ಪಂಜ : ಕರ್ನಾಟಕ ಆರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಆಕಡೆಮಿ ಜೇಸಿಐ ಪಂಜ ಪಂಚಶ್ರೀ ಹಾಗೂ ಗೌಡರ ಯುವ ಸೇವಾ ಸಂಘ ಸುಳ್ಯ ಮತ್ತು ಗ್ರಾಮ ಸಮಿತಿಗಳು ಸುಳ್ಯ ತಾಲೂಕು ದ.ಕ. ಇವರ ಸಹಕಾರದೊಂದಿಗೆ ಆರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯಲಿ ಆಟಿ ಗೌಜಿ- 2019 ಕಾರ್ಯಕ್ರಮ ಜು.28 ರಂದು ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನ ಪಂಜದಲ್ಲಿ ನಡೆಯಲಿರುವ ಪ್ರಯುಕ್ತ “ವಾಟ್ಸಪ್ ಆರೆಭಾಷೆ ಕವನ ಸ್ಪರ್ಧೆ” ಏರ್ಪಡಿಸಲಾಗಿದೆ.
ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷ ವಾಸುದೇವ ಮೇಲ್ಪಾಡಿ ಪ್ರಾಸ್ತವಿಕ ಮಾತನಾಡಿ ಸ್ವಾಗತಿಸಿದರು.
ವಾಟ್ಸಪ್ ಆರಭಾಷೆ ಕವನ ಸ್ಪರ್ಧೆಗೆ ಚಾಲನೆ ನೀಡಿದ ಪತ್ರಕರ್ತ ಮಧು ಪಂಜ ಈ ಸ್ಪರ್ಧೆಯಿಂದ ರಾಜ್ಯದ್ಯಂತ ಹೆಚ್ಚು ಪ್ರಚಾರವಾಗಿ ಲಕ್ಷಾಂತರ ಜನಕ್ಕೆ ಆರಭಾಷೆಯನ್ನು ಪಸರಿಸಲು ಉತ್ತಮವಾದ ಮಾದ್ಯಮವಾಗಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜೇಸಿ ಪೂರ್ವಧ್ಯಕ್ಷರುಗಳಾದ ಜೇಸಿ ಶಶಿಧರ ಪಳಂಗಾಯ, ಜೇಸಿ ಮಹಾಬಲ ಕುಲ, ಜೇಸಿ ದೇವಿಪ್ರಸಾದ್ ಜಾಕೆ, ಜೇಸಿ ಸವಿತಾರ ಮೂಡುರು, ಗೌಡರ ಕೂತ್ಕುಂಜ ಗ್ರಾಮದ ಅಧ್ಯಕ್ಷ ನಿವೃತ ಶಿಕ್ಷಕ ಬಾಲಕೃಷ್ಣ ಗೌಡ ಕುದ್ವ, ಜೇಸಿ ನಾಗಮಣಿ ಕೆದಿಲ, ಕಾರ್ಯದರ್ಶಿ ಜೇಸಿ ಪ್ರವೀಣ್ ಕಾಯರ, ಜೇಸಿ ವಾಚಣ್ಣ ಕೆರೆಮೂಲೆ ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ದೇಶಕ ಶಿವಪ್ರಸಾದ್ ಹಾಲೆಮಜಲು ವಂದಿಸಿದರು.