ವೈದ್ಯ ದಿನಾಚರಣೆಯ ಶುಭಾಶಯಗಳು | “ವೈದ್ಯೋ ನಾರಾಯಣೋ ಹರಿಃ” |

July 1, 2020
9:29 AM

ಆರೋಗ್ಯ ಎಲ್ಲರ ಆದ್ಯತೆ. ನಿತ್ಯ ಕಾರ್ಯಗಳು ಸುಲಲಿತವಾಗಿ ನಿರ್ವಹಣೆಯಾಗಬೇಕಾದರೆ ನಮ್ಮ ಆರೋಗ್ಯ ಚೆನ್ನಾಗಿ ಇರಬೇಕು. ಆಹಾರ, ವ್ಯಾಯಾಮ ಎಷ್ಟು ಮುಖ್ಯವೋ  ಅಷ್ಟೇ ಪ್ರಾಮುಖ್ಯತೆ  ಇರುವುದು  ಒಬ್ಬ ಒಳ್ಳೆಯ ವೈದ್ಯರ ಸಂಪರ್ಕ. ಅಗತ್ಯ ಬಿದ್ದಾಗ ‌ ಸೂಕ್ತ ಸಲಹೆ ತೆಗೆದುಕೊಳ್ಳಲು  ಕುಟುಂಬಕ್ಕೆ ಒಬ್ಬ ವೈದ್ಯ ಬೇಕೇ ಬೇಕು.  ದಿನಕ್ಕೊಬ್ಬ ವೈದ್ಯರ ಬಳಿ ಚಿಕಿತ್ಸೆ ಗೆ ತೆರಳುವುದು ‌ತೀರಾ ತಪ್ಪು.  

Advertisement
Advertisement

ವೈದ್ಯರೆಂದರೆ ಪ್ರತ್ಯಕ್ಷ ದೇವರೇ ಸರಿ.  ಧನ್ವಂತರಿ ಮದ್ದಿನ ದೇವರು  ಅವರ ಅಪರಾವತಾರ ವೈದ್ಯರು.  ಕಾಯಾ, ವಾಚ, ಮನಸಾ ವೃತ್ತಿ ಗೆ ತಮ್ಮನ್ನು ಸಮರ್ಪಿಸಿ ಕೊಳ್ಳುವ ಪ್ರಮಾಣವಚನ  ಸ್ವೀಕರಿಸುತ್ತಾರೆ. ಅದಕ್ಕೆ ಬದ್ಧರಾಗಿ ಜೀವನ ಪರ್ಯಂತ  ಇರುತ್ತಾರೆ.  ತಮ್ಮ  ವೈಯಕ್ತಿಕ  ಸುಖ ಶಾಂತಿ ಗಳನ್ನು ಬದಿಗೊತ್ತಿ ಸೇವೆಯೇ ಪ್ರಾಮುಖ್ಯವಾಗಿ ಕಾಣುತ್ತಾರೆ. ಮನೆಯವರಿಗೆ ಯಾವಾಗಲೂ ದ್ವಿತೀಯ ಆದ್ಯತೆ ನೀಡುತ್ತಾರೆ. ಮೊದಲಿಗೇನಿದ್ದರು ಪೇಶೆಂಟ್ ಗಳೇ.  ಡಾಕ್ಟರ್ ಏನು ಅನ್ನುತ್ತಾರೋ ಅದನ್ನು ರೋಗಿಗಳು ಪ್ರತಿಶತ‌ ನೂರು ನಂಬುತ್ತಾರೆ. ಏನೇ ಔಷಧಿ ಕೊಟ್ಟರೂ  ಯಾವುದೇ ಅನುಮಾನವಿಲ್ಲದೆ  ಸೇವಿಸುತ್ತಾರೆ.   ವೈದ್ಯ ವೃತ್ತಿಯೇ ಹಾಗೆ ಅಲ್ಲಿ  ಸಮರ್ಪಣಾ ಮನೋಭಾವದಿಂದ ದುಡಿಯುವವರು ಮಾತ್ರ  ಗೆಲ್ಲಬಲ್ಲರು.

Advertisement

ಇಂದಿನ ದಿನಗಳಲ್ಲಿ  ವೈದ್ಯಕೀಯ ಕ್ಷೇತ್ರ ವೃತ್ತಿಯಾಗಿ ಉಳಿದಿಲ್ಲ, ಉದ್ಯಮವಾಗಿದೆ.  ಒಬ್ಬ ಸಂಪೂರ್ಣ ವೈದ್ಯ ಶಿಕ್ಷಣ ಮುಗಿಸಿ ಡಾಕ್ಟರ್ ಆಗಿ ಹೊರ ಹೊಮ್ಮಬೇಕಾದರೆ ಹಲವು ಲಕ್ಷ, ಕೆಲವೊಮ್ಮೆ ಕೋಟಿಯ ಲೆಕ್ಕದಲ್ಲಿ ಹಣ ಬೇಕು.  ಅಷ್ಟೆಲ್ಲಾ   ಖರ್ಚು ಮಾಡಿ ಕಲಿತವರು ಹಳ್ಳಿಗಳಲ್ಲಿ ಸೇವೆಮಾಡಲು ಮನಸು ಮಾಡುವರೇ ? ಇರಬಹುದು ಒಬ್ಬರೋ ಇಬ್ಬರೋ  ಸೇವಾ ಮನೋಭಾವದವರು. ವೈದ್ಯ ಶಿಕ್ಷಣ ಅಪಾರವಾದ ತಾಳ್ಮೆ,  ಜ್ಞಾನ, ಶ್ರದ್ಧೆ,  ಸಮಯ ಬಯಸುತ್ತದೆ. ಎಲ್ಲರಿಗೂ ಒಲಿಯದು. ಕೆಲವೊಬ್ಬರು ರೋಗವನ್ನು ಸುಲಭವಾಗಿ ಗುರುತಿಸಿ ಯಾವ ಚಿಕಿತ್ಸೆ ನೀಡುವುದು ಸೂಕ್ತವೆಂದು ಹೇಳಬಲ್ಲರು. ಇನ್ನೂ ಕೆಲವರು ಶಸ್ತ್ರ ಚಿಕಿತ್ಸೆ ಯಲ್ಲಿ ಪರಿಣತರು.  ಅವರವರ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿದಾಗ  ಯಶಸ್ವಿ ವೈದ್ಯರಾಗ ಬಹುದು.

ವಿಶ್ವದೆಲ್ಲೆಡೆ ವೈದ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಬೇರೆ ಬೇರೆ ದಿನಗಳಲ್ಲಿ  ಆಚರಿಸಲಾಗುತ್ತದೆ. ಭಾರತದಲ್ಲಿ ಜುಲೈ 1 ರಂದು ಆಚರಣೆ. ಅಂದೇ ಯಾಕೆ ? ಜುಲೈ 1  ಡಾ.ಬಿಧಾನ ಚಂದ್ರ ರಾಯ್ ಯವರ ಜನ್ಮ ದಿನ. ಯಾರು ಬಿಧಾನ್ ಚಂದ್ರ ರಾಯ್ ? ಅವರು ಪಶ್ಚಿಮ ಬಂಗಾಳದ  ದ್ವಿತೀಯ ಮುಖ್ಯ ಮಂತ್ರಿ.  ಮೂಲತಃ ವೈದ್ಯ ವೃತ್ತಿ ಯವರಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದವರು. ರಾಜಕೀಯ ವಾಗಿ ಉನ್ನತ ಸ್ಥಾನ ದಲ್ಲಿದ್ದರೂ ಜನರಿಗೆ ವೈದ್ಯಕೀಯ ಸೇವೆ ಒದಗಿಸುವತ್ತಲೇ ಮನಸು ತುಡಿಯುತ್ತಿತ್ತು. ಎಷ್ಟೇ ಕೆಲಸಗಳಿದ್ದರೂ ದಿನದಲ್ಲಿ ಕನಿಷ್ಠ ಒಂದು ಗಂಟೆಯಾದರೂ ಕೊಳೆಗೇರಿಯಲ್ಲಿ    ವೈದ್ಯಕೀಯ ಸೇವೆಯಲ್ಲಿ ತೊಡಗಿಸಿ ಕೊಳ್ಳುತ್ತಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರತಿನಿಧಿ ಯಾಗಿ 12 ವರ್ಷ ಗಳ( 1948  ರಿಂದ 1962 ) ರವರೆಗೆ ಪಶ್ಚಿಮ ಬಂಗಾಳ ದ ಮುಖ್ಯಮಂತ್ರಿಯಾಗಿದ್ದರು. ಆ ಸಮಯದಲ್ಲಿ  ಜನಾಂಗೀಯ ಘರ್ಷಣೆ, ದೊಂಬಿ ಗಲಭೆಗಳು  ನಡೆಯುತ್ತಿದ್ದವು. ಪಾಕಿಸ್ತಾನದಿಂದ ಒಳನುಗ್ಗುವ ವಲಸೆಗಾರರ ಸಮಸ್ಯೆಯೂ ಇತ್ತು.  ಅಲ್ಲಿನೆಲ್ಲಾ ಸಮಸ್ಯೆ ಗಳನ್ನು ತಾಳ್ಮೆ ಯಿಂದ ನಿಭಾಯಿಸಿ  ರಾಜ್ಯದ ಅಭಿವೃದ್ಧಿ ಯತ್ತ ಯುವಕರು ಮುನ್ನುಗ್ಗುವಂತೆ ಮಾಡಿದವರು. ಎರಡು ಮಹಾ ನಗರಗಳ ನಿರ್ಮಾತೃ.   ಪಶ್ಚಿಮ ಬಂಗಾಳದ ಶ್ರೇಷ್ಠ ಶಿಲ್ಪಿ ದೇ ಗುರುತಿಸಿಕೊಂಡವರು ಡಾ.ಬಿಧಾನ್‌ ಚಂದ್ರ ರಾಯ್. ಇವರ ಜನನ ( 1 ಜುಲೈ 1882 ) ಮರಣ (1 ಜುಲೈ 1962) ಗಳೆರಡೂ ಒಂದೇ  ದಿನ ಅದು ಜುಲೈ 1.

Advertisement

ಇಂದು ಎಷ್ಟೋ ವೈದ್ಯ ರುಗಳು ಹಳ್ಳಿ  ಪಟ್ಟಣಗಳೆನ್ನದೆ ಸೇವೆ ಸಲ್ಲಿಸುತ್ತಿದ್ದಾರೆ.  ದಿನದ 24 ಗಂಟೆಯೂ ಲಭ್ಯವಿರುವ ಡಾಕ್ಟರ್ ಗಳಿದ್ದಾರೆ.  ವೈಯಕ್ತಿಕ ಹಿತಾಸಕ್ತಿ ಗಳನ್ನು ಬದಿಗೊತ್ತಿ ಕೆಲಸ ನಿರತರಾಗಿದ್ದರೆ. ಇಂದಿನ ಕೊರೋನಾ ಸಂಕಷ್ಟ ದಿನಗಳಲ್ಲಿ ತಮ್ಮ ಆರೋಗ್ಯ ವನ್ನು ಪಣಕ್ಕೊಡ್ಡಿ ಸೇವಾನಿರತರಾಗಿರು ವೈದ್ಯ ರುಗಳಿಗೆ, ಅವರ ಬೆಂಬಲವಾಗಿ ನಿಲ್ಲುವ  ಎಲ್ಲರನ್ನೂ ನೆನಪಿಸಿಕೊಳ್ಳೋಣ.  ವೈದ್ಯರಿಗೆ ಮನೆಯವರ ಸಂಪೂರ್ಣ ಬೆಂಬಲವಿದ್ದಾಗ  ಮಾತ್ರ  ವೃತ್ತಿ ಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ತಮಗಿರುವ ಸೀಮಿತ ಅವಕಾಶದಲ್ಲೇ ಸಂಪೂರ್ಣ ಸೇವೆ ಒದಗಿಸುತ್ತಾ  ‌ಕಣ್ಣಿಗೆ ಕಾಣುವ ದೇವರಂತಿರುವ ವೈದ್ಯರುಗಳಿಗೆ  ವೈದ್ಯ ದಿನಾಚರಣೆಯ ಶುಭಾಶಯಗಳು.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮುಕ್ತಾಯ | ರಾಜ್ಯದಲ್ಲಿ 70.03% ಮತದಾನ
May 8, 2024
9:54 PM
by: The Rural Mirror ಸುದ್ದಿಜಾಲ
ಕೊಕ್ಕೋ ಧಾರಣೆ ಇಳಿಕೆ | ವಾರದಲ್ಲಿ 100 ರೂಪಾಯಿ ಕುಸಿತ ಕಂಡ ಕೊಕ್ಕೋ ಧಾರಣೆ |
May 8, 2024
1:55 PM
by: ದ ರೂರಲ್ ಮಿರರ್.ಕಾಂ
ಛಾತಿ ಇಲ್ಲದ ನಾಗರಿಕರನ್ನು ರೂಪಿಸುತ್ತಿರುವ ಶಿಕ್ಷಣ
May 7, 2024
3:58 PM
by: ಡಾ.ಚಂದ್ರಶೇಖರ ದಾಮ್ಲೆ
ಮೇ.11 ವಳಲಂಬೆಯಲ್ಲಿ ಯಕ್ಷಗಾನ ಬಯಲಾಟ | ಕಲಾವಿದ ಉಬರಡ್ಕ ಉಮೇಶ್‌ ಶೆಟ್ಟಿಯವರಿಗೆ ಗೌರವಾರ್ಪಣೆ |
May 7, 2024
3:13 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror