ಸುಳ್ಯ: ಎಂ.ಬಿ ಫೌಂಡೇಶನ್ ಸುಳ್ಯ ಇದರ ವತಿಯಿಂದ ಎಸ್.ಎಸ್.ಎಲ್. ಸಿ, ಪಿಯುಸಿ ನಂತರ ವಿಧ್ಯಾರ್ಥಿಗಳಿಗೆ ಮುಂದೇನು? ಎಂಬ ವಿಷಯದಲ್ಲಿ ವಿದ್ಯಾರ್ಥಿಗಳ ಮತ್ತು ಪೋಷಕರ ಮಾರ್ಗದರ್ಶನ ಶಿಬಿರ ಲಯನ್ಸ್ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಂಗಳೂರು ಕರಿಯರ್ ಕೌನ್ಸಿಲರ್ ಸ್ಥಾಪಕ ಅಧ್ಯಕ್ಷ ಉಮರ್ ಯು.ಎಚ್ , ” ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಆಲೋಚಿಸಿ ಉದ್ಯೋಗವನ್ನು ಸೃಷ್ಟಿಸಿಕೊಳ್ಳುವ ಮತ್ತು ಹಲವರಿಗೆ ಉದ್ಯೋಗವನ್ನು ನೀಡುವ ಬಗ್ಗೆ ಅಧ್ಯಯನವನ್ನು ಮಾಡಿಕೊಂಡು ಉತ್ತಮ ಗುರಿಯನ್ನು ನೀಡುವ ವಿಧ್ಯಾಭ್ಯಾಸದ ಕಡೆಗೆ ಗಮನ ನೀಡಬೇಕೆಂದು ಮತ್ತು ಪೋಷಕರು ತಮ್ಮ ಮಕ್ಕಳಿಗೆ ಧೈರ್ಯ ತುಂಬಿ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಬೇಕು” ಎಂದ ಹೇಳಿದರು.
ಎಂ ಬಿ ಫೌಂಡೆಶನ್ ಅಧ್ಯಕ್ಷ ಎಂ.ಬಿ ಸದಾಶಿವ, ಪುಷ್ಪ ರಾಧಕೃಷ್ಣ, ಎಂ.ಸಿ ನಿಹಾಲ್, ಹರಿಣಿ ಸದಾಶಿವ ವೇದಿಕೇಯಲ್ಲಿ ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel