ಸುಳ್ಯ: ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಐವರ್ನಾಡು ಗ್ರಾಮ ಘಟಕದ ಕಚೇರಿ ಉದ್ಘಾಟನೆ ಡಿ.16 ರಂದು ನಡೆಯಿತು. ರೈತ ಸಂಘದ ತಾಲೂಕು ಘಟಕ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ದೀಪ ಬೆಳಗಿಸಿ ಉದ್ಘಾಟಿಸಿದರು. ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ತೀರ್ಥರಾಮ ನೆಡ್ಚಿಲು ರೈತ ಸಂಘಟನೆ ಬಗ್ಗೆ ಮಾಹಿತಿ ನೀಡಿದರು. ನೂಜಾಲು ಪದ್ಮನಾಭ ಸಭೆಯ ಅಧ್ಯಕ್ಷತೆ ವಹಿಸಿದ್ದರು .
ವೇದಿಕೆಯಲ್ಲಿ ಎಪಿಎಂಸಿ ಸದಸ್ಯರಾದ ನವೀನ ಸಾರಕೆರೆ, ರೈತ ಶ್ರಮಿಕರ ಸಹಕಾರಿ ಸಂಘದ ಅಶೋಕ್ ಎಡಮಲೆ, ಗೌರವ ಅಧ್ಯಕ್ಷ ಕೃಷ್ಣಪ್ಪ ನೆಕ್ರಾಪ್ಪಾಡಿ, ಖಜಾಂಜಿ ಭರತ್ ಕುಮಾರ್ ಐವರ್ನಾಡು ಭಾಗವಹಿಸಿದ್ದರು. ಡಿ. 17 ರಂದು ಮಂಗಳೂರಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಸುಳ್ಯ ತಾಲುಕಿನ ಹೆಚ್ಚು ರೈತರು ಭಾಗವಹಿಸಬೇಕೆಂದು ರೈತ ಸಂಘದ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ. ರೈತರ ಸಾಲ ಮನ್ನಾ ಹಾಗು ಇತರ 19 ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಯಲಿದೆ ಎಂದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel