ಸುಳ್ಯ: ರೋಟರಿ ಕ್ಲಬ್ ಸುಳ್ಯ ಸಿಟಿ ಹಾಗೂ ರೋಟರಿ ಕ್ಲಬ್ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ರೋಟರಿ ರೈಡರ್ ಮೇನಿಯಾ – 2019 ಬೈಕ್ ರ‍್ಯಾಲಿಯನ್ನು ಸೆ. 21, 22 ರಂದು ಆಯೋಜಿಸಲಾಯಿತು. ಫಾಸ್ಟ್ ಟ್ರಾಕ್ ನ ಆವರಣದಿಂದ ಆರಂಭಗೊಂಡ ಬೈಕ್ ರ‍್ಯಾಲಿಯನ್ನು ರೋಟರಿ ವಲಯ ಇದರ ಅಸಿಸ್ಟೆಂಟ್ ಗವರ್ನರ್ ರೊ. ಡಾ. ಕೇಶವ ಪಿ.ಕೆ. ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿ ಇದರ ಅಧ್ಯಕ್ಷ ರೊ. ಭಾನುಪ್ರಕಾಶ್, ಕಾರ್ಯದರ್ಶಿ ಗುರು ವಿಕ್ರಮ ಪ್ರಸಾದ್, ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷ ರೊ. ಡಾ. ಪುರುಷೋತ್ತಮ್, ಕಾರ್ಯದರ್ಶಿ ರೊ. ಸನತ್, ಕಾರ್ಯಕ್ರಮದ ಸಂಘಟಕರಾದ ರೊ. ಪ್ರೀತಮ್ ಡಿ.ಕೆ. ಮತ್ತು ಇನ್ನರ್‌ವ್ಹೀಲ್ ಅಧ್ಯಕ್ಷೆ ರೊ. ಡಾ. ಹರ್ಷಿತಾ ಪುರುಷೋತ್ತಮ ಉಪಸ್ಥಿತರಿದ್ದರು.
ಪರಿಸರ ಸಂರಕ್ಷಣೆ ಹಾಗೂ ಜಲ ಸಂರಕ್ಷಣೆಯ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸುಳ್ಯ ಸಿಟಿ ಹಾಗೂ ರೋಟರಿ ಕ್ಲಬ್ ಸುಳ್ಯ ಇದರ ಸುಮಾರು 26 ಮಂದಿ ಸದಸ್ಯರು ಈ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
ಸುಳ್ಯದಿಂದ ಆರಂಭಗೊಂಡ ರ‍್ಯಾಲಿಯು ಸುಬ್ರಹ್ಮಣ್ಯ, ಬಿಸಿಲೆ, ಕೂಡುರಸ್ತೆ, ಬಾಚಳ್ಳಿ, ಅತ್ತಿಹಳ್ಳಿ, ಹೊಂಗದಹಳ್ಳ ಮಾರ್ಗವಾಗಿ ಪುನಃ ಸುಳ್ಯಕ್ಕೆ ಬಂದು ಕೊನೆಗೊಂಡಿತು.