ಕಡಬ: ತಾಲೂಕು ಕೇಂದ್ರ ಕಡಬ ಪೇಟೆಯಲ್ಲಿರುವ ಪಂಚಾಯತ್ 2 ಪ್ರಯಾಣಿಕರ ತಂಗುದಾಣದ ಪೈಕಿ ದೈವಗಳ ಮಾಡದ ಬಳಿ ಇರುವ ತಂಗುದಾಣ ಸಂಪೂರ್ಣವಾಗಿ ಶಿಥಿಲಗೊಂಡು ಯಾವುದೇ ಕ್ಷಣದಲ್ಲಿ ಕುಸಿದುಬೀಳುವ ಹಂತದಲ್ಲಿದೆ.
Advertisement
ಕಡಬ ತಾಲೂಕು ಕೇಂದ್ರವಾಗಿದ್ದರೂ ಇಲ್ಲಿ ಸುಸಜ್ಜಿತ ಬಸ್ ತಂಗುದಾಣವಿಲ್ಲ. ಕೆಎಸ್ಸಾರ್ಟಿಸಿ ವತಿಯಿಂದ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಪ್ರಾಥಮಿಕ ಪ್ರಕ್ರಿಯೆಗಳು ನಡೆದಿದೆಯಾದರೂ ಜಮೀನಿನ ಸಮಸ್ಯೆಯಿಂದಾಗಿ ಅದೂ ಕೂಡ ಸದ್ಯಕ್ಕೆ ಕಾರ್ಯರೂಪಕ್ಕೆ ಬರುವುದು ಸಂಶಯ. ಇದೀಗ ಇರುವ ಪ್ರಯಾಣಿಕರ ತಂಗುದಾಣವೂ ಕುಸಿದುಬೀಳುವ ಹಂತದಲ್ಲಿದೆ. ತಂಗುದಾಣದ ಛಾವಣಿಯ ಮರದ ಪಕ್ಕಾಸು ಹಾಗೂ ರೀಪುಗಳು ಶಿಥಿಲಗೊಂಡು ಮುರಿದುಹೋಗಿವೆ. ಅಲ್ಲಲ್ಲಿ ಹೆಂಚುಗಳು ಕೂಡ ಕೆಳಕ್ಕೆ ಬಿದ್ದು ಆಕಾಶ ಕಾಣಿಸುತ್ತಿದೆ. ಪ್ರಸ್ತುತ ಸಾರ್ವಜನಿಕರು ಇದೇ ತಂಗುದಾಣವನ್ನು ಬಳಸುತ್ತಿರುವುದರಿಂದ ಅಪಾಯ ಸಂಭವಿಸುವ ಸಾಧ್ಯತೆಗಳು ಕೂಡ ಹೆಚ್ಚಿವೆ. ಆದುದರಿಂದ ಕೂಡಲೇ ಪಂಚಾಯತ್ ಆಡಳಿತ ಈ ಕುರಿತು ಗಮನಹರಿಸಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement