ಲಾಕ್ಡೌನ್ ಪರಿಣಾಮ | ಚಂಡಮಾರುತದಲ್ಲೂ ಸಿಕ್ಕಿತು ಪರಿಶುದ್ಧ ಗಾಳಿ |

June 5, 2020
10:11 PM

ನವದೆಹಲಿ:  ಅರಬ್ಬೀ ಸಮುದ್ರದಲ್ಲಿ  ಉಂಟಾದ ಈ ಬಾರಿಯ ಚಂಡಮಾರುತ ನಿಸರ್ಗ ಮಹಾರಾಷ್ಟ್ರದ ಮುಂಬೈ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿ ಅಪಾಯದಿಂದ ಪಾರಾಗಿದೆ. ಆದರೆ ಈ ಚಂಡಮಾರುತ  ಇನ್ನೊಂದು ಶುಭ ಸುದ್ದಿಯನ್ನೂ ನೀಡಿದೆ. ಇದು  ಪರಿಶುದ್ಧವಾದ ಗಾಳಿ. ಇದಕ್ಕೆ ಕಾರಣ ಲಾಕ್ಡೌನ್. ಅಂದರೆ ಪರಿಸರ ಮಾಲಿನ್ಯದಿಂದ ಬಹುಪಾಲು ಮುಕ್ತಿ.

ಪರಿಸರ ಮಾಲಿನ್ಯ ಅಥವಾ ಗಾಳಿಯ ಶುದ್ಧತೆಯನ್ನು  ಆಗಾಗ ಪರಿಶೀಲನೆ ಮಾಡಲಾಗುತ್ತದೆ. ಆದರೆ ಪ್ರತೀ ಬಾರಿ ಚಂಡಮಾರುತ ಹಾಗೂ ಭಾರೀ ಗಾಳಿ ಬಂದಾಗ ವಾಯು ಶುದ್ಧತೆಯನ್ನು  ಅಥವಾ ವಾಯು ಗುಣಮಟ್ಟದ ಸೂಚ್ಯಂಕ (AQI)  ಪರಿಶೀಲನೆ ಮಾಡಲಾಗುತ್ತದೆ.  ಈ ಬಾರಿಯ ನಿಸರ್ಗ ಚಂಡಮಾರುತದ ಬಳಿಕ ಪರಿಶೀಲನೆ ಮಾಡಿದಾಗ ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) 22 ಕ್ಕೆ ದಾಖಲಾಗಿದ್ದು ಇದು ಇತ್ತೀಚೆಗಿನ ವರದಿಯ ಪ್ರಕಾರ ಗಾಳಿಯ ಶುದ್ಧತೆ ಉತ್ತಮ ಗುಣಮಟ್ಟದ ವ್ಯಾಪ್ತಿಗೆ ಒಳಪಟ್ಟಿದೆ ಹಾಗೂ ಇದು ಈ ವರ್ಷದ ಅತ್ಯಂತ ಉತ್ತಮ ದಾಖಲಾತಿ  ಎಂದು  ಸಿಸ್ಟಂ ಆಫ್ ಏರ್ ಕ್ವಾಲಿಟಿ ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (SAFAR) ಹೇಳಿದೆ.

ಸ್ವಚ್ಛವಾದ ಗಾಳಿಯು ಈಗ ಸಿಗುವಂತಾಗಿದೆ. ವಾಯು ಮಾಲಿನ್ಯದ ಪ್ರಮಾಣ ಕಡಿಮೆಯಾಗಿರುವುದು  ಇದರ ಸಂಕೇತವಾಗಿದೆ. ವಾಯುಸಾಂದ್ರತೆ ಈ ಹಿಂದೆ 60 ಮೈಕ್ರೊಗ್ರಾಂಗಳಷ್ಟುಇದ್ದರೆ ಈಗ ತೀರಾ ಇಳಿಕೆಯಾಗಿದ್ದು 22 ಮೈಕ್ರೊಗ್ರಾಂಗಳಷ್ಟು ದಾಖಲಾಗಿದೆ. 

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 03-06-2026 | ಕರಾವಳಿಯಲ್ಲಿ ಮುಂಗಾರು ಚುರುಕು – ಜೂನ್ 8 ರಿಂದ ರಾಜ್ಯಾದ್ಯಂತ ಮಳೆಯ ಅಬ್ಬರ ಸಾಧ್ಯತೆ
June 3, 2026
1:54 PM
by: ಸಾಯಿಶೇಖರ್ ಕರಿಕಳ
ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶ ಸಾಧ್ಯತೆ – ಕರಾವಳಿ, ಉತ್ತರ ಒಳನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ
June 3, 2026
6:54 AM
by: ದ ರೂರಲ್ ಮಿರರ್.ಕಾಂ
ಮಿಜೋರಾಂನಲ್ಲಿ ಅಡಿಕೆ ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ | ₹24 ಕೋಟಿ ಮೌಲ್ಯದ ಅಡಿಕೆ ವಶ, 468 ಪ್ರಕರಣ ದಾಖಲು, 292 ಮಂದಿ ಬಂಧನ
June 3, 2026
6:47 AM
by: ಮಿರರ್‌ ಡೆಸ್ಕ್
ಮಳೆ ಆರಂಭವಾಗುತ್ತಿದ್ದಂತೆಯೇ ಗಿಡಗಳ ನಾಟಿಗೆ ಸಿದ್ಧತೆ – ಅಡಿಕೆ ಗಿಡಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ…!
June 2, 2026
9:34 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror