ವಿಶ್ವಕಪ್ ಕ್ರಿಕೆಟ್- ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

June 17, 2019
6:18 AM

ಮ್ಯಾಂಚೆಸ್ಟರ್​: ತೀವ್ರ ಕುತೂಹಲ ಕೆರಳಿದ್ದ ಹೈವೋಲ್ಟೇಜ್​ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ 89 ರನ್​ಗಳಿಂದ ಭರ್ಜರಿ ಜಯಗಳಿಸಿದೆ. ಈ ಮೂಲಕ ವಿಶ್ವಕಪ್​ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.

Advertisement
Advertisement
Advertisement

ಮಳೆಯಿಂದ ಅಡ್ಡಿಯುಂಟಾದ ಪಂದ್ಯದಲ್ಲಿ ಡಕ್ ವರ್ತ್ ಲೂಯಿಸ್​ ನಿಯಮದ ಪ್ರಕಾರ ಪಾಕಿಸ್ತಾನಕ್ಕೆ 40 ಓವರ್​ಗಳಲ್ಲಿ 302 ರನ್​ ಗಳಿಸುವ ಗುರಿ ನೀಡಲಾಯಿತು. ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಗುವ ಮುನ್ನ 35 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 166 ರನ್​ ಗಳಿಸಿದ್ದ ಪಾಕಿಸ್ತಾನ ಅಂತಿಮವಾಗಿ 40 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 212 ರನ್​ ಗಳಿಸಿ ಸೋಲನ್ನೊಪ್ಪಿಕೊಂಡಿತು.

Advertisement

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ ತಂಡ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 336 ರನ್​ ಗಳಿಸಿತ್ತು.  ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಮತ್ತೊಂದು ವಿಶ್ವಕಪ್ ಪಂದ್ಯವನ್ನು ಗೆದ್ದುಕೊಂಡಿತು.

Advertisement

 

ಗೆಲ್ಲಲು 337 ರನ್ ಕಠಿಣ ಸವಾಲು ಪಡೆದ ಪಾಕಿಸ್ತಾನ ತಂಡ 35 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದ್ದಾಗ ಜೋರಾಗಿ ಮಳೆ ಸುರಿಯಿತು. ಪಂದ್ಯ ಮತ್ತೆ ಆರಂಭವಾದಾಗ ಪಾಕ್‌ಗೆ 40 ಓವರ್‌ಗಳಲ್ಲಿ 302 ರನ್ ಪರಿಷ್ಕೃತ ಗುರಿ ನೀಡಲಾಗಿದ್ದು 5 ಓವರ್‌ಗಳಲ್ಲಿ 136 ರನ್ ಗಳಿಸಬೇಕಾದ ಕಠಿಣ ಸವಾಲು ಪಡೆಯಿತು. ಪಾಕ್ ಅಂತಿಮವಾಗಿ 40 ಓವರ್‌ಗಳಲ್ಲಿ 6 ವಿಕಟ್‌ಗೆ 212 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪಾಕ್ 5ನೇ ಓವರ್‌ನಲ್ಲಿ ಇಮಾಮ್‌ವುಲ್ ಹಕ್(7) ವಿಕೆಟನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ 2ನೇ ವಿಕೆಟ್‌ಗೆ 104 ರನ್ ಜೊತೆಯಾಟ ನಡೆಸಿದ ಫಕಾರ್ ಝಮಾನ್(62, 75 ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಬಾಬರ್ ಆಝಂ(48, 57 ಎಸೆತ, 3 ಬೌಂಡರಿ, 1 ಸಿಕ್ಸರ್)ತಂಡವನ್ನು ಆಧರಿಸಲು ಯತ್ನಿಸಿದರು. ಬಾಬರ್ ಆಝಂ(48) ವಿಕೆಟನ್ನು ಉರುಳಿಸಿದ ಕುಲದೀಪ ಯಾದವ್ ಈ ಜೋಡಿಯನ್ನು ಬೇರ್ಪಡಿಸಿದರು.

Advertisement

ಝಮಾನ್ 62 ರನ್‌ಗೆ ಯಾದವ್‌ಗೆ ಎರಡನೇ ಬಲಿಯಾದರು.ಝಮಾನ್-ಆಝಂ ಹೋರಾಟದ ಬಳಿಕ ಪಾಕ್ ಕುಸಿತದ ಹಾದಿ ಹಿಡಿಯಿತು. ಮುಹಮ್ಮದ್ ಹಫೀಝ್(9),ಶುಐಬ್ ಮಲಿಕ್(0), ಹಾಗೂ ಸರ್ಫರಾಝ್ ಅಹ್ಮದ್(12) ಪೆವಿಲಿಯನ್‌ಗೆ ಪರೇಡ್ ನಡೆಸಿದರು. ಇಮಾದ್ ವಸೀಂ(ಔಟಾಗದೆ 22) ಹಾಗೂ ಶಾದಾಬ್ ಖಾನ್ (1)ಕ್ರೀಸ್ ಕಾಯ್ದುಕೊಂಡಿದ್ದರು.

ಭಾರತದ ಪರ ವಿಜಯ ಶಂಕರ್(2-22), ಹಾರ್ದಿಕ್ ಪಾಂಡ್ಯ(2-40) ಹಾಗೂ ಕುಲದೀಪ್ ಯಾದವ್(2-32) ತಲಾ ಎರಡು ವಿಕೆಟ್ ಪಡೆದರು.

Advertisement

ಭಾರತ 336/5: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ಭರ್ಜರಿ ಶತಕ(140 ರನ್, 113 ಎಸೆತ), ನಾಯಕ ವಿರಾಟ್ ಕೊಹ್ಲಿ(77, 65 ಎಸೆತ) ಹಾಗೂ ಕೆಎಲ್ ರಾಹುಲ್(57,78 ಎಸೆತ)ಅರ್ಧಶತಕಗಳ ಕೊಡುಗೆ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 336 ರನ್ ಗಳಿಸಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಐದು ತಿಂಗಳಲ್ಲಿ 100 ಕೋಟಿ ಗಿಡ ನೆಡುವ ಮೂಲಕ ಅಭಿಯಾನ ಯಶಸ್ವಿ | ಪ್ರಧಾನಿ ಮೋದಿ ಶ್ಲಾಘನೆ
November 25, 2024
7:46 PM
by: The Rural Mirror ಸುದ್ದಿಜಾಲ
2025 ರ ಜನವರಿಯಲ್ಲಿ ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ
November 20, 2024
4:43 PM
by: The Rural Mirror ಸುದ್ದಿಜಾಲ
ಜೈವಿಕ ಇಂಧನ ಕ್ಷೇತ್ರದಲ್ಲಿ ಭಾರತ ಪ್ರಗತಿ | ಎಥೆನಾಲ್ ಮಿಶ್ರಣದಿಂದ ಬದಲಾವಣೆ
November 15, 2024
11:24 PM
by: The Rural Mirror ಸುದ್ದಿಜಾಲ
ಹಸಿರು ಶಕ್ತಿ ಉತ್ತೇಜನಕ್ಕೆ ಬ್ಯಾಟರಿ ಚಾಲಿತ ವಾಹನಗಳು ಸಹಕಾರಿ | ಕೇಂದ್ರ ಸಚಿವ ಪ್ರಲ್ಹಾದ ಜೋಶಿ
November 15, 2024
11:15 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror