ಸಂಪಾಜೆ: ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವ ನಡೆಯಿತು.
ಕೊಯನಾಡು ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಶ್ರೀ ಗಣೇಶ ಯುವ ಬಳಗ ಇದರ ಆಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸ್ಥಳೀಯರಿಗೆ ಕ್ರೀಡೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕ್ರೀಡೋತ್ಸವದ ಧ್ವಜಾರೋಹಣವನ್ನು ದೇವಸ್ಥಾನದ ಅಧ್ಯಕ್ಷರಾದ ಪಿ.ಡಿ.ವಿಶ್ವನಾಥ್ ನೆರವೇರಿಸಿದರು ಹಾಗೂ ಸಂಪಾಜೆ ಗ್ರಾಮ ಅಭಿವೃದ್ಧಿಯ ಹರಿಕಾರ ದಿವಂಗತ ಬಾಲಚಂದ್ರ ಕಳಗಿರವರ ಸ್ಮರಣೆ ಮಾಡುತ್ತ ಸ್ಥಳೀಯ ರಸ್ತೆಗಳಿಗೆ ನಾಮಪಲಕವನ್ನು ನಿರ್ಮಾಣ ಮಾಡಿ ನಾಮಪಲಕದ ಅನಾವರಣವನ್ನು ಬಾಲಚಂದ್ರ ಕಳಗಿಯವರ ತಂದೆಯವರಾದ ಕಳಗಿ ವೆಂಕಪ್ಪರವರು ಫಲಕ ಅನಾವರಣ ನೆರವೇರಿಸಿದರು. ನಂತರ ಸ್ಥಳೀಯರಿಗೆ ಕ್ರೀಡಾಕೂಟ ನೆರವೇರಿತು. ಶ್ರೀ ದೇವರಿಗೆ ದೀಪಾರಾಧನೆಗೊಂಡು ಸಂಜೆ ಸಭಾ ಕಾರ್ಯಕ್ರಮವು ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಪೆಲತಡ್ಕ ವಿಶ್ವನಾಥ್ ರವರ ಅಧ್ಯಕ್ಷತೆಯಲ್ಲಿ ನಡೆಯತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಮಹಾಗಣಪತಿ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಉಲ್ಲಾಸ್ ಕೇನಾಜೆ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಮಾರ್ ಚೆದ್ಕಾರ್, ದೇವತಾರಾಧನ ಸಮಿತಿಯ ಅಧ್ಯಕ್ಷರಾದ ಬಿ.ಆರ್.ಶಿವರಾಮ್, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಬಿ ಆರ್ ಸುಂದರ್ , ಗಣೇಶ ಯುವ ಬಳಗದ ಅಧ್ಯಕ್ಷರಾದ ಪರ್ಮಲೆ ಜಗದೀಶ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ರಮಾದೇವಿ ಬಾಲಚಂದ್ರ ಕಳಗಿ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ರಾಜಾರಾಮ್ ಕಳಗಿ, ಅರೇಕಲ್ಲು ಶ್ರೀ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷರಾದ ಸುಂದರ.ಎ. ಕೆ, ದೇವರಕೊಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಕುಂಞರಾಮ, ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷರಾದ ಸೇಂದಿಲ್ ಕುಮಾರ್, ಚೆಡಾವು ಬಾಲಸುಬ್ರಮಣ್ಯ ದೇವಸ್ಥಾನದ ಅಧ್ಯಕ್ಷರಾದ ಸುಬ್ರಹ್ಮಣ್ಯ ಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಪುಷ್ಪಾವತಿ, ಗಣೇಶ್ ಯುವ ಬಳಗದ ಮಾಜಿ ಅಧ್ಯಕ್ಷರಾದ ನವೀನ್ ಕುಮಾರ್, ಅದ್ವೈತ ಹುಂಡಾಯಿ ಮಡಿಕೇರಿಯ ವ್ಯವಸ್ಥಾಪಕರಾದ ವೀರೇಂದ್ರ ಕೇನಾಜೆ, ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ದೇರಣ್ಣ ದೇವರಗುಂಡ, ನಡುಬೆಟ್ಟು ಪುಟ್ಟಪ್ಪ, ಪೆಲತಡ್ಕ ದಿನೇಶ್, ದೇವರಗುಂಡ ಲಿಂಗಪ್ಪರವರನ್ನು ಯುವ ಬಳಗದ ವತಿಯಿಂದ ಸನ್ಮಾನಿಸಲಾಯಿತು. ರಾತ್ರಿ ಹಿಂದೂ ಜನಜಾಗೃತಿ ಸಮಿತಿ ಸಾಧಕರಿಂದ ಧಾರ್ಮಿಕ ಉಪನ್ಯಾಸ ಹಾಗೂ ವಿವಿಧ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಶ್ರೀ ರಾಗ್ ಮ್ಯೂಸಿಕ್ ಪುತ್ತೂರು ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.