ಬೆಂಗಳೂರು: ರಾಜ್ಯದಲ್ಲಿ ಇಂದು 1267 ಹೊಸ ಕೊರೊನ ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 13,190 ಕ್ಕೆ ಏರಿಕೆಯಾಗಿದೆ.
ಇಂದು ಒಂದೇ ದಿನ 220 ಸೋಂಕಿತರು ಗುಣಮುಖರಾಗಿದ್ದು ಒಟ್ಟು 7,507 ಬಿಡುಗಡೆಯಾಗಿದ್ದಾರೆ. 5,472 ಸಕ್ರಿಯ ಪ್ರಕರಣಗಳಿದೆ. 16 ಸೋಂಕಿತರು ಮೃತ ಪಟ್ಟಿದ್ದಾರೆ. ಒಟ್ಟು ಈವರೆಗೆ 207 ಮಂದಿ ಸೋಂಕಿಗೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಬೆಂಗಳೂರು ನಗರ 783, ದ. ಕ. 97, ಬಳ್ಳಾರಿ 71, ಉಡುಪಿ 40, ಕಲಬುರಗಿ 34, ಹಾಸನ 31, ಗದಗ 30, ಬೆಂಗಳೂರು ಗ್ರಾಮಾಂತರ 27, ಧಾರವಾಡ, ಮೈಸೂರು ತಲಾ 18, ಬಾಗಲಕೋಟೆ 17, ಉ.ಕ. 14, ಹಾವೇರಿ 12, ಕೋಲಾರ 11, ಬೆಳಗಾವಿ 8, ಬೀದರ್, ಚಿತ್ರದುರ್ಗ ತಲಾ 7, ರಾಯಚೂರು, ಮಂಡ್ಯ, ದಾವಣಗೆರೆ ತಲಾ 6, ವಿಜಯಪುರ 5, ಶಿವಮೊಗ್ಗ 4, ಚಿಕ್ಕಬಳ್ಳಾಪುರ, ಕೊಪ್ಪಳ, ಚಿಕ್ಕಮಗಳೂರು, ಕೊಡಗು ತಲಾ 3, ತುಮಕೂರು 2, ಯಾದಗಿರಿ 1 ಕೇಸ್ ಪತ್ತೆಯಾಗಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel