ರಾಷ್ಟ್ರ ನಿರ್ಮಾಣದಲ್ಲಿ ಇಂದಿನ ಯುವ ಜನತೆಯ ಪಾತ್ರ…..

May 11, 2020
4:52 PM

ಹೌದು ಒಂದು ರಾಷ್ಟ್ರ ನಿರ್ಮಾಣವಾಗಬೇಕಾದರೆ ಮೊದಲು ಮಾನವನ ನೈತಿಕತೆಯ ಬೆಳವಣಿಗೆ ಬಹು ಮುಖ್ಯ ಎಂಬುದು ನನ್ನ ಅಭಿಪ್ರಾಯ. ಮೊದಲು ಪ್ರತಿಯೊಬ್ಬ ವ್ಯಕ್ತಿಯ ವಿಕಸದತ್ತ ಗಮನ ಹರಿಸುವುದು ಅವನ/ಳ ಮಾನಸಿಕ ಮತ್ತು ದೈಹಿಕ ಪಾಲನೆಯಲ್ಲಿ ಹಿರಿಯರು ಸುಸಂಸ್ಕೃತ ವಾತಾವರಣ ಸೃಷ್ಟಿಸಬೇಕು ಆಗ ಕಾಮ, ಕ್ರೋಧ, ಮಧ,ಮತ್ಸರ,ಲೋಭ ಇವುಗಳನ್ನು ತ್ಯಜಿಸಿ ಮುಕ್ತ ಮತ್ತು ಪ್ರಾಮಾಣಿಕ ಜೀವನ ಯಾನ ನಡೆಸಲು ಪ್ರಭುಧ್ದನಾಗುತ್ತಾನೆ ಅಷ್ಟೇ ಅಲ್ಲ ಉತ್ತಮ ಪ್ರಜೆಯಾಗಿ ರಾಷ್ಟ ನಿರ್ಮಾಣದತ್ತ ಅಂಬೆಗಾಲಿಡಲು ಯೋಗ್ಯನಾಗುತ್ತಾನೆ ಎಂಬುದು ನನ್ನ ಭರವಸೆ.

Advertisement

ಹಾಗಾದರೆ ಅದು ಯಾವ ರೀತಿ ಎಂದು ನನ್ನ ಬರಹದ ಮೂಲಕ ತಿಳಿಸಲು ನನ್ನಿಂದಾಗುವ ಒಂದು ಸಣ್ಣ ಪ್ರಯತ್ನವಷ್ಟೆ. ಬನ್ನಿ ಮುಂದುವರೆಯೋಣ,

ಮೊದಲು ಮನೆಯ ಹಿರಿಯನಾದವ ತನ್ನ ಹವ್ಯಾಸಗಳ ಬಗ್ಗೆ ಗಮನ ಹರಿಸಬೇಕು. ತನ್ನ ಮಗುವಿನ ಜನನದಿಂದ ಹಿಡಿದು ಆತನ ಪ್ರತಿ ಹೆಜ್ಜೆಗಳನ್ನು ಗಮನಿಸುತ್ತ ಆದರ್ಶ ಯುವಕ/ಯುವತಿಯನ್ನಾಗಿ ಬೆಳಸಬೇಕು. ಗ್ರಾಮದಲ್ಲೆ ಆಗಲಿ ನಗರದಲ್ಲೆ ಆಗಲಿ ಅಹಿತಕರ ಘಡನೆಗೆ ಅವಕಾಶವಾಗದಂತೆ ಸ್ನೇಹ,ಪ್ರೀತಿ ವಿಶ್ವಾಸದಿಂದ ಮುನ್ನಗ್ಗಬೇಕು.

ಹೀಗೆ ಯುವ ಜನತೆ ಬೆಳೆದರೆಂದಾದರೆ ಕೋಮು ಗಲಭೆಗೆ ಅವಕಾಶವೆಲ್ಲಿರುತ್ತೆ ನೀವೆ ಹೇಳಿ.ಭಾವೈಕ್ಯಯ ಬೆಳವಣಿಗೆ ಇದೆ ಎಂದಾದಲ್ಲಿ ಗಲಭೆ ಹೊಡೆದಾಟ ಇವಕ್ಕೆಲ್ಲ ಮುಕ್ತಾವಿರಲಿ ಆರಂಭವೇ ಇರುವುದಿಲ್ಲ ಅಲ್ಲವೇ…??

ಉತ್ತಮ ರಾಷ್ಟ್ರದ ನಿರ್ಮಾಣದತ್ತ ಯುವಕ ಯುವತಿಯರು ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ರಾಷ್ಟ್ರ ರಾಮ ರಾಜ್ಯ ಅಗುವುದರಲ್ಲಿ ಸಂದೇಹವೇ ಇಲ್ಲ ಅಲ್ಲವೇ..??. ಹೌದು, ಬಂಧುಗಳೆ ಪ್ರತಿಯೊಂದು ಮನೆಯ ಸದಸ್ಯನಿಂದ ಹಿಡಿದು ಈ ಬದಲಾವಣೆ ಅತ್ಯವಶ್ಯಕ ಎಂದು ನನಗನ್ನಿಸಿದೆ. ನಿಮಗೆ…???

Advertisement

ಒಂದು ಉದಾಹರಣೆಯೊಂದಿಗೆ ಹೇಳುವುದಾದರೆ….

ಪ್ರತಿ ಮನುಷ್ಯನು ಒಂದಲ್ಲ ಒಂದು ಕಾಯಕದಲ್ಲಿ ತೊಡಗಲೇಬೇಕು ನಿಜ ಹಾಗಂತ ಒಬ್ಬ ಇನ್ನೊಬ್ಬನನ್ನು ತುಳಿದು ಬದುಕಿದರೆ ಅದು ಲಾಭವೇ ನೀವೇ ಹೇಳಿ…???

ಸಹಜ ಸುಂದರವಾಗಿ ನೀಡಿದ ದೈವ ದತ್ತ ಕೊಡುಗೆನ್ನು ಖಂಡಿಸಿ ಅತೀ ಬುದ್ಧಿವಂತಿಕೆಯ ಸೋಗಿನಲ್ಲಿ ನಮ್ಮನ್ನು ನಾವೇ ನಿಂದಿಸಿಕೊಂಡು ಕಾಯಾ ವಾಚಾ ಮನಸಾ ಕಾಯಕ ಮಾಡದೆ ಇರುವುದರಲ್ಲೆ ದೋಚುವ ಮನಸ್ಸು ಹೊಂದಿದರೆ ರಾಷ್ಟ್ರ ಉತ್ತಮವಾಗಲು ಸಾಧ್ಯವೇ…???
ಅಹಂಕಾರ ಮತ್ತು ನಾನೇ ದೊಡ್ಡವ ಎಂಬ ಅಹಂ ತೊರೆದು ಸ್ನೇಹ, ಪ್ರೀತಿ, ನಂಬಿಕೆ, ವಿಶ್ವಾಸಾರ್ಹತೆ ಬೆಳಸಿಕೊಂಡರಾಗದೆ.

ಭಯ: ರಾಷ್ಟ್ರದ ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ ಮೊದಲು ಜನ ಸಾಮಾನ್ಯರ ವ್ಯಕ್ತಿತ್ವದತ್ತ ಅವಲೋಕಿಸುವುದು ಒಳ್ಳೆಯದಲ್ಲವೆ…
ಧೈರ್ಯ : ಒಬ್ಬ ಕೃಷಿಕ ತನ್ನ ಭೂಮಿ ಮತ್ತು ಮಳೆಯನ್ನು ನಂಬಿ ಬದುಕುವಾಗ ಆತನು ಬೆಳೆದ ಬೆಳೆ ಮೂರನೇಯವನ ಪಾಲಾದರೆ ಆತ ಬದುಕುವುದಾದರೂ ಹೇಗೆ…?

ವರ್ತಕ ಮತ್ತು ದಲ್ಲಾಳಿಗೆ ಲಾಭವಾದರೆ ಕೃಷಿಕನಿಗೆ ನಷ್ಟದ ಪರಿಹಾರವಾಗಿ ರಾಷ್ಟ್ರದ ರಾಜ ಬೊಕ್ಕಸ ಎಲ್ಲವೂ ಖಾಲಿ ಖಾಲಿ. ಹಾಗಾದರೆ,

Advertisement

ರಾಷ್ಟ್ರ ನಿರ್ಮಾಣ ಹೇಗೆ ಸಾಧ್ಯ.

ರಾಷ್ಟ್ರದ ಆರ್ಥಿಕ ಸಾಮಾಜಿಕ ಧಾರ್ಮಿಕ ಬೆಳವಣಿಗೆ ಇಂದಿನ ಯುವ ಜನತೆಯು ಹೆಗಲ ಮೇಲೆ ಹೊತ್ತು  ರಾಷ್ಟ್ರವನ್ನು ನವ ನಿರ್ಮಾಣದತ್ತ ಸಾಧಿಸಬೇಕಿದೆ.

ಹಾಗಾದರೆ ಯವ ಜನತೆಯ ಪಾತ್ರದ ಬಗ್ಗೆ ತಿಳಿಯೋಣವೇ…? ಸಮಾಜದ ಆಗು ಹೋಗುಗಳ ಅರಿವು ಮೂಡಿಸುವ ಚಾಣಾಕ್ಷತನ ಇಂದಿನ ಯುವ ಜನರಲ್ಲಿ ಮೂಡಬೇಕೆ ಹೊರತು ತಪ್ಪು ಸಂದೇಶವನ್ನು ರವಾನಿಸುವ ನಿರುಪಯುಕ್ತ ಮಾಹಿತಿ ಎತ್ತಿ ಹಿಡಿಯುವ ಸಂದೇಶ ಯುವ ಜನತೆಯಲ್ಲಿರಬಾರದು. ಯುವ ಜನತೆ ಒಂದಾದರೆ ಉತ್ತಮ ರಾಷ್ಟ್ರ ನಿರ್ಮಾಣವುದರಲ್ಲಿ ಯಾವ ಸಂದೇಹವೂ ಇರುವುದಿಲ್ಲ.

ಹಳ್ಳಿಗಳು ಗುಡಿಸಲು ರಹಿತವಾದಲ್ಲಿ ಪ್ರಾಕೃತಿಕ ಸೌಂದರ್ಯ ನಾಷವಾಗಿ ಉಷ್ಣತೆಗೆ ಅವಕಾಶ ನಾವುಗಳೇ ಕಲ್ಪಿಸಿದಂತಾಗಲಿಲ್ಲವೇ…?
ಯಾಕೀ ಬದಲಾವಣೆ ತಿದ್ದುಪಡಿ ಅಥವಾ ಅಭಿವೃದ್ಧಿ ಮಾಡಲು ಹೋಗಿ ಅನೇಕ ರೀತಿಯ ದುಷ್ಪರಿಣಾಮ ಬೀರುವ ಅವಕಾಶವನ್ನು ನಮ್ಮ ಕೈಯಾರೆ ನಾವೇ ತರಿಸಿಕೊಳ್ಳುವ ಮಾರ್ಗ ನಮಗೇಕೆ ಬೇಕು. ಹಳ್ಳಿ ಹಳ್ಳಿಯಾಗಿರಲಿ ದಿಲ್ಲಿ ದಿಲ್ಲಿಯಾಗಿರಲಿ ಅದುವೇ ಚೆಂದ ಆದರೆ ಮನುಷ್ಯನ ವ್ಯಕ್ತಿ ವಿಕಸನ ಮಾತ್ರ ಬೆಳೆಯಬೇಕಿದೆ. ಸುಶಿಕ್ಷಿತ ನಡವಳಿಕೆಯಿಂದ ನಮ್ಮ ರಾಷ್ಟ್ರ ನಿರ್ಮಾಣ ಖಂಡಿತ ಸಾಧ್ಯವಿದೆ.

# ರೇಣುಕಾ ರಮೇಶ ನಾವಲಗಿ 
ಕೆ ವಿ ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಸುಳ್ಯ 

Advertisement
Advertisement

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಅಕುಲ್ ಕಮಿಲ
July 1, 2025
1:58 PM
by: ದ ರೂರಲ್ ಮಿರರ್.ಕಾಂ
ನಿಮ್ಮ ಚಿತ್ರ – ನಮ್ಮ ಬೆಳಕು | ಅನಿರುದ್ಧ ಪಿ |
June 30, 2025
5:36 PM
by: ದ ರೂರಲ್ ಮಿರರ್.ಕಾಂ
ನಿಮ್ಮ ಚಿತ್ರ – ನಮ್ಮ ಬೆಳಕು | ಅನಿರುದ್ಧ ಪಿ |
June 30, 2025
5:26 PM
by: ದ ರೂರಲ್ ಮಿರರ್.ಕಾಂ
ನಿತ್ಯ ಜಂಜಡದ ನಡುವೆ……… ಉಪ್ಪಿನಕಾಯಿಯ ಚಿಂತೆ..!
June 30, 2025
6:53 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

You cannot copy content of this page - Copyright -The Rural Mirror

Join Our Group