ಸಂಪಾಜೆ: ಸಂಪಾಜೆ ವಲಯ ಮಟ್ಟದ ದೈವಾರಾಧಕರ ಹಾಗೂ ಪರಿಚಾರಕ ವರ್ಗದ ಸಭೆಯು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಅಕ್ಷಯ ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.
ಸಭೆಯಲ್ಲಿ ಸಂಪಾಜೆ, ಅರಂತೋಡು ಹಾಗೂ ತೊಡಿಕಾನ ಗ್ರಾಮಗಳ ಸುಮಾರು 50ಕ್ಕೂ ಮಿಕ್ಕಿ ದೈವಾರಾಧಕ ಸಮಿತಿಯ ಸದಸ್ಯರು, ಮತ್ತು ಸಂಪಾಜೆ ವಲಯ ಮಟ್ಟದ ವ್ಯಾಪ್ತಿಯ ಪರಿಚಾರಕ ವರ್ಗದವರು ಹಾಜರಿದ್ದರು. ಸಭೆಯಲ್ಲಿ ಪ್ರಮುಖವಾಗಿ ಭೂತಾರಾಧನೆ, ಕೋಲದ ಸಮಯದಲ್ಲಿ ಹಾಗೂ ಇತರ ಶುಭ ಸಮಾರಂಭಗಳಲ್ಲಿ ಪರಿಚಾರಕ ವರ್ಗದವರ ಸಂಭಾವನೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು.
ವೇದಿಕೆಯಲ್ಲಿ ದೈವಾರಾಧಕರ ಸಮಿತಿ ಗೌರವಾಧ್ಯಕ್ಷರಾದ ಪಿ.ಬಿ.ದಿವಾಕರ ರೈ, ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ, ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್ ಉಳುವಾರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ ಹಾಗೂ ವ್ಯವಸ್ಥಾಪಕರಾದ ಆನಂದ ಕಲ್ಲಗದ್ದೆ ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel