ಸಹಾಯವಾದ ಟ್ರಕ್ಕಿಂಗ್ ಟ್ರಿಕ್ಸ್ : ಯುವಕ ಸುರಕ್ಷಿತವಾಗಿ ಸುಬ್ರಹ್ಮಣ್ಯ ಸೇರಿದ…!

September 17, 2019
1:25 PM

ಸುಬ್ರಹ್ಮಣ್ಯ: ಕುಮಾರಪರ್ವತ ಚಾರಣಕ್ಕೆ ಹೋದ 12 ಜನ  ಯುವಕರ ತಂಡದಲ್ಲಿದ್ದ ಬೆಂಗಳೂರಿನ ಖಾಸಗಿ ಉದ್ಯೋಗಿ ಬೆಂಗಳೂರು ಗಾಯತ್ರಿ ನಗರದ ನಿವಾಸಿ 25 ವರ್ಷದ ಯುವಕ ಸಂತೋಷ್ ಸುರಕ್ಷಿತವಾಗಿ ಸುಬ್ರಹ್ಮಣ್ಯ ತಲಪಿದ್ದಾರೆ. ಹೀಗಾಗಿ ಎರಡು ದಿನ ಸ್ಥಳೀಯರಿಗೂ , ಇಲಾಖೆಗಳಿಗೂ ಸಂತೋಷ್ ಕುಟುಂಬದ ಆತಂಕ ದೂರ ಮಾಡಿದ್ದ.

ಜೊತೆಯಾಗಿಯೇ ಎಲ್ಲರೂ ಬರುತ್ತಿದ್ದಾಗ ಮಳೆ ಹಿನ್ನೆಲೆಯಲ್ಲಿ ಜಾಕೆಟ್ ಬದಲಿಸುವ ವೇಳೆ ಸ್ವಲ್ಪ ಹಿಂದೆ ಉಳಿದ ಸಂತೋಷ್ ದಾರಿ ತಪ್ಪಿದ್ದರು. ಹೀಗಾಗಿ ಎರಡು ದಿನಗಳ ಬಳಿಕ ಸುಬ್ರಹ್ಮಣ್ಯ ಸೇರಿದರು. ಟ್ರಕ್ಕಿಂಗ್ ಟ್ರಿಕ್ಸ್ ಅರಿತಿರುವ ಎಲ್ಲರೂ ಕೂಡಾ ಪ್ರಾಣಿಗಳ ಭಯ ಇಲ್ಲದೇ ಇದ್ದರೆ ಹಾಗೂ ಊರಿನ ಹತ್ತಿರ ಇದ್ದರೆ ಸುರಕ್ಷಿತವಾಗಿ ಸೇರಲು ಸಾಧ್ಯವಿದೆ. ಇಲ್ಲೂ ಯುವಕ ಸಂತೋಷ್ ಅದೇ ದಾರಿಯಲ್ಲಿ ಸುರಕ್ಷಿತವಾಗಿ ಸೇರಿದ್ದಾರೆ. ಕಾಡಿನೊಳಗೆ ದಾರಿ ತಪ್ಪಿದರೆ ಮೊದಲು ನೀರಿನ ಮೂಲ ನೋಡಿದ ಬಳಿಕ ಹೊಳೆ ಹರಿದಂತೆ ಸಾಗಿದರೆ ಯಾವುದಾದರೊಂದು ಊರು ಸೇರುವುದು  ನಿಶ್ಚಿತ. ಇಲ್ಲೂ ಯುವಕ ಸಂತೋಷ್ ದಾರಿ ತಪ್ಪಿದ ಬಳಿಕ ನೀರನ್ನು ಹುಡುಕಿದಾಗ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ನೀರಿನ ಪೈಪ್ ಲಭ್ಯವಾದ ಬಳಿಕ ಅದೇ ದಾರಿಯಲ್ಲಿ  ಬಂದು ಕುಕ್ಕೆ ಸುಬ್ರಹ್ಮಣ್ಯ ತಲಪಿದ್ದಾನೆ. ಹೀಗಾಗಿ ಆತಂಕ ದೂರವಾಗಿದೆ.

ಗಿರಿಗದ್ದೆಯಿಂದ ಸುಬ್ರಹ್ಮಣ್ಯದವರೆಗೆ ಇದುವರೆಗೆ ಯಾವುದೇ ಪ್ರಾಣಿಗಳ ಭಯ ಇದ್ದಿರಲಿಲ್ಲ. ಆನೆಗಳು ಓಡಾಟ ನಡೆಸಿದರೂ ಜೀವಕ್ಕೆ ಅಪಾಯ ಮಾಡಿದ ಘಟನೆ ನಡೆದಿರಲಿಲ್ಲ. ಪ್ರತಿದಿನವೂ ಗಿರಿಗದ್ದೆಯಿಂದ ಸುಬ್ರಹ್ಮಣ್ಯದವರೆಗೆ ಜನರ ಸಂಚಾರ ಇರುತ್ತದೆ. ಹೀಗಾಗಿ ಯುವಕ ದಾರಿ ತಪ್ಪಿ ಹೋಗಿರಬೇಕು ಎಂದು ಸ್ಥಳೀಯರು ಅಂದಾಜಿಸಿದ್ದರು. ಅದು ನಿಜವಾಯ್ತು.

ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಕೈಜೋಡಿಸಿದ್ದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ
March 5, 2026
12:20 PM
by: ಸಾಯಿಶೇಖರ್ ಕರಿಕಳ
ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ
March 5, 2026
11:44 AM
by: ದ ರೂರಲ್ ಮಿರರ್.ಕಾಂ
ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ
March 5, 2026
9:58 AM
by: ಮಿರರ್‌ ಡೆಸ್ಕ್
ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ
March 5, 2026
9:38 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror