ಶಿಕ್ಷಣಕ್ಕೆ ಕೂಡಿಟ್ಟ ಹಣ ಬಡವರಿಗೆ ನೀಡಿದ ಸೆಲೂನ್ ಮಾಲಕರ ಪುತ್ರಿಗೆ ಜಾಗತಿಕ ಮನ್ನಣೆ | ಈಗ “ಬಡವರ ಸದ್ಭಾವನಾ ರಾಯಭಾರಿ”ಯಾಗಿ ನೇಮಕ |

June 7, 2020
11:42 AM

ಲಾಕ್ಡೌನ್ ನಡುವೆ ಧೈರ್ಯ ತುಂಬುವ, ಭರವಸೆ ನೀಡುವ ಸಂಗತಿ ಇದು. ದೇಶದಲ್ಲಿ ಇಂತಹ ನೂರಾರು ಸಂಗತಿಗಳು ನಡೆದಿದೆ. ಇದುವರೆಗೂ ಕೊರೊನಾ ವೈರಸ್ ಭಯವೇ ತುಂಬಿತೇ ಹೊರತು ಜಾಗೃತಿ ಇನ್ನೂ ಸರಿಯಾಗಿ ಮೂಡಿಲ್ಲ. ಈ ನಡುವೆಯೇ ಅನೇಕ ಧೈರ್ಯ ತುಂಬುವ ಸಂಗತಿಗಳು ನಡೆದು ಹೋದವು. ಅದಕ್ಕೀಗ ಮನ್ನಣೆ ಸಿಕ್ಕಿದೆ……

Advertisement
Advertisement

ಮಧುರೈ: ಶಿಕ್ಷಣಕ್ಕಾಗಿ ತಂದೆ ಕೂಡಿಟ್ಟಿದ್ದ 5 ಲಕ್ಷ ರೂಪಾಯಿ ಹಣವನ್ನು  ಲಾಕ್ಡೌನ್ ಸಮಯದಲ್ಲಿ  ಬಡವರಿಗೆ ನೀಡುವಂತೆ ತಂದೆಗೆ ಸೂಚಿಸಿ ಅನುಷ್ಠಾನ ಮಾಡಿದ ತಮಿಳುನಾಡಿನ ಮಧುರೈ ನಿವಾಸಿ ಸೆಲೂನ್ ಮಾಲಕ  ಮೋಹನ್ ಅವರ ಪುತ್ರಿ 13 ವರ್ಷದ ನೇತ್ರಾ ಎಂಬಾಕೆಯನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ಶಾಂತಿ ಸಂಘಟನೆ (UNADAP) “ಬಡವರ ಸದ್ಭಾವನಾ ರಾಯಭಾರಿ“ಯಾಗಿ ನೇಮಕ ಮಾಡಲಾಗಿದೆ.

ತಮಿಳುನಾಡಿನ ಮಧುರೈಯಲ್ಲಿರುವ 13 ವರ್ಷದ ನೇತ್ರಾ, ಕೊರೊನಾ ವೈರಸ್ ಸಂದರ್ಭದಲ್ಲಿ ಬಡವರಿಗೆ 5 ಲಕ್ಷ ರೂಪಾಯಿಗಳನ್ನು ನೀಡುವಂತೆ ತನ್ನ ತಂದೆಗೆ ಮನವಿ ಮಾಡಿದ್ದಳು. ನೇತ್ರಾಳ ತಂದೆ ಸೆಲೂನ್ ನಡೆಸುತ್ತಿದ್ದು ಮಗಳ ವಿದ್ಯಾಭ್ಯಾಸಕ್ಕಾಗಿ ಹಣ ಸಂಗ್ರಹಿಸಿದ್ದರು. ಕೊರೊನಾ ಲಾಕ್ಡೌನ್ ಸಂದರ್ಭ ಬಡವರ ಸಂಕಷ್ಟ ನೋಡಿದ ನೇತ್ರಾ ನಾಗರಿಕ ಸೇವೆ ಮಾಡಲು ತನ್ನ ವಿದ್ಯಾಭ್ಯಾಸಕ್ಕಾಗಿ ಸಂಗ್ರಹಿಸಿದ್ದ ಹಣವನ್ನು  ನೀಡುವಂತೆ ತಂದೆಯಲ್ಲಿ  ಮನವಿ ಮಾಡಿದ್ದಳು. ಇದಕ್ಕೆ ಸ್ಪಂದಿಸಿದ ಮನೆಯವರು ಮಗಳ ಬೇಡಿಕೆಯನ್ನು  ಈಡೇರಿಸಲು ಮೋಹನ್ ಅವರು ತಮ್ಮ ಮಗಳ ಶಿಕ್ಷಣಕ್ಕಾಗಿ ಉಳಿಸಿದ ಹಣವನ್ನು ಬಳಸಿಕೊಂಡು ಲಾಕ್ಡೌನ್ ಮಧ್ಯೆ 600 ಕ್ಕೂ ಹೆಚ್ಚು ಕುಟುಂಬಗಳಿಗೆ ಅಗತ್ಯ  ವಸ್ತುಗಳನ್ನು ಒದಗಿಸಿದರು. ಇದರ ಫಲವಾಗಿ ಇದೀಗ ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ಶಾಂತಿ ಸಂಘಟನೆ (UNADAP) “ಬಡವರ ಸದ್ಭಾವನಾ ರಾಯಭಾರಿ“ಯಾಗಿ ನೇತ್ರಾಳನ್ನು  ನೇಮಕ ಮಾಡಿದೆ.

ನ್ಯೂಯಾರ್ಕ್‌ನಲ್ಲಿ ನಡೆಯುವ ವಿಶ್ವಸಂಸ್ಥೆಯ (ಯುಎನ್) ಸಮಾವೇಶಗಳಲ್ಲಿ ಮತ್ತು ಜಿನೀವಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ   ಮಾತನಾಡಲು ನೇತ್ರಾಗೆ ಅವಕಾಶ ನೀಡಲಾಗುವುದು ಎಂದು ಯುಎನ್‌ಎಡಿಎಪಿ ಘೋಷಣೆ ಮಾಡಿದೆ.  ಇದೇ ಸಂದರ್ಭ ವಿಶ್ವ ನಾಯಕರು, ಶಿಕ್ಷಣ ತಜ್ಞರು, ರಾಜಕಾರಣಿಗಳು ಮತ್ತು ನಾಗರಿಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಮಾತನಾಡಲು ಆಕೆಗೆ ಅವಕಾಶ ಮತ್ತು ಜವಾಬ್ದಾರಿಯನ್ನು ನೀಡುತ್ತದೆ ಎಂದು ಸಂಸ್ಥೆ ಹೇಳಿದೆ, ಇನ್ನಷ್ಟು ಬಡವರನ್ನು ತಲುಪಲು ಸಹಕಾರ ಮಾಡಲಾಗುತ್ತದೆ ಎಂದೂ ಹೇಳಿದೆ.

ಕೊರೊನಾ ಲಾಕ್ಡೌನ್ ಸಂದರ್ಭ ಎರಡು ತಿಂಗಳುಗಳ ಕಾಲ ಸೆಲೂನ್ ಮುಚ್ಚಲಾಗಿತ್ತು, ಯಾವುದೇ ಆದಾಯ ಇರಲಿಲ್ಲ. ಹೀಗಿದ್ದರೂ ಈ ನಿಸ್ವಾರ್ಥ ಸೇವೆ ಮಾಡಿರುವ ಇವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು “ಮನ್ ಕಿ ಬಾತ್”  ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದರು.

Advertisement

ಇದೀಗ 13 ವರ್ಷದ ನೇತ್ರಾ ಸೇವೆಯ ಮೂಲಕ  ಗ್ರಾಮ ಮಟ್ಟದಿಂದ ದೇಶ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟಕ್ಕೆ ಏರಿದ್ದಾಳೆ.

 


Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ವಾಯುಭಾರ ಕುಸಿತ | ಕೇರಳದಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ | ಆರು ಜಿಲ್ಲೆಗಳಲ್ಲಿ ಎಲ್ಲೋ ಎಲರ್ಟ್‌ | ರಾಜ್ಯದಲ್ಲೂ ಮಳೆ ಸಾಧ್ಯತೆ |
May 17, 2025
8:27 PM
by: ದ ರೂರಲ್ ಮಿರರ್.ಕಾಂ
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ
ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ
May 16, 2025
9:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group