ಬದಿಯಡ್ಕ: ಪಳ್ಳತ್ತಡ್ಕ ಎ, ಯು, ಪಿ. ಶಾಲೆಯಲ್ಲಿ ವಾಚನಾ ವಾರದ ಸಮಾರೋಪ ಸಮಾರಂಭವು ಮಂಗಳವಾರ ನಡೆಯಿತು.
ನಿವೃತ್ತ ಅಧ್ಯಾಪಕರಾದ ಕುದುಂಗಿಲ ಶ್ರೀಧರ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಾಚನಾ ದಿನಕ್ಕೆ ಸಂಬಂಧಿಸಿ ಪಿ.ಎನ್.ಪಣಿಕ್ಕರ್ ಬಗ್ಗೆ ಮಾಹಿತಿಯನ್ನು ಮಕ್ಕಳಿಗೆ ನೀಡಿದರು. ಓದಿನ ಮಹತ್ವ,ಓದುವ ವಿಧಾನ, ಒದುವ ಸಮಯ ಇತ್ಯಾದಿ ಗಳಿಗೆ ಸಂಬಂಧಿಸಿ ಪ್ರಶ್ನೆಗಳನ್ನು ಕೇಳಿಯೂ, ಮಾಹಿತಿಗಳನ್ನು ಒದಗಿಸಿಯೂ ವಚನಾವಾರದ ಸಮಾರೋಪ ಸಮಾರಂಭವನ್ನು ಅರ್ಥವತ್ತಾಗಿಸಿದರು.
ಅದರೊಂದಿಗೆ ಮಕ್ಕಳಿಗೆ ಕೆಲವು ಆಟಗಳ ಪರಿಚಯ ಮಾಡಿಸಿದರು.ಮಕ್ಕಳು ಸಂತೋಷದಿಂದ ಅದರಲ್ಲಿ ಭಾಗಿಯಾದರು. ವಿವಿಧ ಕ್ಲಬ್ ಗಳ ಉದ್ಘಾಟನೆಯು ಇದರೊಂದಿಗೆ ಜರಗಿತು.ವಾಚನಾವಾರದ ಅಂಗವಾಗಿ ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು.
ಮುಖ್ಯೋಪಾಧ್ಯಾಯರಾದ ಮಣಿ ಸ್ವಾಗತಿಸಿ ವಿದ್ಯಾ ಟೀಚರ್ ವಂದಿಸಿದರು .ಶಾಲಿನಿ ಟೀಚರ್ ಕಾರ್ಯಕ್ರಮವನ್ನು ನಿರೂಪಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel