ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 19 | ಭಯ ಬೇಡ – ಇರಲಿ ಎಚ್ಚರ | ಕೋವಿಡ್-19  ಹರಡುವ ಮಾರ್ಗವನ್ನು ಬ್ರೇಕ್ ಮಾಡಿ

March 21, 2020
8:47 PM

ಮಂಗಳೂರು: ಕೋವಿಡ್-19  ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ಶನಿವಾರ 4 ಹೊಸ ಪ್ರಕರಣ ಬೆಳಕಿಗೆ ಬರುವ ಮೂಲಕ ಒಟ್ಟು 19 ಮಂದಿ ಈಗ ಬಾಧಿತರಾಗಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ಮೂರು ಹೊಸ ಪ್ರಕರಣ ಹಾಗೂ ಚಿಕ್ಕಬಳ್ಳಾಪುರ ಗೌರಿಬಿದನೂರಿನಲ್ಲಿ ಒಂದು ಪ್ರಕರಣ   ದೃಢವಾಗಿರುವುದು ವರದಿಯಾಗಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 19ಕ್ಕೇ ಏರಿದೆ. ದೇಶದಲ್ಲಿ ಒಟ್ಟು 271 ಕೋವಿಡ್-19  ಪ್ರಕರಣಗಳು ಪತ್ತೆಯಾಗಿದೆ.

Advertisement
Advertisement

ದಕ್ಷಿಣ ಕನ್ನಡದಲ್ಲಿ ಈವರೆಗೆ ಕೋವಿಡ್-19 ಪಾಸಿಟಿವ್ ಪ್ರಕರಣ ದೃಢ ಪಟ್ಟಿಲ್ಲ.  89 ಜನರನ್ನು ಪರೀಕ್ಷಿಸಲಾಗಿದೆ, ಇದರಲ್ಲಿ 79 ಜನರಲ್ಲಿ  ಕೋವಿಡ್-19 ನೆಗೆಟಿವ್ ಇದ್ದರೆ  10 ಜನರ ವರದಿ ಕಾಯಲಾಗುತ್ತಿದೆ.  ಈಗ ಜನರು ಭಯಗೊಳ್ಳುವುದಕ್ಕಿಂತಲೂ ಜಾಗ್ರತೆ ವಹಿಸಬೇಕಿದೆ. ಮುಂಜಾಗ್ರತಾ ಕ್ರಮಗಳಿಂದ ಕೋವಿಡ್-19 ಮುಕ್ತ ಜಿಲ್ಲೆಯಾಗಿಸಬಹುದಾಗಿದೆ.

ಕೊರೋನ(ಕೋವಿಡ್-19) ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾ.21 ರಿಂದ  ಮಾ.31ರ ಮಧ್ಯರಾತ್ರಿವರೆಗೆ ಕೇರಳದ ಗಡಿಭಾಗದಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರ ನಿಷೇಧಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಈಗಾಗಲೇ 6 ಕೊರೋನಾ ಪ್ರಕರಣಗಳು ವೈದ್ಯಕೀಯ ತಪಾಸಣೆಯಿಂದ ವರದಿಯಾದ ಹಿನ್ನೆಲೆಯಲ್ಲಿ  ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ – ಕೇರಳ ರಾಜ್ಯದ ಕಾಸರಗೋಡು ಗಡಿ ಭಾಗದಲ್ಲಿ ಸಂಚರಿಸುವ ಎಲ್ಲಾರೀತಿಯ ವಾಹನಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

 

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ದಿಶಾಂತ್‌ ಕೆ ಎಸ್
July 23, 2025
7:46 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಪ್ರಣಮ್ಯ ಡಿ
July 23, 2025
7:39 AM
by: ದ ರೂರಲ್ ಮಿರರ್.ಕಾಂ
ಹವಾಮಾನ ಆಧಾರಿತ ಬೆಳೆ ವಿಮೆಗೆ ಸಮಸ್ಯೆ | ಮಳೆ ಮಾಪನ ಯಂತ್ರಗಳ ನಿರ್ವಹಣೆ ಅವ್ಯವಸ್ಥೆ ಸರಿಪಡಿಸಲು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ
July 23, 2025
7:21 AM
by: The Rural Mirror ಸುದ್ದಿಜಾಲ
ಅರಣ್ಯ ಪ್ರದೇಶದೊಳಗೆ ದನ-ಕರು, ಕುರಿ ಮೇಯಿಸುವುದಕ್ಕೆ ನಿಷೇಧ ಹೇರಿದ ಅರಣ್ಯ ಇಲಾಖೆ
July 23, 2025
7:09 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group