ಸವಣೂರು : ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕಳೆದ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಅಖಿಲಾ ಕೆಡೆಂಜಿ, ಫಾತಿಮತ್ ಸಂಬ್ರೀನಾ ಕಾಯರ್ಗ, ಶ್ರೀಶ ಉಳವ, ರಾಮ ಶ್ರೀನಿ, ವರ್ಷಾ ರೈ, ಅಕ್ಷರಾ ಅಭಿಕಾರ್, ಶ್ರದ್ಧಾ ಎನ್.ಕೆ., ಬಿಂದುಶ್ರೀ, ಭಾಗ್ಯಾ ಕೆ., ಅಖೀಲ್, ಪಿಯುಸಿ ವಿದ್ಯಾರ್ಥಿಗಳಾದ ಜ್ಯೋತಿ, ಆರೀಫ್, ದೀಪಶ್ರೀ, ನವ್ಯಾ ರೈ, ಪಾವನಾ ಕೆ.ಬಿ., ರಾಜೇಶ್ವರಿ, ಅನುಶ್ರೀ, ಶಾನ್ಯಾ ಪಿ. ಶೆಟ್ಟಿ, ಪದವಿ ವಿದ್ಯಾರ್ಥಿಗಳಾದ ನಿತ್ಯಾ, ಯಶೋಧರ್, ಫಾತಿಮತ್ ಅಶೂರ, ಮರಿಯಮ್ ಮುಬೀನ ಅವರನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು.
ಸಮ್ಮಾನ: ರಾಜ್ಯ ಗ್ರಾಹಕ ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ಸಂಘದ ನಿರ್ದೇಶಕ ಉದಯ ರೈ ಮಾದೋಡಿ ಹಾಗೂ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅವರನ್ನು ಸಮ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಗಣೇಶ ನಿಡ್ವಣ್ಣಾಯ,ಸಿಇಒ ಚಂದ್ರಶೇಖರ್ ಪಿ, ಉಪಾಧ್ಯಕ್ಷ ತಾರಾನಾಥ ಕಾಯರ್ಗ,ನಿರ್ದೇಶಕರಾದ ಕರುಣಾಕರ ಪೂಜಾರಿ ಪಟ್ಟೆ, ಮಹಾಬಲ ಶೆಟ್ಟಿ ಕೊಮ್ಮಂಡ, ತಿಮ್ಮಪ್ಪ ಗೌಡ ಮುಂಡಾಳ, ಚೇತನ್ ಕುಮಾರ್ ಕೋಡಿಬೈಲು, ಸೋಮನಾಥ ಕನ್ಯಾಮಂಗಲ, ತನಿಯಪ್ಪ ನಾಯ್ಕ ಕಾರ್ಲಾಡಿ, ನಾರಾಯಣ ಗೌಡ ಪೂವ, ವೇದಾವತಿ ಕೆಡೆಂಜಿ, ನಿರ್ಮಲಾ ಕೇಶವ ಅಮೈ , ಉಪ ಕಾರ್ಯನಿರ್ವಹಣಾಧಿಕಾರಿ ಕುಸುಮಾ ಪಿ. ಶೆಟ್ಟಿ,ಶಾಖಾ ವ್ಯವಸ್ಥಾಪಕಿ ಬೇಬಿ ಜೆ. ರೈ,ಸಿಬಂದಿ ಜಲಜಾ ಎಚ್. ರೈ, ಪವಿತ್ರಾ, ಪಕೀರ, ಕೇಪು, ಲೇಖಲತಾ, ಪೂವಪ್ಪ, ಗಣೇಶ್, ಮನೋಜ್, ಪ್ರಕಾಶ್, ಸಂಘದ ಪಿಗ್ಮಿ ಸಂಗ್ರಾಹಕರಾದ ಸದಾನಂದ ಆಳ್ವ, ವಿಶ್ವನಾಥ ಗೌಡ ಮೊದಲಾದವರಿದ್ದರು.