ವರುಣದಲ್ಲಿ ಸೋಮಣ್ಣಗೆ ಮತ್ತೆ “ತಪರಾಕಿ”- ಗ್ರಾಮಕ್ಕೆ ಬರಲು ಬಿಡದೆ “ಗೇಟ್ ಪಾಸ್”

April 29, 2023
11:27 AM

ಮೈಸೂರು- ಸಿದ್ದರಾಮಯ್ಯ ಅಖಾಡಕ್ಕೆ ಇಳಿದಿರುವ ಮೈಸೂರಿನ ವರುಣದಲ್ಲಿ ಬಿಜೆಪಿ ಅಭ್ಯರ್ಥಿ ಸೋಮಣ್ಣಗೆ ಮತದಾರರು ಮತ್ತೆ ತಪರಾಕಿ ಹಾಕಿದ್ದಾರೆ.

Advertisement
Advertisement

 

“ಸಂವಿಧಾನ ಬದಲಾಯಿಸುವವರು ನಮ್ಮೂರಿಗೆ ಬರಬೇಡಿ” ಎಂದ ಗ್ರಾಮಸ್ಥರು ವರುಣ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣನಿಗೆ ಗೇಟ್ ಪಾಸ್ ಕೊಟ್ಟಿದ್ದಾರೆ.ಸಂವಿಧಾನ ಬದಲಿಸುವ ಬಿಜೆಪಿ ಪಕ್ಷದ ಅಭ್ಯರ್ಥಿಗೆ ನಮ್ಮೂರಿಗೆ ನೋ ಎಂಟ್ರಿ ಎಂದಿದ್ದಾರೆ.

ನಂಜನಗೂಡು ತಾಲೂಕಿನ ವರುಣ ಕ್ಷೇತ್ರದ ಬಿಳುಗಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡಿರುವ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ. ಬ್ಯಾಜ್ ಟು ಬ್ಯಾಕ್ ವಿರೋಧ ವ್ಯಕ್ತವಾಗಿದೆ.

“ಗ್ರಾಮಕ್ಕೆ ಬರುವುದಕ್ಕಿಂತ ಮುಂಚೆ ಗೇಟ್ ಪಾಸ್ ಕೊಟ್ಟಿಧದಾರೆ.  ಬಿಳುಗಲಿ ಗ್ರಾಮದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿದ ಯುವಕರು ಸೋಮಣ್ಣಗೆ ಧಿಕ್ಕಾರ ಕೂಗಿದ್ದಾರೆ.
ಡಾ.ಬಿ.ಆರ್ ಅಂಬೇಡ್ಕರ್ ರಿಗೆ ಜಯಘೋಷ ಕೂಗಿದ್ದಾರೆ. ಸಂವಿಧಾನ ಬದಲಿಸ್ತೀವಿ ಅಂದ್ರೆ ಸುಮ್ಮನಿರಲ್ಲ. ಅಂಬೇಡ್ಕರ್ ವಿರೋಧಿಗಳೆ ನಮ್ಮೂರಿಗೆ ಬರಲು ನಿಮಗೆ ನೈತಿಕತೆ ಇಲ್ಲ.
ಸಂವಿಧಾನದ ಅಡಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ‌. ಸಂವಿಧಾನದ ಅಡಿಯಲ್ಲಿ ಸರ್ಕಾರ ನಡೆಸುವ ಇವರು ಸಂವಿಧಾನ ಬದಲಾಯಿಸುತ್ತೇವೆ ಅಂತಾರೆ. ಇಂತಹ ಸಂವಿಧಾನ ವಿರೋಧಿ ಬಿಜೆಪಿ ಪಕ್ಷಕ್ಕೆ ನಾವು ಮತ ಹಾಕಬೇಕಾ..? ಸಂವಿಧಾನ ಚೇಂಜ್ ಮಾಡಲು ಇವರು ಯಾರು” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Advertisement

ಬಿಜೆಪಿ ಮುಖಂಡರು ಕಾರ್ಯಕರ್ತರಿಗೆ ಗ್ರಾಮಸ್ಥರಿಂದ ಪ್ರಶ್ನೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮನವೊಲಿಕೆಗೆ ಯತ್ನಿಸಿದರು. ಆದರೆ ಪಟ್ಟು ಬಿಡದ ಯುವಕರು, ಗ್ರಾಮಸ್ಥರು ಒಪ್ಪಲಿಲ್ಲ. ಈ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.

ಇದರಿಂದ ಸೋಮಣ್ಣ  ಗ್ರಾಮಕ್ಕೆ ಬಾರದೆ ಹೊರಟು ಹೋದರು.

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 18-05-2025 | ಮೇ.19 ರಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸೂಚನೆ | ನಿರೀಕ್ಷೆಗೂ ಮುನ್ನವೇ ಮುಂಗಾರು ನಿರೀಕ್ಷೆ |
May 18, 2025
2:42 PM
by: ಸಾಯಿಶೇಖರ್ ಕರಿಕಳ
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ | ಈ ವರ್ಷ ಅದೃಷ್ಟವೋ ಅದೃಷ್ಟ!
May 18, 2025
10:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಹಾಳೆ ಉದ್ದಿಮೆ-ಮಾರುಕಟ್ಟೆ ಮತ್ತು ಪರಿಣಾಮ
May 18, 2025
8:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group