಟುವ ಮೂಲಕ ಭ್ರಾತೃತ್ವದ    ಜವಾಬ್ದಾರಿ ಯನ್ನು ನೆನಪಿಸುವ ಹಬ್ಬ.    ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸಲ್ಪಡುತ್ತಿದ್ದ ರಕ್ಷಾಬಂಧನ ಹಬ್ಬ ದಕ್ಷಿಣಕ್ಕೂ ಕಾಲಿಟ್ಟು  ಬಹಳ ಸಮಯವಾಯಿತು. ಎಲ್ಲಾ ಹಬ್ಬಗಳೂ ಇಂದು   ಜನರಿಗೆ ಹತ್ತಿರವಾಗಿವೆ!.
ಅಂದು  ದ್ರೌಪದಿ ಕೃಷ್ಣ ನ ಕೈ ಗೆ ಗಾಯವಾದಾಗ  ಹಿಂದು ಮುಂದೆ ನೋಡದೆ ತನ್ನ ವಸ್ತ್ರವನ್ನೇ ಹರಿದು  ಕೈಗೆ ಕಟ್ಟುತ್ತಾಳೆ.   ಪಆಕೆಯ  ಈ ಕಾಳಜಿಯೇ ಮುಂದೆ ಕಾಯುತ್ತದೆ. ತನ್ನ ವಸ್ತ್ರದ  ಮೇಲೆ ದುಶ್ಯಾಸನ ಕೈ ಹಾಕಿ ಸೆಳೆಯುತ್ತಿದ್ದಾಗ ಮಾನ ಕ್ಷಣೆಗಾಗಿ ಕೃಷ್ಣ ನತ್ತ  ಮುಖ ಮಾಡುತ್ತಾಳೆ . ಆ ಕ್ಷಣಕ್ಕೆ ಯುದ್ದಾಂಗಣದಲ್ಲಿದ್ದ ಕೃಷ್ಣ.   ದ್ಯೂತ ಸಭೆಯಲ್ಲಿ ಅವಮಾನದಿಂದ  ದ್ರೌಪದಿಯನ್ನು ಕಾಪಾಡುತ್ತಾನೆ.  ರಕ್ಷೆಯ ರಕ್ಷಣೆಯಲ್ಲವೇ ಇದು.  
ಅಪಾಯಗಳು, ಕಷ್ಟಗಳು ಎದುರಾದಾಗ  ಅವುಗಳನ್ನು ಎದುರಿಸಲು ಸಹೋದರರಿದ್ದಾರೆ ಎಂಬುದು ಮನಸಿಗೆ ಧೈರ್ಯ ಕೊಡುತ್ತದೆ. ಕೆಲವೊಮ್ಮೆ ಸ್ವಂತ ಅಣ್ಣತಮ್ಮಂದಿರು ಇರುವುದಿಲ್ಲ. ಹಾಗಿದ್ದೂ ಸಹಾಯಕ್ಕೆ ದೇವರು ಅಣ್ಣ ತಮ್ಮಂದಿರ  ರೂಪದಲ್ಲಿ ‌ಬರುತ್ತಾನೆ.  ಊರವರಿರಬಹುದು, ಹತ್ತಿರದ ಬಂಧುಗಳಿರಬಹುದು, ಕ್ಲಾಸ್ ಮೇಟ್ ಗಳಿಸಬಹುದು,  ಜೊತೆ ಪ್ರಯಾಣಿಕರಿರಬಹುದು, ಸಹವರ್ತಿ ಕೆಲಸಗಾರರಿರಬಹುದು. ಕಷ್ಟಗಳು ಬಂದಾಗ ಯಾವುದಾದರೊಂದು ರೂಪದಲ್ಲಿ  ಸಹೋದರರ ಸ್ಥಾನವನ್ನು ತುಂಬಿ ಬಿಡುತ್ತಾರೆ. ಯಾರು ನಮ್ಮ ಅಗತ್ಯಕ್ಕೆ , ಅನಿವಾರ್ಯತೆಗೆ  ಸ್ಪಂದಿಸುತ್ತಾರೋ ಅವರೇ ಸಹೋದರ ಸಹೋದರಿಯರು.
 ರಕ್ಷಾಬಂಧನ  ಹಬ್ಬ  ಸಹೋದರತೆಯ ಬಾಂಧವ್ಯವನ್ನು   ಮತ್ತೆ ಮತ್ತೆ ನವೀಕರಿಸುತ್ತದೆ. ಈ ಬಾರಿ  ಎಲ್ಲಾ ಹಬ್ಬಗಳಂತೆ ರಕ್ಷಾ ಬಂಧನ ಹಬ್ಬಕ್ಕೂ ಕೊರೊನಾ ಬಿಸಿ ತಟ್ಟಿದೆ. ಪ್ರತಿ ಬಾರಿ ಈ ಹಬ್ಬಕ್ಕೆ ಅಕ್ಕನ ಮನೆಗೆ  ಬರುತ್ತಿದ್ದ ತಮ್ಮ  ಈ ಬಾರಿ ಕೊರಿಯರ್ ಕಳುಹಿಸಿದ್ದಾನೆ. ಅಕ್ಕ, ತಂಗಿಯರೂ ರಾಖಿಯನ್ನು ಪೋಸ್ಟ್ ಮಾಡಿದ್ದಾರೆ.   ಅಲ್ಲಿಂದಲೇ ಆಶೀರ್ವಾದ ‌ಬೇಡಿದ್ದಾರೆ. ಚೈನಾ ರಾಖಿ ಗೆ ಗೇಟ್ ಪಾಸ್ ದೊರೆತಿದೆ. ಮನೆಯಲ್ಲೇ   ಕೈಯಾರೆ ಮಾಡಿದ ರಾಖಿಯೇ   ಚೆಂದವೆನಿಸಿದೆ.
#ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
Advertisement

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |
May 12, 2025
11:31 AM
by: ದ ರೂರಲ್ ಮಿರರ್.ಕಾಂ
ಕದನ ವಿರಾಮ ಬಳಿಕ ಪರಿಸ್ಧಿತಿ ಸಾಮಾನ್ಯ ಸ್ಧಿತಿಗೆ | ಶಾಂತಿ ಸ್ಧಾಪನೆಯ ಉದ್ದೇಶಕ್ಕೆ ಪೂರಕ ವಾತಾವರಣ
May 11, 2025
10:11 PM
by: The Rural Mirror ಸುದ್ದಿಜಾಲ
ಬದುಕು ಪುರಾಣ | ಮೂಡದಿರಲಿ, ಮಂಥರೆ ಮನಸ್ಸು
May 11, 2025
7:15 AM
by: ನಾ.ಕಾರಂತ ಪೆರಾಜೆ

You cannot copy content of this page - Copyright -The Rural Mirror

Join Our Group