ಬೆಳ್ಳಾರೆ: ಇಲ್ಲಿನ ಶ್ರೀ ಸದಾಶಿವ ಶಿಶುಮಂದಿರದ ಪ್ರಾಯೋಜಕತ್ವದಲ್ಲಿ ಕೀ ಬೋರ್ಡ್ ತರಗತಿ ಪ್ರಾರಂಭವಾಯಿತು. ಶಿಶುಮಂದಿರ ಸಂಚಾಲಕ ಪಿ. ಮಹಾಲಿಂಗ ಭಟ್ ಕುರುಂಬುಡೇಲು ದೀಪ ಬೆಳಗಿ ಶುಭಹಾರೈಸಿದರು.
ಸಭಾಧ್ಯಕ್ಷತೆಯೊಂದಿಗೆ ಸ್ವಾಗತಿಸಿ ಮಾತನಾಡಿದ ಶಿಶುಮಂದಿರದ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಜೋಶಿ ಕೀ ಬೋರ್ಡ್ ನುಡಿಸುವುದರಿಂದ ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳು ಬೆಳಗಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಪ್ರಸ್ತುತ ಕೀ ಬೋರ್ಡ್ ತರಬೇತಿಗೆ ಉತ್ತಮ ಬೇಡಿಕೆ ಇದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕೀ ಬೋಡ್ ತರಬೇತಿಯ ಗುರು ಪುತ್ತೂರಿನ ಬಾಬು ಅವರು ಈ ಕಲೆಯ ಗಾಯನ, ಸಂಗೀತದ ಮಟ್ಟವನ್ನು ಹೆಚ್ಚಿಸುತ್ತದೆ ಎಂದರು. ಅದರೊಂದಿಗೆ ಶಿಶುಮಂದಿರದಲ್ಲಿ ವಾರದ ಪ್ರತಿ ಬುಧವಾರ ಸಂಜೆ 5ರಿಂದ 7ರ ತನಕ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸ್ವಾತಿ ಆರ್. ಭಟ್ ಕುರುಂಬಡೇಲು ವಂದಿಸಿದರು. ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel