ಸುಳ್ಯ: ನಮ್ಮತನ ಕಳೆದುಕೊಳ್ಳದ ಸತ್ಸಂಗದಿಂದ ಸಂಸ್ಕಾರ ಮೂಡುತ್ತದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.
ಅವರು ಬುಧವಾರ ಕುರುಂಜಿಭಾಗ್‍ನಲ್ಲಿ ಡಾ.ಡಿ.ವಿ.ಲೀಲಾಧರ್ ಅವರ ಶ್ರೀವಿಷ್ಣು ಗೃಹ ಮತ್ತು ಗೃಹ ಸಮುಚ್ಚಯದ ಗುರುಪ್ರವೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮನೆಯಿಂದಲೇ ಸಂಸ್ಕಾರ ಆರಂಭ. ಆ ಮನೆ ಮತ್ತು ಮನೆ ಮಂದಿಯಲ್ಲಿ ಸಂಸ್ಕಾರ ಇದ್ದಾಗ ಮನೆಗೆ ಬಂದವರಿಗೂ ಅದು ವೇದ್ಯವಾಗಿ ಅವರು ಸಂಸ್ಕಾರವಂತರಾಗಲು ಅವಕಾಶ ದೊರಕುತ್ತದೆ ಎಂದು ಡಾ.ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.
ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳಾದ ಧರ್ಮಪಾಲನಾಥ ಸ್ವಾಮೀಜಿ, ಗುಣನಾಥ ಸ್ವಾಮೀಜಿ, ಮಂಗಳನಾಥ ಸ್ವಾಮೀಜಿ, ಶಿವಾನಂದನಾಥ ಸ್ವಾಮೀಜಿ, ಚಂದ್ರಶೇಖರನಾಥ ಸ್ವಾಮೀಜಿ, ಶ್ರೀಶೈಲಾನಂದಾನಾಥ ಸ್ವಾಮೀಜಿ, ಶಾಸಕ ಸಂಜೀವ ಮಠಂದೂರು, ಅಕಾಡೆಮಿ ಆಫ್ ಲಿಬರಲ್ ಆಫ್ ಎಜುಕೇಶನ್ ಡಾ.ಕೆ.ವಿ.ಚಿದಾನಂದ, ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ.ರೇಣುಕಾಪ್ರಸಾದ್, ಸಮುಚ್ಚಯದ ಡಿ.ಕೆ.ವೀರಪ್ಪ ಗೌಡ, ಡಿ.ವಿ.ಸತೀಶ್, ಡಾ.ಲೀಲಾಧರ್ ಇದ್ದರು. ಕೆ.ಆರ್.ಗಂಗಾಧರ್ ಪ್ರಸ್ತಾವಿಕ ಮಾತನಾಡಿದರು.