ವಿಶ್ವಕಪ್ ಕ್ರಿಕೆಟ್ ಭಾರತಕ್ಕೆ ಸೋಲು

July 1, 2019
5:58 AM

ಬರ್ವಿುಂಗ್​ಹ್ಯಾಂ: ಇಲ್ಲಿನ ಎಜ್​ಬಾಸ್ಟನ್​ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಕ್ರಿಕೆಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​ ವಿರುದ್ದ ಭಾರತಕ್ಕೆ 31ರನ್ ಗಳ ಸೋಲು. ಈ ಮೂಲಕ ಟೀಂ ಇಂಡಿಯಾ ವಿಶ್ವಕಪ್​ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿತು.

Advertisement
Advertisement

ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಆಂಗ್ಲ ಪಡೆ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 337 ರನ್​ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ನಿಗದಿತ 50 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 306 ರನ್​ ಕಲೆ ಹಾಕುವ ಮೂಲಕ 31 ರನ್​ ಅಂತರದಲ್ಲಿ ಆಂಗ್ಲ ಪಡೆಗೆ ಶರಣಾಯಿತು.

ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಕೆ.ಎಲ್​. ರಾಹುಲ್​ ಶೂನ್ಯ ಸಾಧನೆ ಮಾಡುವ ಮೂಲಕ ಆರಂಭಿಕ ಆಘಾತ ನೀಡಿದರು. ಬಳಿಕ ರೋಹಿತ್​ ಶರ್ಮಾ ಜತೆಗೂಡಿದ ನಾಯಕ ವಿರಾಟ್​ ಕೊಹ್ಲಿ 146 ರನ್​ ಜತೆಯಾಟ ನೀಡಿದರು. ಆದರೆ ಈ ವೇಳೆ 66 ರನ್​ ಗಳಿಸಿದ್ದ ಕೊಹ್ಲಿ ಫ್ಲಂಕೆಟ್​ ಓವರ್​ನಲ್ಲಿ ಕ್ಯಾಚಿತ್ತು ನಿರ್ಗಮಿಸಿದರು. ಇದಾದ ಸ್ವಲ್ಪದರಲ್ಲೇ 102 ರನ್​ ಗಳಿಸಿದ್ದ ರೋಹಿತ್​ ಶರ್ಮಾ, ಕ್ರಿಸ್​ ವೋಕ್ಸ್​ ಓವರ್​ನಲ್ಲಿ ಕ್ಯಾಚಿತ್ತರು.

ಬಳಿಕ ರಿಷಭ ಪಂತ್ ​(32) ಹಾಗೂ ಹಾರ್ದಿಕ್​ ಪಾಂಡ್ಯ (45) ವೇಗವಾಗಿ ರನ್​ ಗಳಿಸಿ ಗೆಲುವಿನ ಆಸೆ ಚಿಗುರುವಂತೆ ಮಾಡಿದರೂ ವಿಕೆಟ್​ ನೀಡಿದ್ದು ಭಾರತದ ಸೋಲಿಗೆ ಕಾರಣವಾಯಿತು. ಉಳಿದಂತೆ ಎಂ.ಎಸ್​. ಧೋನಿ (42*) ಹಾಗೂ ಕೇದರ್​ ಜಾಧವ್​ (12*) ರನ್​ ಗಳಿಸಿದರು. ಧೋನಿ ಮತ್ತು ಜಾಧವ್ ಗೆ ಕೊನೆಯ ಓವರ್ ಗಳಲ್ಲಿ ನಿರೀಕ್ಷಿತ ರೀತಿಯಲ್ಲಿ ರನ್ ಗಳಿಸಲು ಸಾಧ್ಯವಾಗದೆ ಇದ್ದುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.

ಇಂಗ್ಲೆಂಡ್​ ಪರ ಲಿಯಾಮ್​ ಫ್ಲಂಕೆಟ್ ಪ್ರಮುಖ​ ಮೂರು ವಿಕೆಟ್​ ಕಬಳಿಸಿ ಮಿಂಚಿದರೆ, ಕ್ರಿಸ್​ ವೋಕ್ಸ್​ ಎರಡು ವಿಕೆಟ್​ ಪಡೆಯುವ ಮೂಲಕ ಆಂಗ್ಲ ಪಡೆಗೆ ಗೆಲುವನ್ನು ತಂದುಕೊಟ್ಟರು.

Advertisement

ಇದಕ್ಕೂ ಮೊದಲು ಬ್ಯಾಟ್​ ಮಾಡಿದ್ದ ಆಂಗ್ಲ ಪಡೆ ಪರ ಆರಂಭಿಕರಾದ ಜಾಸನ್​ ರಾಯ್​ ಮತ್ತು ಜಾನಿ ಬೇರ್​ಸ್ಟೋ 22.1 ಓವರ್​ಗಳಲ್ಲಿ 160 ರನ್​ಗಳ ಉತ್ತಮ ಜೊತೆಯಾಟವಾಡಿ ಇಂಗ್ಲೆಂಡ್​ ತಂಡ ಬೃಹತ್​ ಮೊತ್ತ ಕಲೆ ಹಾಕಲು ಕಾರಣರಾದರು. 66 ರನ್​ ಗಳಿಸಿದ್ದ ಜಾಸನ್​ ರಾಯ್​ ಕುಲದೀಪ್​ಗೆ ಬಲಿಯಾದರು. ಇದರ ಬೆನ್ನಲ್ಲೇ 111 ರನ್​ ಗಳಿಸಿ ಆಡುತ್ತಿದ್ದ ಬೇರ್​ಸ್ಟೋ ಶಮಿ ಓವರ್​ನಲ್ಲಿ ಕ್ಯಾಚಿತ್ತರು. ಪ್ರಮುಖ ಎರಡು ವಿಕೆಟ್​ ಉರುಳಿದ ಬಳಿಕ ಆಂಗ್ಲ ಪಡೆಯ ರನ್​ ವೇಗಕ್ಕೆ ಕಡಿವಾಣ ಬಿದ್ದಿತು.

ಬೇರ್​ಸ್ಟೋ ಬಳಿಕ ಬಂದ ಜೋ ರೂಟ್​ 44 ರನ್​ ಗಳಿಸಿ ಔಟಾದರೆ, ಇದರ ಬೆನ್ನಲ್ಲೇ ನಾಯಕ ಇಯಾನ್​ ಮಾರ್ಗನ್​ ಕೇವಲ ಒಂದು ರನ್​ ಗಳಿಸಿ ಪೆವಿಲಿಯನ್​ ಸೇರಿದರು. ಆದರೆ, ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ಬೆನ್​ ಸ್ಟೋಕ್ಸ್​ (79 ರನ್​, 54 ಎಸೆತ,6 ಬೌ, 3 ಸಿ) ರನ್​ ಗಳಿಸುವ ಮೂಲಕ ಆಂಗ್ಲ ಪಡೆ ಮುನ್ನೂರು ರನ್​ ಗಡಿ ದಾಟುವಲ್ಲಿ ನೆರವಾದರು. ಉಳಿದಂತೆ ಜಾಸ್​ ಬಟ್ಲರ್​ (20), ಕ್ರಿಸ್​ ವೋಕ್ಸ್​ (7) ರನ್​ ಗಳಿಸಿದರೆ, ಲಿಯಾಮ್​ ಫ್ಲಂಕೆಟ್ (1)​ ಜೋಫ್ರಾ ಆರ್ಚರ್​ (0) ಅಜೇಯರಾಗಿ ಉಳಿದರು.
ಟೀಂ ಇಂಡಿಯಾ ಪರ ಮಹಮ್ಮದ್​​ ಶಮಿ 5 ವಿಕೆಟ್​ ಪಡೆದು ಮಿಂಚಿದರು. ಉಳಿದಂತೆ ಜಸ್​ಪ್ರೀತ್​ ಬೂಮ್ರಾ ಹಾಗೂ ಕುಲದೀಪ್​ ಯಾದವ್​ ತಲಾ ಒಂದು ವಿಕೆಟ್​ ಪಡೆದರು.

 

 

Advertisement

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ಮೀನುಗಾರಿಕೆ ವಲಯದ ಪ್ರಗತಿ ಕುರಿತು ಪರಿಶೀಲನಾ ಸಭೆ | ಸಾಗರ ಆಹಾರೋತ್ಪನ್ನಗಳ ರಫ್ತು ಪ್ರಮಾಣ  ಹೆಚ್ಚಳಕ್ಕೆ ಸೂಚನೆ
May 16, 2025
7:23 AM
by: The Rural Mirror ಸುದ್ದಿಜಾಲ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಕದನ ವಿರಾಮ ಬಳಿಕ ಪರಿಸ್ಧಿತಿ ಸಾಮಾನ್ಯ ಸ್ಧಿತಿಗೆ | ಶಾಂತಿ ಸ್ಧಾಪನೆಯ ಉದ್ದೇಶಕ್ಕೆ ಪೂರಕ ವಾತಾವರಣ
May 11, 2025
10:11 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group