ಲಾಕ್ಡೌನ್ ಪರಿಣಾಮ – ಭಾರತ ಸೇಫ್ | ಜಗತ್ತಿನಲ್ಲಿ ಭಾರತ 16 ನೇ ಸ್ಥಾನದಲ್ಲಿದೆ | ದೇಶದ 78 ಜಿಲ್ಲೆಗಳಲ್ಲಿ ಕೊರೊನಾ ನೆಗೆಟಿವ್ |

April 24, 2020
11:00 PM

ನವದೆಹಲಿ: ಭಾರತದಲ್ಲಿ ಲಾಕ್ಡೌನ್  ಮಾಡಿರುವ ಪರಿಣಾಮ ಸುರಕ್ಷಿತವಾಗಿದೆ. ಇದರ ನಿಯಮ ಇನ್ನಷ್ಟು ಪಾಲನೆಯಾಗಬೇಕು, ಕೊರೊನಾ ಮುಕ್ತ ದೇಶವಾಗಲು ಎಲ್ಲರ ಸಹಕಾರ ಬೇಕಿದೆ. ಈಗಾಗಲೇ ಲಾಕ್ಡೌನ್ ಪರಿಣಾಮಕಾರಿಯಾಗಿದೆ ಎಂದು ಭಾರತ ಸರಕಾರದ ಆರೋಗ್ಯ ಸಚಿವಾಲಯ ಹೇಳಿದೆ.

Advertisement
Advertisement

ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವಾಲಯ,  ಭಾರತದಲ್ಲಿ ಕೊರೋನಾ ಸಾಂಕ್ರಾಮಿಕ ರೋಗವು ದ್ವಿಗುಣಗೊಳ್ಳುವ ದರ ಪ್ರಸ್ತುತ 9 ದಿನಗಳಾಗಿವೆ, ಕಳೆದ 14  ದಿನಗಳಿಂದ ದೇಶದ 78 ಜಿಲ್ಲೆಗಳಲ್ಲಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಇದರಲ್ಲಿ 15 ಜಿಲ್ಲೆಗಳಲ್ಲಿ ಕಳೆದ 28 ದಿನಗಳಲ್ಲಿ ಒಂದೂ ಕೊರೊನಾ ಪ್ರಕರಣ ದಾಖಲಾಗಿಲ್ಲ.ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ. 20ರಷ್ಟಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1752 ಹೊಸ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಸಾಂಕ್ರಾಮಿಕ ರೋಗದ ಪ್ರಕರಣಗಳ ಸಂಖ್ಯೆ 23,452 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 491 ರೋಗಿಗಳು ಗುಣಮುಖರಾಗಿದ್ದಾರೆ. ಈ ಮೂಲಕ ಗುಣಮುಖರಾದರು ಸಂಖ್ಯೆ 4, 813  ಗಡಿಯನ್ನು ದಾಟಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಈವರೆಗೆ ಕೊರೊನಾದಿಂದ ಮೃತ ಪಟ್ಟವರ ಸಂಖ್ಯೆ 723 ಕ್ಕೆ ಏರಿದೆ.

ಎಲ್ಲಾ ರಾಜ್ಯ ಸರಕಾರಗಳು ಸಾಂಕ್ರಾಮಿಕ ರೋಗ ಹೆಚ್ಚಿರುವ ಅಥವಾ ಸೋಂಕಿನ ಸಂಖ್ಯೆ ಅತಿ ವೇಗದಲ್ಲಿ ದ್ವಿಗುಣಗೊಳ್ಳುತ್ತಿರುವ ಜಿಲ್ಲೆಗಳತ್ತ ಹೆಚ್ಚಿನ ಗಮನವನ್ನು ನೀಡಬೇಕಾಗಿದೆ ಎಂದು ಸಚಿವಾಲಯ ಹೇಳಿದೆ.

ಭಾತದಲ್ಲಿ  ಸಾವಿನ ಸಂಖ್ಯೆ 723 ಕ್ಕೆ ಏರಿಕೆಯಾದರೆ ವಿಶ್ವಾದ್ಯಂತ 1.9 ಲಕ್ಷ ಮಂದಿ ಮೃತಪಟ್ಟಿದ್ದಾರೆ.ಜಾಗತಿಕ ಲೆಕ್ಕಾಚಾರದಲ್ಲಿ ಭಾರತ 16 ನೇ ಸ್ಥಾನದಲ್ಲಿದೆ. ವಿಶ್ವಾದ್ಯಂತ 27 ಲಕ್ಷ ಜನರಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯ ಪ್ರದೇಶದಲ್ಲಿ ಅತಿ ಹೆಚ್ಚುಮಂದಿ ಮೃತಪಟ್ಟಿದ್ದಾರೆ.  ಈ ಮೂರು ರಾಜ್ಯಗಳಲ್ಲೇ 478 ಜನರು ಮೃತಪಟ್ಟಿದ್ಧಾರೆ.

ಇದೇ ವೇಳೆ ವಿಶ್ವದ ದೊಡ್ಡಣ್ಣ ಅಮೇರಿಕಾದಲ್ಲಿ 50,031 ಜನರು ಕೊರೊನಾಗೆ ಬಲಿಯಾಗಿದ್ದಾರೆ, 8,70,000 ಪ್ರಕರಣಗಳು ಖಚಿತಗೊಂಡಿವೆ. ಈಗ ಅಮೇರಿಕಾ ಕೊರೊನಾ ಬಿಕ್ಕಟ್ಟು ಎದುರಿಸುತ್ತಿದೆ, ದೇಶವನ್ನು ಸುರಕ್ಷಿತಗೊಳಿಸಲು ಹರಸಾಹಸ ಪಡುತ್ತಿದೆ.  ಪ್ರತೀ ದಿನ ಸುಮಾರು 2 ಸಾವಿರ ಮಂದಿ ಮೃತಪಡುತ್ತಿದ್ದಾರೆ.ಈಗ ಅಮೇರಿಕಾದಲ್ಲಿ ಆಸ್ಪತ್ರೆಯಲ್ಲಿ  ಮೃತಪಟ್ಟವರ ವರದಿಗಳು ಮಾತ್ರಾ ಲಭ್ಯವಾಗುತ್ತಿದ್ದು ಮನೆಗಳಲ್ಲಿ ಮೃತಪಟ್ಟವರ ಸಂಖ್ಯೆ ಲಭ್ಯವಾಗುತ್ತಿಲ್ಲ ಎಂದು ಸುದ್ದಿಸಂಸ್ಥೆ ವರದಿ ಮಾಡಿವೆ.ನೂಯಾರ್ಕ್​ನಲ್ಲಿ ಶೇ.40ರಷ್ಟು ಸಾವುಗಳು ಸಂಭವಿಸಿದೆ, ನ್ಯೂಜೆರ್ಸಿ, ಮಿಚಿಗನ್ ಹಾಗೂ ಮ್ಯಾಸಚೂಸೆಟ್ಸ್​ನಲ್ಲಿ ಹೆಚ್ಚು ಸಾವು ಸಂಭವಿಸಿದೆ ಎಂದು ವರದಿಯಲ್ಲಿ  ಹೇಳಲಾಗಿದೆ. ಈ ಎಲ್ಲದರ ನಡುವೆಯೂ ಕೆಲವು ಪ್ರದೇಶಗಳಲ್ಲಿ  ಲಾಕ್ಡೌನ್ ಸಡಿಲ ಮಾಡಿದೆ.

Advertisement

 

 


Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜು.30 ರಂದು ನಿಸಾರ್ ಭೂ ವಿಶ್ಲೇಷಣಾ ಉಪಗ್ರಹ ಉಡಾವಣೆ
July 23, 2025
6:13 AM
by: The Rural Mirror ಸುದ್ದಿಜಾಲ
ಸಂಸತ್ತಿನ ಮುಂಗಾರು ಅಧಿವೇಶನ | “ಮುಂಗಾರು ಅಧಿವೇಶನ”ಕ್ಕೂ ಮುನ್ನ ಪ್ರಧಾನಿ ಭಾಷಣ |
July 22, 2025
8:15 AM
by: The Rural Mirror ಸುದ್ದಿಜಾಲ
ಇಂಧನ ಆಮದು ದೇಶಗಳ ಗುಂಪು ವಿಸ್ತರಿಸಿದ ಭಾರತ – 2 ಲಕ್ಷ ಚ.ಕಿ.ಮೀ. ಪ್ರದೇಶದಲ್ಲಿ ಹೈಡ್ರೋಕಾರ್ಬನ್ ಪರಿಶೋಧನೆ
July 17, 2025
9:51 PM
by: The Rural Mirror ಸುದ್ದಿಜಾಲ
ಮೇಘಾಲಯದಲ್ಲಿ “ಜಾಕ್‌ ಫ್ರುಟ್‌ ಮಿಶನ್”‌ ಮೂಲಕ ಹಲಸು ಬೆಳೆಗೆ ಪ್ರೋತ್ಸಾಹ | ಮೇಘಾಲಯದ ಭೇಟಿ ನೀಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಹಲಸಿನ ಹಣ್ಣು ಗಿಫ್ಟ್‌ |
July 15, 2025
8:01 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group