ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿಯಲ್ಲೇ ಇದ್ದೇನೆ – ಕೃಪಾಶಂಕರ್ ತುದಿಯಡ್ಕ

July 21, 2019
9:15 AM
ಸುಳ್ಯ: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನದ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲರೂ ರಾಜೀನಾಮೆ ನೀಡುವಂತೆ ಬಿಜೆಪಿ ಹಾಗೂ ಸಂಘಪರಿವಾರ ನೀಡಿದ ಸೂಚನೆಯ ನಂತರ ಪಕ್ಷದ ಹಾಗೂ ಸಂಘಟನೆಯ ವಿವಿಧ ಜವಾಬ್ದಾರಿಯಿಂದ ಮುಕ್ತಿಗೊಳಿಸಿ ಮಂಡಲ ಬಿಜೆಪಿ ಹೇಳಿಕೆ ಬಳಿಕ  ಸುಳ್ಯನ್ಯೂಸ್.ಕಾಂ ಗೆ ಪ್ರತಿಕ್ರಿಯೆ ನೀಡಿದ ಆಲೆಟ್ಟಿ ಪ್ರಾ.ಕೃ.ಪ.ಸ.ಸಂಘದ.ಅಧ್ಯಕ್ಷ ಕೃಪಾಶಂಕರ ತುದಿಯಡ್ಕ, “ನಾನು ಬಿಜೆಪಿಯಲ್ಲೇ ಇದ್ದೇನೆ, ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ. ಪಕ್ಷದ ವಿರೋಧಿ, ಪಕ್ಷಾಂತರ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲ. ಸಹಕಾರಿ ಸಂಘಕ್ಕೆ ರಾಜೀನಾಮೆ ನೀಡಲು ಸ್ಥಾನೀಯ ಸಮಿತಿ ಅಥವಾ ಗ್ರಾಮ ಸಮಿತಿ ತೀರ್ಮಾನದ ಬಳಿಕವೇ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಆಲೆಟ್ಟಿ ಪ್ರಾ.ಕೃ.ಪ.ಸ.ಸಂಘದ.ಅಧ್ಯಕ್ಷ ಕೃಪಾಶಂಕರ ತುದಿಯಡ್ಕ ಅವರು ರಾಜೀನಾಮೆಯ ಕುರಿತು  ಸ್ಪಷ್ಟ ನಿಲುವು ವ್ಯಕ್ತಪಡಿಸಿ, ಸಹಕಾರಿ ಸಂಘಕ್ಕೆ ನಿರ್ದೇಶಕನನ್ನಾಗಿ ಗ್ರಾಮದ ಜನತೆ ಮತದಾನ ಮಾಡುವ ಮೂಲಕ ಜವಾಬ್ದಾರಿ ನೀಡಿದ್ದಾರೆ. ನಿರ್ದೇಶಕರು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ 5 ವರ್ಷದ ಅವಧಿಗೆ ಅಧಿಕಾರ ನೀಡಿದ್ದಾರೆ. ಅವಧಿ ಮುಗಿಯುವ ತನಕ ಅಧ್ಯಕ್ಷ ಸ್ಥಾನದಲ್ಲಿರುತ್ತೇನೆ ಹಾಗೂ ಒಂದು ವೇಳೆ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಗ್ರಾಮದ ಪಕ್ಷದ ಕಾರ್ಯಕರ್ತರು, ಸ್ಥಾನೀಯ ಸಮಿತಿ ರಾಜೀನಾಮೆ ನೀಡುವಂತೆ ಹೇಳಿದರೆ ರಾಜೀನಾಮೆ ನೀಡಲು ಬದ್ದನಾಗಿರುತ್ತೇನೆ.
ಸುಮಾರು 26 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷದ ವಿವಿಧ ಜವಾಬ್ದಾರಿಯನ್ನು ಸಂಘಟನೆಯ  ಮತ್ತು ಪಕ್ಷದ ಸೂಚನೆಯ ಪ್ರಕಾರ ನಿರ್ವಹಿಸಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದ ಜವಾಬ್ದಾರಿಯಿಂದ ವಿಮುಕ್ತಿಗೊಳಿಸುವುದಾದರೆ ಅದನ್ನು ಸ್ವಾಗತಿಸುತ್ತೇನೆ. ಪ್ರಸ್ತುತ ಪಕ್ಷದ ಜವಾಬ್ದಾರಿಯುತ ಹುದ್ದೆಯಲ್ಲಿಲ್ಲ. ವೈಯುಕ್ತಿಕವಾಗಿ ಹೇಳುವುದಾದರೆ ಪಕ್ಷದಿಂದ ಮತ್ತು ಸಂಘಟನೆಯಿಂದ ಸಮಾಜಮುಖಿಯಾಗಿ ಗುರುತಿಸಿಕೊಂಡಿದ್ದೇನೆ.ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುವ ಅವಕಾಶವು ಒದಗಿ ಬಂದಿದೆ ಅದಕ್ಕಾಗಿ ಸಂಘಟನೆಯ ಹಿರಿಯರಿಗೆ ಮತ್ತು ಪಕ್ಷದ ಪ್ರಮುಖರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಜ್ಯದ ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ʼದರ್ಶಿನಿʼ ವಿನೂತನ ಕಾರ್ಯಕ್ರಮಕ್ಕೆ  ಸರ್ಕಾರ ಚಾಲನೆ
February 7, 2025
7:21 AM
by: The Rural Mirror ಸುದ್ದಿಜಾಲ
‘ಜಲಾನಯನ ಯಾತ್ರೆ’ ಕುರುಡು ಮಲೆಯಲ್ಲಿ ಆರಂಭ
February 7, 2025
7:15 AM
by: The Rural Mirror ಸುದ್ದಿಜಾಲ
ದೇಶದ 25 ಸಾವಿರ ಗ್ರಾಮಗಳಲ್ಲಿ ಸಂಪರ್ಕ ಕಲ್ಪಿಸುವ ಕ್ರಮ  | 900 ಕ್ಕೂ ಅಧಿಕ ಗ್ರಾಮಗಳಲ್ಲಿ ಮೊಬೈಲ್‌ ಟವರ್‌ ಅಳವಡಿಕೆ |
February 7, 2025
7:10 AM
by: The Rural Mirror ಸುದ್ದಿಜಾಲ
ಕಪ್ಪತ ಗುಡ್ಡ ರಕ್ಷಣೆ ಕುರಿತು ಜಾಗೃತಿ | ಗುಡ್ಡದ ತಪ್ಪಲಿನ ಗ್ರಾಮಗಳಲ್ಲಿ ಜನಜಾಗೃತಿ
February 7, 2025
7:05 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror