ಮಡಿಕೇರಿ: ಕುಂಜಿಲ ಪೈನರೀ ಜುಮಾ ಮಸೀದಿಯ ರಸ್ತೆಯು ದುರಸ್ತಿಗೊಳ್ಳದೆ ಗ್ರಾಮಸ್ಥರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರಸ್ತೆ ದುರಸ್ತಿಗೆ ಜಿಲ್ಲಾಡಳಿತ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಕುಂಜಿಲ ಗ್ರಾಮದ ಪ್ರಮುಖ ಕಾರಂಗೋಡು ಹ್ಯಾರಿಸ್ ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.
ಕಳೆದ ಒಂದು ವರ್ಷದಿಂದ ವಾಹನ ಸಂಚಾರ ಸಂಪೂರ್ಣವಾಗಿ ಹದಗೆಟ್ಟಿದ್ದು, ಗ್ರಾಮಸ್ಥರು ಕಕ್ಕಬೆ ರಸ್ತೆಯ ಮೂಲಕ ಸಾಗಿ ಜುಮಾ ಮಸೀದಿಯನ್ನು ತಲುಪಬೇಕಿದೆ.
ಈ ಮಾರ್ಗದ ಸೇತುವೆ ಕೂಡ ಬಿರುಕು ಬಿಟ್ಟಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಳೆ ಜೋರಾಗುವ ಮೊದಲು ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಹ್ಯಾರಿಸ್, ಸಕಾಲದಲ್ಲಿ ಕಾಮಗಾರಿ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel