ಸುಳ್ಯ: ಮುಂಬಯಿ ರೈಲ್ವೇಯಲ್ಲಿ ಕಮರ್ಶಿಯಲ್ ವಿಭಾಗದಲ್ಲಿ ಉದ್ಯೋಗಿಯಾಗಿರುವ ಶಂಶೀರ್ ಅವರು ಯುರೋಪ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ವರ್ಲ್ಡ್ ರೈಲ್ವೇ ಅತ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಹೈಜಂಪ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಸುಳ್ಯದ ಜಯನಗರದ ನಿವಾಸಿಯಾದ ಶಂಶೀರ್ ಇದೇ ತಿಂಗಳ 11, 12 ಹಾಗೂ 13 ರಂದು ಯುರೋಪ್ ನಲ್ಲಿ ನಡೆದ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ರೈಲ್ವೇ ವಿಭಾಗದಲ್ಲಿ ಕೆಲಸ ಮಾಡುವ ಮಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಕೂಟ ನಡೆಯುತ್ತದೆ. 2009 ರಲ್ಲಿ ನಡೆದ ಬಳಿಕ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ರೈಲ್ವೇ ಉದ್ಯೋಗಿಗಳಿಗೆ ಕ್ರೀಡಾಕೂಟ ನಡೆದಿತ್ತು. ಜಪಾನ್, ಫ್ರಾನ್ಸ್ ಸೇರಿದಂತೆ 8 ದೇಶಗಳಿಂದ ರೈಲ್ವೇ ಉದ್ಯೋಗಿಗಳು ಆಗಮಿಸುತ್ತಾರೆ. ಶಂಶೀರ್ ಅವರು ಹೈಜಂಪ್ ಹಾಗೂ ಲಾಂಗ್ ಜಂಪ್ ನಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ತಲಪುವಾಗ ವಿಳಂಬವಾದ್ದರಿಂದ ಲಾಂಗ್ ಜಂಪ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಇವರು ಸುಳ್ಯದ ಜಯನಗರದ ಇಬ್ರಾಹಿಂ ಅವರ ಪುತ್ರ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel