ವೈರಸ್ ಹರಡುವುದು ತಡೆಗೆ ಶಾಂತಿ ಹವನ | ಆಯುರ್ವೇದ ಗಿಡಮೂಲಿಕೆಗಳೇ ಇಲ್ಲಿ ಹವಿಸ್ಸು | ಹೇಗೆ ವರ್ಕ್ಔಟ್ ಆಗುತ್ತದೆ ?

April 2, 2020
4:47 PM

ಸುಳ್ಯ: ದೇಶದಾದ್ಯಂತ ಕೊರೊನಾ ವೈರಸ್ ಹರಡುವುದು ತಡೆಗೆ ವಿವಿಧ ಪ್ರಯತ್ನ ಮಾಡಲಾಗುತ್ತಿದೆ. ಲಾಕ್ಡೌನ್ ಮೂಲಕ ಜನರು ಮನೆಯಿಂದ ಹೊರಬರದಂತೆ ಎಚ್ಚರಿಕೆ ವಹಿಸುವುದು  ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು  ನಡೆಯುತ್ತಿದೆ. ಇದರ ಜೊತೆಗೆ ಆಯುರ್ವೇದ ಗಿಡಮೂಲಿಕೆಗಳ ಹವಿಸ್ಸಿನಿಂದ ಶಾಂತಿ ಹವನ ಮಾಡುವ ಮೂಲಕ ವೈರಸ್ ಪ್ರಭಾವ ತಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಲೋಕಹಿತಕ್ಕಾಗಿ ಈ ಕಾರ್ಯದಲ್ಲಿ ಸಾಮಾಜಿಕ ಕಾಳಜಿಯೂ ಇದೆ.

Advertisement
Advertisement

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆಯ ಹಿರಿಯ ವೈದಿಕ ವಿದ್ವಾಂಸರೂ, ಮಾರ್ಗದರ್ಶಕರೂ ಆಗಿರುವ ವೇದಗುರು ಕರುವಜೆ ಕೇಶವ ಜೋಯಿಸರ ನೇತೃತ್ವದಲ್ಲಿ ಈ ಹವನ ನಡೆಯುತ್ತಿದೆ. ಮಾ.20 ರಿಂದ ಆರಂಭವಾಗಿರುವ ಈ ಹವನ ಕಿಲೋ ಮೀಟರ್ ಗೆ ಒಂದು ಮನೆಯಂತೆ ನಿರಂತರವಾಗಿ ನಡೆಯುತ್ತಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಆಸಕ್ತಿಯಿಂದ ಈ ಕಾರ್ಯ ನಡೆಸುತ್ತಿರುವ ಕರುವಜೆ ಕೇಶವ ಜೋಯಿಸರು ಲೋಕವು ಸಂಕಷ್ಟದಲ್ಲಿ ಇರುವ ಸಂದರ್ಭ ಯಜ್ಞದ ಮೂಲಕ ಜನರಿಗೆ ಮಾನಸಿಕ ಧೈರ್ಯ ತುಂಬುವ ಕಾರ್ಯ ನಡೆಸುತ್ತಿದ್ದಾರೆ. ಜೊತೆಗೆ ಆಯುರ್ವೇದದ ಸಾರವನ್ನೂ ತಿಳಿಸುತ್ತಿದ್ದಾರೆ.

 

 

Advertisement

ಆಯುರ್ವೇದಲ್ಲಿ  ವಿವಿಧ ಗಿಡ ಮೂಲಿಕೆಗಳು ಕಷಾಯಗಳು , ಲೇಹಗಳು, ಆಸವಗಳು, ಅರಿಷ್ಟಗಳು  ದೇಹಕ್ಕೆ ರಕ್ಷಣೆ ನೀಡುತ್ತದೆ, ಅದರಿಂದ ದೇಹದ ಆರೋಗ್ಯ ಕಾಪಾಡುತ್ತದೆ.  ವ್ಯಾಧಿಗಳು ನಿವಾರಣೆಯಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈಗ ಅಂತಹದ್ದೇ ವನಸ್ಪತಿಗಳನ್ನು ಯಜ್ಞಕ್ಕೆ ಹವಿಸ್ಸಿನ ರೂಪದಲ್ಲಿ  ಅರ್ಪಿಸಿ ಆ ಧೂಮವು ಪರಿಸರಕ್ಕೆ ಹರಡಿದರೆ ವೈರಾಣುಗಳ ಪ್ರಭಾವ ತಗ್ಗಿಸಬಹುದು  ಎಂಬುದು ಗ್ರಂಥಗಳಲ್ಲಿ ಹೇಳಲಾಗಿದೆ. ಈಗ ಅದೇ ಮಾದರಿಯಲ್ಲಿ  ಪ್ರಯತ್ನ ಮಾಡಲಾಗುತ್ತಿದೆ. ಹಾಗೆಂದು  ಈ ಯಜ್ಞ ಮಾಡಿದ ತಕ್ಷಣವೇ ವೈರಾಣುಗಳು ಸುಳಿಯುವುದಿಲ್ಲ ಎಂಬುದಲ್ಲ , ಪರಿಸರವು ಯಜ್ಞದ ಧೂಮದ ಮೂಲಕ ಸ್ವಚ್ಛವಾಗಿ ವೈರಾಣುಗಳಿದ್ದರೆ ಅವುಗಳ ಪ್ರಭಾವ ತಗ್ಗಬಹುದು  ಎಂದು ಹೇಳುತ್ತಾರೆ ಕೇಶವ ಜೋಯಿಸರು.

ಇಲ್ಲಿ ಯಜ್ಞಕ್ಕೆ ಅಮೃತಬಳ್ಳಿ, ಕಿರಾತಕಡ್ಡಿ, ನೆಕ್ಕಿ , ಹಿಪ್ಪಲಿ, ಎಕ್ಕೆ , ಅಶೋಕ, ಉತ್ತರಣೆ, ಅತ್ತಿ, ಅರಸಿನ, ಗೋಳಿ, ಗರಿಕೆ, ಲವಂಗ, ನೆಲ್ಲಿ  ಹೀಗೆ ವಿವಿಧ ಬಗೆಯ ಆಯುರ್ವೇದ ಗುಣವುಳ್ಳ ವಸ್ತುಗಳನ್ನು ಹವಿಸ್ಸಾಗಿ ಅರ್ಪಣೆ ಮಾಡಲಾಗುತ್ತದೆ.

ಪ್ರತೀ ಮನೆಯಲ್ಲಿ  ಕೂಡಾ ಪ್ರತಿಯೊಬ್ಬರು ಆಯುರ್ವೇದ ಗುಣವುಳ್ಳ ವಸ್ತುಗಳನ್ನು ಹವಿಸ್ಸಾಗಿ ಪ್ರತೀ ದಿನವೂ ಮನೆಯವರೇ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ಆ ವಾತಾವರಣ ಶುದ್ಧವಾಗಬಹುದು  ಎಂದು ಕೇಶವ ಜೋಯಿಸರು ಹೇಳುತ್ತಾರೆ.

 

 

Advertisement

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 18-05-2025 | ಮೇ.19 ರಿಂದ ಮಳೆಯ ಪ್ರಮಾಣ ಹೆಚ್ಚಾಗುವ ಸೂಚನೆ | ನಿರೀಕ್ಷೆಗೂ ಮುನ್ನವೇ ಮುಂಗಾರು ನಿರೀಕ್ಷೆ |
May 18, 2025
2:42 PM
by: ಸಾಯಿಶೇಖರ್ ಕರಿಕಳ
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ | ಈ ವರ್ಷ ಅದೃಷ್ಟವೋ ಅದೃಷ್ಟ!
May 18, 2025
10:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಹಾಳೆ ಉದ್ದಿಮೆ-ಮಾರುಕಟ್ಟೆ ಮತ್ತು ಪರಿಣಾಮ
May 18, 2025
8:00 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group