ಸರ್ವಧರ್ಮಿಯರಿಗೂ ಗುರುಗಳಾಗಿದ್ದ ಪೇಜಾವರ ಶ್ರೀಗಳು – ಡಾ|ಡಿ.ವೀರೇಂದ್ರ ಹೆಗ್ಗಡೆ

December 29, 2019
5:01 PM

ಧರ್ಮಸ್ಥಳ: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪರಂಧಾಮ ಸಂದರ್ಭದಲ್ಲಿ ನಾವು ಅವರನ್ನು ಕಳೆದುಕೊಂಡು ಬಡವಾಗಿದ್ದೇವೆ. ಸರ್ವಧರ್ಮಿಯರಿಗೂ ಗುರುಗಳಾಗಿ, ಆಚಾರ್ಯರಾಗಿ, ಮಾರ್ಗದರ್ಶಕರಾಗಿ, ಪ್ರೇರಕರಾಗಿಆತ್ಮೀಯರಾಗಿಅವರು ಸತತ ಮಾರ್ಗದರ್ಶನ ನೀಡಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಶ್ರೀಗಳು ಭಾರತದಾದ್ಯಂತ “ವಿಶ್ವಸಂಚಾರಿ”ಯಾಗಿ ತಮ್ಮ ದೇಹವನ್ನು ಶ್ರೇಷ್ಠ ರೀತಿಯಲ್ಲಿ ಬಳಸಿಕೊಂಡಿದ್ದಾರೆ. ಅಂದರೆ, ಅವರ ಬದುಕಿನ ಸಂದೇಶವೇ “ಮಾನವ ದೇಹ ಅನ್ನುವುದು ಒಂದು ಯಂತ್ರ, ಉಪಕರಣ ಮತ್ತು ಇಹ-ಪರಗಳ ಸಾಧನೆಗೆಒಂದು ಮಾಧ್ಯಮ”. ಈ ದೇಹದ ಪೋಷಣೆಗಾಗಿ, ಸುಖಕ್ಕಾಗಿ, ಪ್ರತಿಯೊಬ್ಬ ವ್ಯಕ್ತಿಯೂತನ್ನಎಲ್ಲಾ ಸಮಯವನ್ನು, ಸಂಪತ್ತನ್ನು ಮತ್ತು ಸಹವಾಸವನ್ನುಉಪಯೋಗಿಸುತ್ತಾನೆ. ಅದಕ್ಕಾಗಿ ದೇಹಕ್ಕೆ ಸಾಕಷ್ಟು ವಿಶ್ರಾಂತಿಕೊಟ್ಟು, ದೀರ್ಘಾಯುಷಿಯಾಗುವ ಬಯಕೆ ವ್ಯಕ್ತಪಡಿಸುತ್ತಾನೆ.

ಆದರೆ, ಪೂಜ್ಯ ಪೇಜಾವರ ಶ್ರೀಗಳ ಸಂದೇಶವೆಂದರೆ, “ಬದುಕುಅಮೂಲ್ಯವಾದದ್ದು, ಅದನು ಹಾಳು ಮಾಡಬೇಡಿರೊ ಹುಚ್ಚಪ್ಪಗಳಿರಾ” ಎನ್ನುತ್ತಾಆಯುಷ್ಯದ ಪ್ರತಿಯೊಂದುಕ್ಷಣವನ್ನೂ ಸದುಪಯೋಗಪಡಿಸಿಕೊಂಡು ತಮ್ಮದೇಹವನ್ನು ಬಳಸಿದರು. ಅವರು ವಿಷ್ಣುವಿನಂತೆ “ದಶಾವತಾರ” ತಳೆದರು.ಮಠಾಧಿಪತಿಗಳಾಗಿ ಮಠದ ಕೈಂಕರ್ಯಗಳು, ಶ್ರೀ ಕೃಷ್ಣ ದೇವರ ಮತ್ತು ಮಠದಆರಾಧ್ಯ ದೇವರುಗಳ ಪೂಜೆ-ಪುನಸ್ಕಾರಗಳು, ಶಿಕ್ಷಣ ಕ್ಷೇತ್ರ, ವೈದ್ಯಕೀಯ ಹಾಗೂ ಸಾಮಾಜಿಕ ರಂಗಗಳಲ್ಲಿ ತಮ್ಮ ಸಮಯವನ್ನು ವಿನಿಯೋಗಿಸಿದರು.
ಶಿಷ್ಯರಿಗೆ ಧಾರ್ಮಿಕ ಪಾಠ-ಪ್ರವಚನಗಳನ್ನು ನೀಡುವುದರಲ್ಲಿ ಪೂಜ್ಯರಂತೆಯಾರೂ ಉದಾರಿಗಳಿಲ್ಲ.ನಿಷ್ಕಲ್ಮಶ ಹೃದಯದಿಂದ ಪೂರ್ತಿ ವಿದ್ಯಾದಾನ ಮಾಡಿದವರುಇನ್ನೊಬ್ಬರಿಲ್ಲ. ಮಠದಲ್ಲಿ ಮಾತ್ರವಲ್ಲದೆ, ಬೆಂಗಳೂರಿನ ವಿದ್ಯಾಪೀಠದಲ್ಲಿಯೂ ಶಿಷ್ಯರಿಗೆ ಪಾಠ ಬೋಧಿಸುವುದರಜೊತೆಗೆ ವಾಹನದಲ್ಲಿ ಸಂಚಾರ ಸಮಯದಲ್ಲಿಯೂಅವರು ನಿರಂತರ ಪಾಠ-ಪ್ರವಚನ ನಡೆಸುತ್ತಿದ್ದರು.

ಅವರ ಆಪ್ತರು ಹೇಳುವಂತೆ ದೀರ್ಘ ವಾಹನ ಸಂಚಾರ ಸಮಯದಲ್ಲಿ ಅಥವಾ ಅಲ್ಪ ವಾಹನ ಸಂಚಾರ ಸಮಯದಲ್ಲಿ,“ಕೇವಲ ಕೆಲವು ನಿಮಿಷಗಳಷ್ಟು ನಿಮ್ಮೊಂದಿಗೆಮಾತನಾಡುತ್ತೇನೆ, ಉಳಿದ ಸಮಯ ಶಿಷ್ಯರಿಗೆ ಪಾಠ ಹೇಳಿ ಕೊಡುತ್ತೇನೆ. ಮಧ್ಯೆಯಾರೂ ನನ್ನ ಗಮನ ಸೆಳೆಯ ಬೇಡಿ”ಎನ್ನುತ್ತಿದ್ದರಂತೆ.ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಯೆ, ಪತಿತೋದ್ಧಾರದ ಬಗ್ಯೆಅವರ ಕಾಳಜಿ ವಿಶ್ವಕ್ಕೆ ಮಾದರಿಯಾಗಿದೆ.

ರಾಮಜನ್ಮಭೂಮಿ ಬಗ್ಯೆ ಸುಪ್ರಿಂಕೋರ್ಟುತೀರ್ಪು ಪ್ರಕಟವಾದಾಗಅವರ ಅನೇಕ ವರ್ಷಗಳ ಪ್ರಾರ್ಥನೆ ಮತ್ತು ಆ ವಿಷಯದಲ್ಲಿಅವರು ನೀಡಿದ ಸಲಹೆ-ಸೂಚನೆಗಳು ಕಾರ್ಯಗತವಾದ ಬಗ್ಯೆ ಪೂಜ್ಯರು ಸಂತೋಷ ಪಟ್ಟರು.

ಧರ್ಮಸ್ಥಳ ಕ್ಷೇತ್ರದ ಚಟುವಟಿಕೆಗಳಲ್ಲಿ, ವಿಶೇಷವಾಗಿ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ನಾವು ಅವರಿಂದ ಪ್ರೇರಣೆ ಪಡೆದಿದ್ದೇವೆ. ಧಾರವಾಡದಜನತಾ ಶಿಕ್ಷಣ ಸಮಿತಿಯಂತೆ ನಮ್ಮರಾಜ್ಯದಮತ್ತುರಾಷ್ಟ್ರದ ಅನೇಕ ಸಮಸ್ಯಾತ್ಮಕ, ಸಂಘಟನಾತ್ಮಕ ಮತ್ತುಆರ್ಥಿಕ ಸಂಕಷ್ಟಕ್ಕೊಳಗಾದ ಸಂಸ್ಥೆಗಳಿಗೆ ಪೂಜ್ಯರು ಮಾರ್ಗದರ್ಶನ ನೀಡಿಕಾಯಕಲ್ಪಕೊಟ್ಟು ಪುನರುಜ್ಜೀವನಗೊಳಿಸಿದ್ದಾರೆ.

ವೈಯಕ್ತಕಅಭಿಪ್ರಾಯದಂತೆ ಪೂಜ್ಯ ಶ್ರೀಗಳು ನನ್ನಜೊತೆ ಮತ್ತು ನಮ್ಮಜೊತೆಎಂದೂಇರುತ್ತಾರೆ.ಅವರ ಭೌತಿಕದೇಹ ನಮ್ಮ ಮುಂದೆಇರದಿದ್ದರೂ, ಅವರೊಂದಿಗೆ ಕಳೆದ ಪ್ರತಿಒಂದುಕ್ಷಣವೂಅಮೂಲ್ಯವಾದದ್ದು ಮತ್ತು ಸ್ಮರಣೀಯವಾದದ್ದುಎಂದು ಪೂಜ್ಯರಿಗೆ ನನ್ನ ನುಡಿನಮನಗಳನ್ನು ಹಾಗೂ ನಮ್ಮಕುಟುಂಬದ ಪರವಾಗಿ ಭಕ್ತಿಪೂರ್ವಕ ಪ್ರಣಾಮಗಳೊಂದಿಗೆ ಗೌರವವನ್ನುಅರ್ಪಿಸುತ್ತೇನೆ ಎಂದು ಡಾ|ಡಿ. ವೀರೇಂದ್ರ ಹೆಗ್ಗಡೆಯವರು ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 26-04-2026 | ಸದ್ಯ ಸೆಖೆಯ ಉಗ್ರ ರೂಪ…! ಏಪ್ರಿಲ್ 28 ರಿಂದ ರಾಜ್ಯಾದ್ಯಂತ ಮಳೆ ಸಾಧ್ಯತೆ
April 26, 2026
1:54 PM
by: ಸಾಯಿಶೇಖರ್ ಕರಿಕಳ
ಅಡಿಕೆ ಎಲೆಚುಕ್ಕೆರೋಗ – ಸಿಪಿಸಿಆರ್‌ಐ ನೇತೃತ್ವದಲ್ಲಿ ಸುಳ್ಯದ ಗುತ್ತಿಗಾರಿನಲ್ಲಿ ಸಂವಾದ
April 26, 2026
7:33 AM
by: ದ ರೂರಲ್ ಮಿರರ್.ಕಾಂ
2026 ಎಲ್ ನಿನೊ ಎಚ್ಚರಿಕೆ..! ಭಾರತ ಸೇರಿ ಏಷ್ಯಾದಲ್ಲಿ ಬರ-ಬಿಸಿಲಿನ ಡಬಲ್ ಶಾಕ್
April 25, 2026
9:16 PM
by: ದ ರೂರಲ್ ಮಿರರ್.ಕಾಂ
ಭಾರೀ ಬಿಸಿ ಹೊಡೆತ..! ಜಗತ್ತಿನ 1 ಬಿಲಿಯನ್ ಜನರ ಬದುಕಿಗೆ ಬಿಸಿ ಹೊಡೆತ
April 25, 2026
9:04 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror