ವಿವೇಕಾನಂದ ಕಾಲೇಜಿನಲ್ಲಿ ಸಾಹಿತ್ಯ ಮಂಟಪ ಕಾರ್ಯಕ್ರಮ- ಸಾಹಿತ್ಯದ ವ್ಯಾಪ್ತಿ ಬಹಳ ಅಗಾಧವಾದುದು: ರವಿಶಂಕರ್

February 12, 2020
2:41 PM

ಪುತ್ತೂರು: ವಿದ್ಯಾರ್ಥಿಗಳು ಸಾಹಿತ್ಯದಲ್ಲಿ ಭಾವನಾತ್ಮಕ ವಿಚಾರಗಳಿಗೆ ಹೆಚ್ಚಿನ ಒತ್ತನ್ನು ನೀಡಬೇಕು. ಔಪಚಾರಿಕ ನೆಲೆಯಿಂದ ವಿಚಾರಗಳು ಹೊರಬಂದರೆ ಸಾಹಿತ್ಯದಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಬಹುದು. ಸಾಹಿತ್ಯದ ವ್ಯಾಪ್ತಿ ಬಹಳ ಅಗಾಧವಾದುದು ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಸಾಹಿತ್ಯದ ವಿದ್ಯಾರ್ಥಿಗಳು ಎಂಬ ಪ್ರಜ್ಞೆಯನ್ನಿಟ್ಟು ವ್ಯವಹರಿಸುವುದು ಉತ್ತಮ ಎಂದು ವಿವೇಕಾನಂದ ಕಾಲೇಜಿನ ಕನ್ನಡ ಉಪನ್ಯಾಸಕ ರವಿಶಂಕರ್ ಅಭಿಪ್ರಾಯಪಟ್ಟರು.

Advertisement
Advertisement
Advertisement

ಅವರು ಇಲ್ಲಿನ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ತೃತೀಯ ಕನ್ನಡ ಐಚ್ಛಿಕ ವಿದ್ಯಾರ್ಥಿಗಳು ಆಯೋಜಿಸುವ ಸಾಹಿತ್ಯ ಮಂಟಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಂಗಳವಾರ ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ಸಿಕ್ಕಿರುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಇದರಿಂದ ಮುಂದೆ ಉತ್ತಮ ರೀತಿಯ ಪ್ರತಿಫಲ ದೊರೆಯುತ್ತದೆ. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಹಾಗೂ ವಿಭಾಗದಿಂದ ಪ್ರೋತ್ಸಾಹ ಸಿಗುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಎಚ್.ಜಿ. ಮಾತನಾಡಿ, ಜಗತ್ತು ವೇಗವಾಗಿ ಚಲಿಸುತ್ತಿದೆ. ವಿದ್ಯಾರ್ಥಿಗಳು ಆಲಿಸುವ ಹಾಗೂ ಇತರರೊಂದಿಗೆ ವಿಚಾರಗಳನ್ನು ಹಂಚಿಕೊಳ್ಳುವ ತಾಳ್ಮೆ ಹೊಂದಿರಬೇಕು. ಹೆಚ್ಚಿನ ಕ್ರಿಯಾಶೀಲ ಅಧ್ಯಯನ, ಉತ್ತಮವಾಗಿ ಬರೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

Advertisement

ಈ ಸಂದರ್ಭ ಯುವ ಸಾಹಿತಗಳಾದ ಸೌಜನ್ಯ, ಬೃಂದಾ, ಪ್ರತಿಮಾ ಭಟ್, ನಮಿತ, ಶಿಲ್ಪಾ ತಮ್ಮ ಸ್ವರಚಿತ ಲೇಖನ ಹಾಗೂ ಕವನಗಳನ್ನು ಮಂಡಿಸಿದರು. ವೇದಿಕೆಯಲ್ಲಿ ಕನ್ನಡ ಸಂಘದ ಸಂಯೋಜಕಿ ಡಾ. ಗೀತಾಕುಮಾರಿ ಟಿ. ಉಪಸ್ಥಿತರಿದ್ದರು. ಕನ್ನಡ ಐಚ್ಛಿಕ ವಿದ್ಯಾರ್ಥಿಗಳಾದ ಸ್ವಾತಿ ಪ್ರಾರ್ಥಿಸಿದರು. ಕಾರ್ತಿಕ್ ಸ್ವಾಗತಿಸಿದರು. ಮೇಘನಾ ವಂದಿಸಿದರು. ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 31-10-2024 | ಎರಡು ದಿನ ಅಲ್ಲಲ್ಲಿ ಮಳೆಯ ಸಾಧ್ಯತೆ ಇದೆ | ಮಳೆ ದೂರವಾಗುವ ಲಕ್ಷಣ |
October 31, 2024
1:18 PM
by: ಸಾಯಿಶೇಖರ್ ಕರಿಕಳ
ಬೆಳಕಿನ ಹಬ್ಬ ದೀಪಾವಳಿ | ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಹಣತೆ | ಗ್ರಾಹಕರ ಮನಸೆಳೆಯುತ್ತಿರುವ ಮಣ್ಣಿನ ಹಣತೆ |
October 31, 2024
7:14 AM
by: The Rural Mirror ಸುದ್ದಿಜಾಲ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ 24 ವಿಶೇಷ ರೈಲು | ಪಟಾಕಿಗಳನ್ನು ರೈಲುಗಳಲ್ಲಿ ಕೊಂಡೊಯ್ಯದಂತೆ ರೈಲ್ವೆ ಇಲಾಖೆ ಮನವಿ
October 31, 2024
6:59 AM
by: The Rural Mirror ಸುದ್ದಿಜಾಲ
ಕಂದಾಯ ಅಧಿಕಾರಿಗಳು ಸಂವೇದನಾಶೀಲರಾಗಿ ಕಾರ್ಯ ನಿರ್ವಹಿಸಿ | ಕಂದಾಯ ಸಚಿವ ಕೃಷ್ಣಬೈರೇಗೌಡ
October 31, 2024
6:55 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror