ರೋಹಿತ್, ರಾಹುಲ್ ಭರ್ಜರಿ ಶತಕ- ಲಂಕಾ ವಿರುದ್ಧ ಭಾರತಕ್ಕೆ 7 ವಿಕೆಟ್​ಗಳ ಜಯ

July 7, 2019
6:58 AM

ಲೀಡ್ಸ್​: ಆರಂಭಿಕ ಆಟಗಾರರಾದ ಕೆ.ಎಲ್​​ ರಾಹುಲ್​​​ (111) ಹಾಗೂ ರೋಹಿತ್​​ ಶರ್ಮ (103) ಅವರ ಸ್ಫೋಟಕ ಶತಕಗಳ ನೆರವಿನಿಂದ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ಎದುರು 7 ವಿಕೆಟ್​​​​​​ಗಳ ಭರ್ಜರಿ ಜಯ ದಾಖಲಿಸಿದೆ.

Advertisement
Advertisement

ಇಲ್ಲಿನ ಹೇಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್​​ ಮಾಡಿದ ಲಂಕಾ 50 ಓವರ್​ಗಳಲ್ಲಿ 7 ವಿಕೆಟ್​​ ನಷ್ಟಕ್ಕೆ 264 ರನ್​ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 43.3 ​ಗಳಲ್ಲಿ 3 ವಿಕೆಟ್​​ ನಷ್ಟಕ್ಕೆ 265 ಗಳಿಸಿ ಗೆಲುವಿನ ನಗೆ ಬೀರಿತು.

ಭಾರತದ ಪರ ರಾಹುಲ್​​ 111, ರೋಹಿತ್​​​ 103, ನಾಯಕ ವಿರಾಟ್​​ ಕೊಹ್ಲಿ 34* ಉತ್ತಮ ಆಟವಾಡಿದರೆ, ರಿಷಬ್​​​ ಪಂತ್​ 4 ಮತ್ತು ಹಾರ್ದಿಕ್​​ ಪಾಂಡ್ಯ 7* ರನ್ ಗಳಿಸಿದರು.
ಶ್ರೀಲಂಕಾ ಪರ ಲಸಿತ್​​ ಮಲಿಂಗಾ, ಕುಸಾನ್​​ ರಜಿತಾ ಹಾಗೂ ಇಸ್ರು ಉಡಾನ ತಲಾ ಒಂದು ವಿಕೆಟ್​​ ಪಡೆದರು.

ಇದಕ್ಕೂ ಮೊದಲು ಬ್ಯಾಟ್​​ ಮಾಡಿದ ಶ್ರೀಲಂಕಾ ಏಂಜಲೊ ಮ್ಯಾಥ್ಯೂಸ್​​​​​​ (113) ಶತಕ ಮತ್ತು ಲಾಹಿರು ಥಿರುಮನ್ನೆ ಅರ್ಧ ಶತಕ (53)ದ ನೆರವಿನಿಂದ ಸವಾಲಿನ ಮೊತ್ತ ಪೇರಿಸಿಸರು, ನಾಯಕ ದಿಮುತ್​ ಕರುಣಾರತ್ನೆ 10 ಹಾಗೂ ಕುಸಾಲ್​​ ಪೆರೆರಾ 18, ಅವಿಶಾಕ ಫೆರ್ನಾಂಡೊ 20 ಮತ್ತು ಕುಸಾಲ್​​ ಮೆಂಡೀಸ್​​​​ 3 ರನ್ ಗಳಿಸಿ ಔಟಾದರು.

ಭಾರತದ ವೇಗಿ ಜಸ್ಪ್ರೀತ್​ ಬುಮ್ರಾ 37ಕ್ಕೆ 3 ವಿಕೆಟ್ ಪಡೆದರೆ, ಭುವನೇಶ್ವರ್​​ ಕುಮಾರ್​, ಹಾರ್ದಿಕ್​​ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್​​ ತಲಾ ಒಂದು ವಿಕೆಟ್​​ ಕಬಳಿಸಿದರು. ಈ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮ ಐದು ಶತಕ ಬಾರಿಸಿದ್ದಾರೆ.

Advertisement

ಲೀಗ್​​ ಹಂತ ಕೊನೆಯ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದ ಕೊಹ್ಲಿ ಪಡೆ ವಿಶ್ವಕಪ್​ನ 9 ಪಂದ್ಯಗಳಲ್ಲಿ 7 ರಲ್ಲಿ ಜಯ ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಒಂದು ವೇಳೆ ಆಸ್ಟ್ರೇಲಿಯಾ ತಂಡ ದಕ್ಷಿಣ ಆಪ್ರಿಕಾ ಎದುರು ಗೆಲುವು ಸಾಧಿಸಿದರೆ, ಭಾರತ ಎರಡನೇ ಸ್ಥಾನಕ್ಕಿಳಿಯಲಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜು.30 ರಂದು ನಿಸಾರ್ ಭೂ ವಿಶ್ಲೇಷಣಾ ಉಪಗ್ರಹ ಉಡಾವಣೆ
July 23, 2025
6:13 AM
by: The Rural Mirror ಸುದ್ದಿಜಾಲ
ಸಂಸತ್ತಿನ ಮುಂಗಾರು ಅಧಿವೇಶನ | “ಮುಂಗಾರು ಅಧಿವೇಶನ”ಕ್ಕೂ ಮುನ್ನ ಪ್ರಧಾನಿ ಭಾಷಣ |
July 22, 2025
8:15 AM
by: The Rural Mirror ಸುದ್ದಿಜಾಲ
ಇಂಧನ ಆಮದು ದೇಶಗಳ ಗುಂಪು ವಿಸ್ತರಿಸಿದ ಭಾರತ – 2 ಲಕ್ಷ ಚ.ಕಿ.ಮೀ. ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಪರಿಶೋಧನೆ
July 17, 2025
9:51 PM
by: The Rural Mirror ಸುದ್ದಿಜಾಲ
ಮೇಘಾಲಯದಲ್ಲಿ “ಜಾಕ್‌ ಫ್ರುಟ್‌ ಮಿಶನ್”‌ ಮೂಲಕ ಹಲಸು ಬೆಳೆಗೆ ಪ್ರೋತ್ಸಾಹ | ಮೇಘಾಲಯದ ಭೇಟಿ ನೀಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಹಲಸಿನ ಹಣ್ಣು ಗಿಫ್ಟ್‌ |
July 15, 2025
8:01 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group