ವಿವೇಕಾನಂದ ಸ್ನಾತಕೋತ್ತರ ಕೇಂದ್ರದಲ್ಲಿ ‘ಔದ್ಯೋಗಿಕ ಕ್ಷೇತ್ರಕ್ಕೆ ವಿದ್ಯಾರ್ಥಿಗಳ ರೂಪಿಸುವಿಕೆ’ ಕುರಿತು ಕಾರ್ಯಾಗಾರ

October 23, 2019
6:11 PM

ಪುತ್ತೂರು: ಕೌಶಲ್ಯ ಮತ್ತು ಆತ್ಮವಿಶ್ವಾಸ ಇದ್ದಲ್ಲಿ ಜ್ಞಾನವು ಒದಗುತ್ತದೆ. ಯಾವುದೇ ಗುರಿಯನ್ನು ತಲುಪಲು ಸಾಧನೆ ಅನಿವಾರ್ಯ. ಜೊತೆಗೆ ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಗುಣ ಮತ್ತು ಧನಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಅಲ್ಲದೇ ತಾಳ್ಮೆ, ಸಾಮರ್ಥ್ಯ, ಸಂಸ್ಕೃತಿ ಮತ್ತು ಮಾನವೀಯತೆಯು ಯಾವುದೇ ಕ್ಷೇತ್ರದ ಏಳಿಗೆಗೆ ಪೂರಕ. ವೃತ್ತಿರಂಗದಲ್ಲಿ ಸ್ಪರ್ಧೆಯು ಹೆಚ್ಚಾದಂತೆ ಅವಕಾಶಗಳು ಕುಂಠಿತವಾಗುತ್ತದೆ. ಆದರೆ ಕೌಶಲ್ಯ ಮತ್ತು ಮೌಲ್ಯಯುತ ಅಂಶಗಳು ಉದ್ಯೋಗವನ್ನು ಒದಗಿಸುತ್ತದೆ ಎಂದು ಮಂಗಳೂರಿನ ಜೆ.ಬಿ.ಎಫ್. ಪೆಟ್ರೋಲ್‍ ಕೆಮಿಕಲ್ಸ್ ಲಿಮಿಟೆಡ್‍ನ ಪ್ರಧಾನ ವ್ಯವಸ್ಥಾಪಕ ಧೀರಜ್ ಶೆಟ್ಟಿ ಹೇಳಿದರು.

Advertisement

ಅವರು ಇಲ್ಲಿನ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರದಲ್ಲಿ ವಾಣಿಜ್ಯ ವಿಭಾಗ ಮತ್ತು ಬೆಂಗಳೂರಿನ ಐಸಿಟಿ ಅಕಾಡೆಮಿ ಆಯೋಜಿಸಿದ್ದ ‘ಔದ್ಯೋಗಿಕ ಕ್ಷೇತ್ರಕ್ಕೆ ವಿದ್ಯಾರ್ಥಿಗಳ ರೂಪಿಸುವಿಕೆ’ ಎಂಬ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬುಧವಾರ ಮಾತನಾಡಿದರು.

ಎಲ್ಲರಿಗೂ ವ್ಯಾವಹಾರಿಕ ಕಲೆಯು ಅವಶ್ಯಕ. ಹಾಗಾಗಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸಿ, ಇತರರಿಗೆ ಸಹಾಯವನ್ನು ಮಾಡುವ ಮನೋಭಾವವನ್ನು ಹೊಂದಬೇಕು. ಸೋಲು ಎಂಬುದಕ್ಕೆ ಎಲ್ಲರೂ ಹಿಂಜರಿಯುತ್ತಾರೆ. ಆದರೆ ಅದನ್ನೇ ಸವಾಲೆಂದು ತಿಳಿದು ಮುಂದುವರಿದರೆ ಸಮಸ್ಯೆಯ ನಿವಾರಣೆ ಸಾಧ್ಯ. ಅದರೊಂದಿಗೆ ನಡವಳಿಕೆಯು ವ್ಯಕ್ತಿಯ ಭವಿಷ್ಯವನ್ನು ರೂಪಿಸುವ ಅಂಶ ಎಂದರು. ಅತಿಥಿಯಾಗಿ ಭಾಗವಹಿಸಿದ್ದ ಐಸಿಟಿ ಅಕಾಡೆಮಿಯ ವ್ಯವಸ್ಥಾಪಕ ರೋಹಿತ್‍ ಕಾಜವ, ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು, ಇದರಿಂದ ಯಶಸ್ಸು ಸಾಧ್ಯ ಎಂದು ಶುಭಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಕೈಗಾರಿಕಾ ರಂಗದಲ್ಲಿ ಹೆಚ್ಚಿನ ತಯಾರಿ ಅಗತ್ಯ. ತರಗತಿಯ ಜ್ಞಾನದೊಂದಿಗೆ ಹೊರಜಗತ್ತಿನ ಜ್ಞಾನವನ್ನು ಅರಿಯಬೇಕು. ಕನಸುಗಳನ್ನು ನನಸಾಗಿಸಲು ಕೌಶಲ್ಯವು ಅವಶ್ಯಕ. ಯಾವುದೇ ಕ್ಷೇತ್ರದಲ್ಲಿ ದೃಢನಿರ್ಧಾರ ಮತ್ತು ಉತ್ತಮ ಮಾರ್ಗದರ್ಶನವನ್ನು ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯುಎಸಿ ಘಟಕದ ಸಂಯೋಜಕ ಡಾ.ಎಚ್.ಜಿ. ಶ್ರೀಧರ, ಸ್ನಾತಕೋತ್ತರ ವಾಣಿಜ್ಯ ಉಪನ್ಯಾಸಕರಾದ ಲಕ್ಷ್ಮೀ, ಅನನ್ಯಾ ವಿ., ರಾಘವೇಂದ್ರ, ವರ್ಷಿತ್, ವಿದ್ಯಾರ್ಥಿನಿ ರಶ್ಮಿ ಉಪಸ್ಥಿತರಿದ್ದರು. ಅನುಷ ಮತ್ತು ತಂಡದವರು ಪ್ರಾರ್ಥಿಸಿದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ ಸ್ವಾಗತಿಸಿದರು.ಕೃತಿಕಾ ವಂದಿಸಿದರು. ವಿದ್ಯಾರ್ಥಿನಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

2047 ರ ವೇಳೆಗೆ ಕೇಂದ್ರ ಸರ್ಕಾರದಿಂದ 32 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ
July 6, 2025
10:40 AM
by: ದ ರೂರಲ್ ಮಿರರ್.ಕಾಂ
ತುಂಗಾ, ಭದ್ರಾ ಜಲಾಶಯಗಳಿಂದ ಯಾವುದೇ ಕ್ಷಣದಲ್ಲಿ ನೀರು ಬಿಡುಗಡೆ ಸಾಧ್ಯತೆ | ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ
July 6, 2025
10:34 AM
by: ದ ರೂರಲ್ ಮಿರರ್.ಕಾಂ
ವೇಗವಾಗಿ ಬೆಳೆಯುವ ಮರ ಹವಾಮಾನ ವೈಪರೀತ್ಯಕ್ಕೆ ಪರಿಹಾರ | ಕೃಷಿ ಅರಣ್ಯೀಕರಣಕ್ಕೆ ಬೆಂಬಲ – ಕೃಷಿ ಆದಾಯ ಹೆಚ್ಚಿಸಲೂ ಸಲಹೆ |
July 6, 2025
10:20 AM
by: ದ ರೂರಲ್ ಮಿರರ್.ಕಾಂ
ಜು.10 ರಿಂದ ರಾಘವೇಶ್ವರ ಶ್ರೀಗಳ ಸ್ವಭಾಷಾ ಚಾತುರ್ಮಾಸ್ಯ ಆರಂಭ
July 5, 2025
10:24 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group