ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರಕ್ಕೆ ರಮಾನಾಥ್ ರೈ ಭೇಟಿ

June 28, 2019
10:30 AM

ಪುತ್ತೂರು: ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪುತ್ತೂರಿನ ಮೊಟ್ಟೆತ್ತಡ್ಕದಲ್ಲಿರುವ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರಕ್ಕೆ  ಭೇಟಿ ನೀಡಿದರು.

Advertisement
Advertisement
Advertisement
Advertisement

ಗೇರು ತೋಟದ ಬೆಳೆಸುವಿಕೆ, ತಳಿ ಗುಣಧರ್ಮಗಳು, ಭೂಮಿ ತಯಾರಿ, ಗೊಬ್ಬರ ಮತ್ತು ಕೀಟ, ರೋಗ ನಿರ್ವಹಣೆ ಮತ್ತು ಮಾರುಕಟ್ಟೆಯ ಬಗ್ಗೆ ಮಾಹಿತಿ ಪಡೆದರು. ಹೊಸ ಹೈಬ್ರಿಡ್ ತಳಿಯಾದ ಹೆಚ್-130 ಬಗ್ಗೆ ಮಾಹಿತಿ ಪಡೆದು ಅದರ ಗುಣಧರ್ಮಗಳ ಮತ್ತು ನಿರ್ವಹಣೆ ಬಗ್ಗೆ ಬಹಳ ಆಸಕ್ತಿಯಿಂದ ಆಲಿಸಿದರು. ಜೊತೆಗೆ ಘನಸಾಂದ್ರ ಪದ್ಧತಿ ಕೃಷಿಯ ಬಗ್ಗೆ ವಿಚಾರಿಸಿ ಮೂರು ಎಕರೆ ಜಾಗದಲ್ಲಿ ಕೃಷಿ ಮಾಡುವ ಬಗ್ಗೆ ಮಾಹಿತಿ ಪಡೆದು ಗಿಡಗಳನ್ನು ತೆಗೆದುಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದರು.ಬಳಿಕ ಕೊಯಿಲಿನ ನಂತರ ಸಂಸ್ಕರಣೆ ಹಾಗೂ ಗೇರು ಹಣ್ಣಿನ ಉಪಯೋಗದ ಬಗ್ಗೆ ಮಾಹಿತಿ ಪಡೆದರು. ಗೇರು ಹಣ್ಣಿನಿಂದ ತಯಾರಿಸಿದ ವಿವಿಧ ಉತ್ಪನ್ನಗಳು ಅಂದರೆ ಜ್ಯೂಸ್, ಜಾಮ್, ಜೆಲ್ಲಿ, ಕುರ್ಕುರೆ, ಮೌತ್ ಫ್ರೆಶ್ನೆರ್ ಮುಂತಾದ ತಯಾರಿಗಳನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು. ಸಂಸ್ಥೆಯ ಬೆಳವಣಿಗೆ ಹಾಗೂ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಿರ್ದೇಶಕರಾದ ಡಾ. ಎಂ.ಜಿ. ನಾಯಕ್, ವಿಜ್ಞಾನಿಗಳಾದ ಡಾ. ಶಂಸುದ್ದೀನ್, ಡಾ. ಪ್ರೀತಿಯವರು ಹಾಜರಿದ್ದು ಮಾಹಿತಿ ನೀಡಿದರು.

Advertisement

ಈ ಸಂದರ್ಭದಲ್ಲಿ  ಕಾವು ಹೇಮನಾಥ ಶೆಟ್ಟಿ, ಪ್ರಸಾದ್ ಕೌಶಲ್ ಶೆಟ್ಟಿ, ನೇಮಾಶ್ವ ಸುವರ್ಣ ಮತ್ತಿತರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಗ್ರಾಮೀಣ, ನಗರ ಪ್ರದೇಶದ ಕಟ್ಟೆಗಳ ಅಭಿವೃದ್ಧಿ – ಧಾರ್ಮಿಕ ಪರಂಪರೆ ಸಂರಕ್ಷಣೆ
January 31, 2025
10:23 PM
by: The Rural Mirror ಸುದ್ದಿಜಾಲ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30 ಕುಷ್ಠರೋಗಿಗಳು  ಪತ್ತೆ
January 30, 2025
7:15 AM
by: The Rural Mirror ಸುದ್ದಿಜಾಲ
ದಾವಣಗೆರೆ  ಜಿಲ್ಲೆ| ಬೆಂಬಲ ಬೆಲೆ ಯೋಜನೆಯಲ್ಲಿ  ಕಡಲೆಕಾಳು  ಖರೀದಿಗೆ  ನಿರ್ಧಾರ
January 30, 2025
7:06 AM
by: The Rural Mirror ಸುದ್ದಿಜಾಲ
“ಕರಾವಳಿ ಸ್ಥಿತಿಸ್ಥಾಪಕ ಗ್ರಾಮ” ಯೋಜನೆಗೆ ಕಾರಾವಾರದ ಎರಡು ಗ್ರಾಮಗಳು ಆಯ್ಕೆ
January 30, 2025
6:59 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror